ಹೋಂಡಾ ಸೂಪರ್ ಬೈಕ್ ಬೆಲೆ 17.5 ಲಕ್ಷ

ಈ ಬೈಕ್ ನ ದೆಹಲಿ ಎಕ್ಸ್ ಶೋ ರೂಮ್ ಬೆಲೆ 17.5 ಲಕ್ಷ ರುಪಾಯಿಗಳಾಗಿವೆ. ಈ ಸೂಪರ್ ಬೈಕ್ 1237 cc ಸಾಮರ್ಥ್ಯದ V4ಎಂಜಿನ್ ಹೊಂದಿದೆ. ಸುಜುಕಿಯ ಹಯಾಬುಸ, ಕವಾಸಾಕಿಯ ನಿಂಜಾ ಸರಣಿಯ ಸೂಪರ್ ಬೈಕ್ ಗಳು ಹೀಗಾಗಲೇ ಭಾರತದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಇವುಗಳೊಡನೆ ಹೋಂಡಾದ ಸೂಪರ್ ಬೈಕ್ ಸ್ಪರ್ಧಿಸಲಿದೆ.
ಈ ಬೈಕ್ ನ್ನು ಕಂಪೆನಿಯ ಮುಂದುವರಿದ ತಂತ್ರಜ್ಞಾನ ಹೊಂದಿರುವ ಕುಮಮೋಟೋ ಘಟಕದಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ತಯಾರಿಸಲಾಗಿದೆ ಎಂದು ಹೋಂಡಾ ಮೋಟಾರ್ ಸೈಕಲ್ಸ್ ಅಂಡ್ ಸ್ಕೂಟರ್ಸ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅಧ್ಯಕ್ಷ ಶೀಂಜಿ ಒಯೊಮ ಸುದ್ದಿಗಾರರಿಗೆ ತಿಳಿಸಿದರು.


Click it and Unblock the Notifications








