ಹೆಂಗಸರಿಗ್ಯಾಕೆ ಹೆಲ್ಮೆಟ್ಟಿಲ್ಲ? ಕೋರ್ಟ್ ಪ್ರಶ್ನೆಗೆ ಮಾರುತ್ತರ

Posted By:
To Follow DriveSpark On Facebook, Click The Like Button
Ladies Keep Your Helmets Off
ನವದೆಹಲಿ, ಮಾ 1: ಮೋಟರ್ ವಾಹನ ಕಾಯಿದೆ ನೀತಿ ಪ್ರಕಾರವೇ ದ್ವಿಚಕ್ರವಾಹನ ಸವಾರಿಯಲ್ಲಿ ಮಹಿಳೆಯರನ್ನು ಹೆಲ್ಮೆಟ್ ಕಡ್ಡಾಯ ನೀತಿಯಿಂದ ಹೊರಗಿಟ್ಟಿರುವುದಾಗಿ ದೆಹಲಿ ಸರಕಾರವು ಅಲ್ಲಿನ ಹೈಕೋರ್ಟಿಗೆ ಮಾಹಿತಿ ನೀಡಿದೆ.

ಹೆಲ್ಮೆಟ್ ಕಡ್ಡಾಯ ನೀತಿಯಲ್ಲಿ ಮಹಿಳೆಯರನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಾಮಾಜಿಕ ಸಿನಿಮಾ ತಯಾರಕ ಉಲ್ಲಾಸ್ ಪಿಆರ್ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು.

ಈ ದಾವೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಕೆ ಶಿಕ್ರಿ ಮತ್ತು ನ್ಯಾಯಮೂರ್ತಿ ರಾಜೀವ್ ಶಾಹಿ ವಿಭಾಗಿಯ ಪೀಠಕ್ಕೆ ರಾಜ್ಯ ಸಾರಿಗೆ ಇಲಾಖೆಯು ಮೋಟರ್ ಕಾಯಿದೆ ಪ್ರಕಾರವೇ ನಡೆದುಕೊಂಡಿರುವುದಾಗಿ ಮಾಹಿತಿ ನೀಡಿದೆ.

ಹೆಲ್ಮೆಟ್ ಕಡ್ಡಾಯ ಇತ್ಯಾದಿ ನೀತಿನಿಯಮಗಳು ಏಕೀಕೃತವಾಗಬೇಕು, ಮಹಿಳೆಯರಿಗೊಂದು, ಪುರುಷರಿಗೊಂದು ಕಾನೂನು ಇರಬಾರದು ಎಂದು ದೂರುದಾರರು ದಾವೆಯಲ್ಲಿ ತಿಳಿಸಿದ್ದರು. ಜಾತಿ, ಧರ್ಮ, ಲಿಂಗ ಇತ್ಯಾದಿಗಳಿಗೆ ಅನುಗುಣವಾಗಿ ಇಂತಹ ಕಾನೂನು ಇರುವುದು ಏತಕ್ಕೆ ಎಂದು ಪ್ರಶ್ನಿಸಿದ್ದರು.

ಸಿಕ್ ಜನಾಂಗದವರು ಮತ್ತು ಮಹಿಳೆಯರು ಬೈಕ್ ಮತ್ತು ಸ್ಕೂಟರ್ ನಲ್ಲಿ ಪ್ರಯಾಣಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಲ್ಲವೆಂದು ಮತ್ತು ಅದು ಅವರವರ ಆಯ್ಕೆಗೆ ಬಿಟ್ಟದ್ದು ಎಂದು ಮೋಟರ್ ಕಾಯಿದೆ ನೀತಿ ಹೇಳುತ್ತದೆ.

ಆದರೆ ಪೊಲೀಸರು ನೀಡಿರುವ ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ದೆಹಲಿಯಲ್ಲಿ ದ್ವಿಚಕ್ರ ವಾಹನ ಅಪಘಾತದಲ್ಲಿ 64 ಮಹಿಳೆಯರು ಮೃತರಾಗಿದ್ದಾರೆ. ಕಳೆದ ವರ್ಷ ಜೂನ್ ತಿಂಗಳವರೆಗೆ ನಡೆದ ಅಪಘಾತದಲ್ಲಿ(6 ತಿಂಗಳಲ್ಲಿ) ಸುಮಾರು 37 ಮಹಿಳೆಯರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ದೂರುದಾರರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಸರಕಾರಿ ಅಫಿಡವಿಟ್ ಮೂಲಕ ಏಪ್ರಿಲ್ ಹದಿನೈದರಂದು ಆಬ್ಜೆಕ್ಷನ್ ಹಾಕಲು ದೂರುದಾರರಿಗೆ ಕೋರ್ಟ್ ಅವಕಾಶ ನೀಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

ಪ್ರಾಣರಕ್ಷಕ ಶಿರಸ್ತ್ರಾಣಕ್ಕೆ ಸಾವಿರ ಪ್ರಣಾಮ>>

<<ಬೈಕ್‌ ಸವಾರರ ತಲೆಗೆ 'ಹೆಲ್ಮೆಟ್‌" ಹಾಕಿದ ಸರ್ಕಾರ!

English summary
The Delhi government in an affidavit to the Delhi High Court has stated that it had exempted women from wearing helmets while riding two wheelers as per central government rules.
Story first published: Thursday, March 1, 2012, 17:36 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark