ಹೀರೋ ಹೋಂಡಾ ಸೂಪರ್ ಸ್ಪ್ಲೆಂಡರ್ ಬೈಕ್

125 ಸಿಸಿ ವಿಭಾಗದಲ್ಲಿ ಶೇ.15 ರಿಂದ 20 ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆಯಿದೆ. ಈ ಸ್ಪ್ಲೆಂಡರ್ ಮಾದರಿ ಕ್ಲಿಕ್ ಆಗದಿದ್ದರೆ ಮತ್ತೊಂದನ್ನು ಶೀಘ್ರದಲ್ಲೇ ತರಲಾಗುವುದು ಎಂದು ಅನಿಲ್ ಹೇಳಿದರು.
ಕಳೆದ ಕೆಲವು ತಿಂಗಳಲ್ಲಿ ಸುಮಾರು 4,00,000 ವಾಹನಗಳನ್ನು ಮಾರಾಟ ಮಾಡಿರುವ ಹೀರೋ ಹೋಂಡಾ ಮೋಟರ್ ಸೈಕಲ್ಸ್ ಗೆ ಭಾರಿ ಬೇಡಿಕೆಯಂತೂ ಇದ್ದೇ ಇದೆ. ಆಗಸ್ಟ್ ತಿಂಗಳಲ್ಲಿ 4,24,617 ವಾಹನಗಳನ್ನು ಮಾರಾಟ ಮಾಡಿ ಶೇ. 2.28ರ ಪ್ರಗತಿ ಸಾಧಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,15,137 ವಾಹನಗಳು ಮಾತ್ರ ಮಾರಾಟಗೊಂಡಿದ್ದವು.
ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರ ಮೂಲಕ ಮಾರಾಟ ದಾಖಲೆಯನ್ನು ವೇಗವನ್ನು ಕಾಯ್ದುಕೊಳ್ಳಲು ಹೀರೋ ಹೊಂಡಾ ಯೋಜಿಸಿದೆ. 150 ಸಿಸಿಯ ಹಂಕ್ ಮೋಟರ್ ಸೈಕಲ್, 125ಸಿಸಿ ಸಾಮರ್ಥ್ಯದ ಸೂಪರ್ ಸ್ಪ್ಲೆಂಡರ್ , ಗ್ಲಾಮರ್ ಹಾಗೂ ಗ್ಲಾಮರ್ ಪಿಜಿಎಂ-ಎಫ್ ಐ ಬೈಕ್ ಗಳ ಮೇಲೆ ಬಲವಾದ ನಂಬಿಕೆಯನ್ನು ಸಂಸ್ಥೆ ಹೊಂದಿದೆ.
ವಾರ್ಷಿಕವಾಗಿ 75 ಲಕ್ಷ ವಾಹನಗಳನ್ನು ಹೊರಬಿಡುವ ಹೀರೋಹೋಂಡಾ ಸಂಸ್ಥೆ ಬೈಕುಗಳಲ್ಲಿ 125 ಸಿಸಿ ಸಾಮರ್ಥ್ಯದ ಬೈಕುಗಳು ಶೇ. 20 ರಷ್ಟು ಪಾಲು ಹೊಂದಿವೆ. ಇತ್ತೀಚೆಗೆ ಯಮಹಾ YBR 125 ಹಾಗೂ ಸುಜುಕಿ Slingshot 125 ಮೋಟರ್ ಸೈಕಲ್ ಗಳನ್ನು ಪರಿಚಯಿಸಿ ಪೈಪೋಟಿ ಹೆಚ್ಚಿಸಿವೆ.


Click it and Unblock the Notifications








