ಬಜಾಜ್ ದ್ವಿಚಕ್ರವಾಹನ ದರದಲ್ಲಿ ಏರಿಕೆ

ಈ ಮೂಲಕ ಇತ್ತೀಚಿಗೆ ವಾಹನಗಳ ಬೆಲೆ ಏರಿಕೆ ಮಾಡಿದ ದೊಡ್ಡ ಸಂಸ್ಥೆಗಳಾದ ಮಾರುತಿ ಸುಜುಕಿ ಹಾಗೂ ಟಾಟಾ ಮೋಟರ್ಸ್ ನ ಸಾಲಿಗೆ ಬಜಾಜ್ ಕೂಡಾ ಸೇರ್ಪಡೆಯಾಗಿದೆ.
ಕಳೆದ ತಿಂಗಳಿನಲ್ಲಿ ಆಲ್ಟೋ ಕಾರಿನ ಬೆಲೆಯನ್ನು ರು.7,500 ಹೆಚ್ಚಳ ಮಾಡಿದ್ದ ಮಾರುತಿ ಸುಜುಕಿ, ಈ ತಿಂಗಳು ವಾಣಿಜ್ಯ ಉದ್ದೇಶಿತ ಹಾಗೂ ಖಾಸಗಿ ಬಳಕೆಯ ಕಾರುಗಳ ಬೆಲೆಯಲ್ಲಿ 40,000 ರು ಹೆಚ್ಚಿಸುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸುಮಾರು 3,14,515 ವಾಹನಗಳನ್ನು ಮಾರಾಟ ಮಾಡಿ ಶೇ.26.24ರಷ್ಟು ಅಧಿಕ ಮಾರಾಟ ದಾಖಲೆಯನ್ನು ಬಜಾಜ್ ಬರೆದಿತ್ತು.
ಡಿಸ್ಕವರ್100 ಹಾಗೂ ಪಲ್ಸರ್ ಬೇಡಿಕೆ ಕಾಯ್ದುಕೊಂಡಿದೆ.ಒಟ್ಟಾರೆ ಕಳೆದ ವರ್ಷ ಇದೇ ಅವಧಿಯಲ್ಲಿ 2,80,916 ವಾಹನಗಳನ್ನು ಮಾರಾಟ ಮಾಡಿದ್ದ ಬಜಾಜ್, ಸೆಪ್ಟೆಂಬರ್ ನಲ್ಲಿ ಒಟ್ಟಾರೆ ಶೇ.25.58ರಷ್ಟು ಪ್ರಗತಿ ಸಾಧಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಒಟ್ಟಾರೆ ಶೇ69.32ರಷ್ಟು ಪ್ರಗತಿ ಕಂಡಿದೆ.


Click it and Unblock the Notifications