ದ. ಕೊರಿಯಾ ರಾಯಭಾರಿಯಾದ್ರೂ ತಲೆಬಾಗಲೇಬೇಕು: ಭಾರತೀಯ ಸಂಪ್ರದಾಯದಂತೆ ಹೊಸ ಕಾರಿಗೆ ಪೂಜೆ

ಭಾರತದಲ್ಲಿರುವ ದಕ್ಷಿಣ ಕೊರಿಯಾದ ರಾಯಭಾರಿ ಚಾಂಗ್ ಜೇ-ಬೊಕ್ ಹೊಸ ಕಾರು ಖರೀದಿಸಿದ್ದಾರೆ. ಕಾರು ಎಲ್ಲರೂ ಖರೀದಿಸುತ್ತಾರೆ ಅದರಲ್ಲೇನಿದೆ ಅಂದುಕೊಂಡ್ರೆ ತಪ್ಪು, ದಕ್ಷಿಣ ಕೊರಿಯಾ ರಾಯಭಾರಿಯಾದ್ರೂ ಭಾರತೀಯ ಆಚರಣೆಗಳೊಂದಿಗೆ ತಮ್ಮ ಕಚೇರಿಯ ಎದರು ಪೂಜೆ ಸಲ್ಲಿಸಿದ ನಂತರವೇ ಐಷಾರಾಮಿ ಎಸ್‌ಯುವಿಗೆ ಚಾಲನೆ ನೀಡಲಾಯಿತು.

ಭಾರತದಲ್ಲಿನ ದಕ್ಷಿಣ ಕೊರಿಯಾದ ರಾಯಭಾರಿ ಜೆನೆಸಿಸ್ GV80 ಐಷಾರಾಮಿ SUV ಯನ್ನು ಖರೀದಿಸಿದ್ದಾರೆ. ಇದು ಹ್ಯುಂಡೈ ಹ್ಯುಂಡೈ ಮೋಟಾರ್ ಗ್ರೂಪ್‌ನ ಐಷಾರಾಮಿ ಕಾರ್ ವಿಭಾಗವಾದ ಜೆನೆಸಿಸ್‌ನಿಂದ ತಯಾರಿಸಲ್ಪಟ್ಟ ಮೊದಲ SUV GV80 ಆಗಿದೆ. ಇದು ಬಿಎಂಡಬ್ಲ್ಯು, ಬೆಂಝ್, ಆಡಿ ದಂತಹ ಕಾರುಗಳಿಗೆ ಪೈಪೋಟಿ ನೀಡುವ ಸಾಮರ್ಥ್ಯವನ್ನು ಹೊಂದಿದೆ.

south-korean-ambassador-did-puja-his-luxury-suv

ವಿವರವಾಗಿ ಹೇಳುವುದಾದರೆ ಜಾಗತಿಕ ಮಾರುಕಟ್ಟೆಗಳಲ್ಲಿ, Genesis GV80 ಐಷಾರಾಮಿ ವಿಭಾಗದ SUV ಗಳಾದ BMW X5, Mercedes GLE, Audi Q7 ನಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈ ಕಾರಿಗೆ ಭಾರೀ ಬೇಡಿಕೆ ಇದ್ದು, ಬರೋಬ್ಬರಿ ರೂ. 65 ಲಕ್ಷಕ್ಕಿಂತ ಹೆಚ್ಚು ಬೆಲೆಯನ್ನು ಹೊಂದಿದೆ. ಈ ಕಾರಿನ ಕುರಿತ ಇನ್ನೂ ಹಲವು ವಿಶೇಷತೆಗಳನ್ನು ಕೆಳಗೆ ನೋಡೊಣ.

ಜೆನೆಸಿಸ್ ಜಿವಿ80 ಎಸ್‌ಯುವಿಯ ಒಳಭಾಗವು ಐಷಾರಾಮಿ ಮತ್ತು ಹಲವಾರು ಆಧುನಿಕ ಸೌಕರ್ಯಗಳೊಂದಿಗೆ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದೆ. ಲೆಥೆರೆಟ್ ಡ್ಯಾಶ್‌ಬೋರ್ಡ್, 14.5-ಇಂಚಿನ ಬೃಹತ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದ್ದು, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಸಹ ಸಪೋರ್ಟ್ ಮಾಡುತ್ತದೆ. ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಹಿಂದೆ ದೊಡ್ಡ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಕೂಡ ಇದೆ.

south-korean-ambassador-did-puja-his-luxury-suv

ವೈಶಿಷ್ಟ್ಯಗಳನ್ನು ನೋಡುವುದಾದ್ರೆ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್, ಲೆಕ್ಸಿಕಾನ್ 21-ಸ್ಪೀಕರ್ ಪ್ರೀಮಿಯಂ ಆಡಿಯೊ ಸಿಸ್ಟಮ್, ಪ್ರೀಮಿಯಂ ನಪ್ಪಾ ಲೆದರ್ ಫಿನಿಶ್‌ಗೆ ಅಪ್‌ಗ್ರೇಡ್ ಮಾಡುವ ಆಯ್ಕೆಯೊಂದಿಗೆ ಲೆಥೆರೆಟ್ ಸೀಟ್‌ಗಳು, ಮ್ಯಾಟ್ ಫಿನಿಶ್ ವುಡ್ ಟ್ರಿಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಮಸಾಜ್ ಫಂಕ್ಷನಲಿಟಿ ಮತ್ತು 3-ಜೋನ್ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಡಿಸೈನ್ ಬಗ್ಗೆ ಹೇಳುವುದಾದ್ರೆ, ಜೆನೆಸಿಸ್ GV80 ಐಷಾರಾಮಿ SUV ಹ್ಯುಂಡೈ ಮೋಟಾರ್‌ನ M3 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ SUV ವಿನ್ಯಾಸವು ಕ್ರೋಮ್‌ನಲ್ಲಿ G-ಮ್ಯಾಟ್ರಿಕ್ಸ್ ಕ್ರೆಸ್ಟ್ ಗ್ರಿಲ್ ಮತ್ತು ಕ್ವಾಡ್ LED ಹೆಡ್‌ಲೈಟ್‌ಗಳು, ಟೈಲ್‌ಲೈಟ್‌ಗಳು ಮತ್ತು ಮೈಕೆಲಿನ್ ಟೈರ್‌ಗಳೊಂದಿಗೆ ಬೃಹತ್ 22-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. GV80 SUV ಯ ಒಟ್ಟಾರೆ ನೋಟವು ಬೆಂಟ್ಲಿ Bentayga SUV ಯನ್ನು ನೆನಪಿಸುತ್ತದೆ.

south-korean-ambassador-did-puja-his-luxury-suv

ಹುಡ್ ಅಡಿಯಲ್ಲಿ, GV80 ಐಷಾರಾಮಿ SUV ಅನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದರ 3.5-ಲೀಟರ್ ಟ್ವಿನ್-ಟರ್ಬೊ V6 ಡೀಸೆಲ್ ಎಂಜಿನ್, 375 ಎಚ್‌ಪಿ ಪವರ್ ಮತ್ತು 530 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. V6 ಎಂಜಿನ್ ಆರು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 100 ಕಿ.ಮೀ ವೇಗವನ್ನು ತಲುಪುತ್ತದೆ.

ಹಾಗೆಯೇ ಇದರಲ್ಲಿ 2.5-ಲೀಟರ್ 4 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಸಹ ಇದ್ದು, ಇದು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 300 ಎಚ್‌ಪಿ ಪವರ್ ಮತ್ತು 421 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಐಷಾರಾಮಿಯ ಜೊತೆಗೆ ಗರಿಷ್ಟ ಪವರ್ ಕೂಡ ನೀಡಿರುವುದು ಗಮನಿಸಬೇಕಾದ ಸಂಗತಿ.

ಸುರಕ್ಷತೆಯ ದೃಷ್ಟಿಯಿಂದ, GV80 ಹಲವಾರು ವೈಶಿಷ್ಟ್ಯಗಳನ್ನು ನೀಡುತ್ತದೆ. ಲೇನ್ ಡಿಪಾರ್ಚರ್ ವಾರ್ನಿಂಗ್, ಫಾರ್ವರ್ಡ್ ಡಿಪಾರ್ಚರ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್, ರಿಯರ್ ಕ್ರಾಸ್-ಟ್ರಾಫಿಕ್ ಡಿಕ್ಕಿ ಅವಾಯ್ಡೆನ್ಸ್-ಅಸಿಸ್ಟ್, ಬ್ಲೈಂಡ್-ಸ್ಪಾಟ್ ಕೊಲಿಶನ್ ಅವಾಯ್ಡೆನ್ಸ್-ಅಸಿಸ್ಟ್, ಸ್ಮಾರ್ಟ್ ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಡೈನಾಮಿಕ್ ಮಾರ್ಗಸೂಚಿಗಳೊಂದಿಗೆ ರಿಯರ್‌ವ್ಯೂ ಕ್ಯಾಮೆರಾದಂತಹ ಆಧುನಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Article Published On: Thursday, September 28, 2023, 11:39 [IST]
English summary
South korean ambassador did puja his luxury suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+