ಯಮಹಾದಿಂದ ಮೂರು ಹೊಸ ಬೈಕ್ ಬಿಡುಗಡೆ

ಯಮಹಾದ ಬ್ರಾಂಡ್ ರಾಯಭಾರಿ ನಟ ಜಾನ್ ಅಬ್ರಹಾಂ ನೋಯ್ಡಾದಲ್ಲಿ ಇಂದು ಎಸ್‌ಜೆಡ್ , ಎಸ್‌ಜೆಡ್ ಎಕ್ಸ್ ಹಾಗೂ ವೈಬಿಆರ್ 125 ಎಂಬ ಮೂರು ಬೈಕ್ ಗಳನ್ನು ಬಿಡುಗಡೆಗೊಳಿಸಿದರು. ಎಸ್‌ಜೆಡ್ ಹಾಗೂ ಎಸ್‌ಜೆಡ್ ಆರ್ ಬೈಕ್ ಗಳು 153 ಸಿಸಿ ಯ ಎಂಜಿನ್ ಹೊಂದಿದ್ದು , ವೈಬಿಆರ್ 125 ಸಿಸಿ ಯ ಎಂಜಿನ್ ಹೊಂದಿದೆ.
ಜಾಗತಿಕ ಮಟ್ಟದ ಉತ್ಪನ್ನಗಳನ್ನು ತನ್ನ ಭಾರತೀಯ ಗ್ರಾಹಕರಿಗೆ ನೀಡುವಲ್ಲಿ ಕಂಪೆನಿ ಬದ್ದವಾಗಿದೆ ಎಂದು ಹೇಳಿದ ಯಮಹಾ ಇಂಡಿಯಾ ಮೋಟಾರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕಿಮಿನೆ ತ್ಸುಜಿ ಅವರು ಈ ಬೈಕ್ ಗಳು ನೂತನ ತಲೆಮಾರಿನ ಜನರಿಗೆ ಇಷ್ಟವಾಗಲಿವೆ ಎಂದರು.


Click it and Unblock the Notifications








