ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಹೆಲ್ಮೆಟ್ ಬಳಕೆಯ ಕಡ್ಡಾಯ ನಂತರ ಬೈಕ್ ಸವಾರರು ಇದೀಗ ಗುಣಮಟ್ಟದ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಮಾರುಕಟ್ಟೆಯಲ್ಲಿ ಇದೀಗ ಹಲವಾರು ಹೆಲ್ಮೆಟ್‌ಗಳು ಖರೀದಿಗೆ ಲಭ್ಯವಿವೆ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಆದರೆ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಬೈಕ್ ಸವಾರರಿಗೆ ರಕ್ಷಣೆ ನೀಡಲು ಎಲೆಕ್ಟ್ರಿಕಲ್ ಇಂಜಿನಿಯರ್‌ ಒಬ್ಬರು ವಿಶೇಷ ಹೆಲ್ಮೆಟ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಅಪಘಾತಗಳಲ್ಲಿ ಹಾನಿಯಾಗುವುದನ್ನು ತಡೆಯಲು ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ಹೆಲ್ಮೆಟ್ ಪರಿಣಾಮ ಇದೀಗ ಬೈಕ್ ಸವಾರರಲ್ಲಿ ಸಾಕಷ್ಟು ಸುರಕ್ಷತಾ ಜಾಗೃತಿ ಮೂಡುತ್ತಿದ್ದು, ಮಾರುಕಟ್ಟೆಯಲ್ಲಿ ಬೈಕ್ ಸವಾರರ ಬೇಡಿಕೆಗೆ ಅನುಗುಣವಾಗಿ ಬಜೆಟ್ ಬೆಲೆಯಿಂದ ದುಬಾರಿಯ ಬೆಲೆಯ ಹೆಲ್ಮೆಟ್‌ಗಳು ಖರೀದಿಗೆ ಲಭ್ಯವಿವೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಹೆಲ್ಮೆಟ್‌ನಿಂದ ಕೇವಲ ದಂಡದಿಂದ ತಪ್ಪಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಗರಿಷ್ಠ ಸುರಕ್ಷತೆ ನೀಡಲಿದೆ ಎನ್ನುವುದನ್ನು ಅರಿತಿರುವ ಬೈಕ್ ಸವಾರರು ವಿವಿಧ ಮಾದರಿಗಳ ಹೆಲ್ಮೆಟ್ ಬಳಕೆ ಮಾಡುತ್ತಿದ್ದು, ಇತ್ತೀಚೆಗೆ ಮಾರುಕಟ್ಟೆಗೆ ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಸಹ ಖರೀದಿಗೆ ಲಭ್ಯವಾಗಿದೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ (Shellios Technolabss) ಎನ್ನುವ ಕಂಪನಿಯೊಂದು ಈ ವಿಶೇಷ ಹೆಲ್ಮೆಟ್ ಅನ್ನು ಅಭಿವೃದ್ದಿಪಡಿಸಿ ಬಿಡುಗಡೆ ಮಾಡಿದ್ದು, ಈ ಹೆಲ್ಮೆಟ್ ಅನ್ನು ವಿಶೇಷವಾಗಿ ಮಾಲಿನ್ಯದಿಂದ ಬೈಕ್ ಸವಾರರನ್ನು ರಕ್ಷಣೆ ಮಾಡುವ ಉದ್ದೇಶ ಹೊಂದಿದೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಹೆಚ್ಚುತ್ತಿರುವ ವಾಹನಗಳ ಪರಿಣಾಮ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಮಾಲಿನ್ಯ ಪ್ರಮಾಣವು ವಿಪರಿತವಾಗಿ ಹೆಚ್ಚಳವಾಗುತ್ತಿದ್ದು, ಬೈಕಿನಲ್ಲಿ ಪ್ರಯಾಣಿಸುವ ರೈಡರ್‌ಗಳು ಮಾಲಿನ್ಯದಿಂದ ಹೆಚ್ಚಿನ ತೊಂದರೆಯನ್ನು ಅನುಭವಿಸುವುದನ್ನು ತಪ್ಪಿಸಲು ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ ಈ ವಿಶೇಷ ಹೆಲ್ಮೆಟ್ ಸಿದ್ದಪಡಿಸಿದೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ ಕಂಪನಿಯನ್ನು ಎಲೆಕ್ಟ್ರಿಕಲ್ ಇಂಜಿನಿಯರ್ ಅಮಿತ್ ಪಾಠಕ್ ಎನ್ನುವರು ಆರಂಭಿಸಿದ್ದು, ಬೈಕ್ ಸವಾರಿಗೆ ಉತ್ತಮವಾದ ಗಾಳಿ ಸೇವನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಏರ್‌ಫಿಲ್ಟರ್ ಹೊಂದಿರುವ ಹೆಲ್ಮೆಟ್ ನಿರ್ಮಾಣ ಮಾಡಲಾಗಿದೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಹೆಲ್ಮೆಟ್ ಒಳಭಾಗದಲ್ಲಿ ಏರ್‌ಫಿಲ್ಟರ್ ಅಳವಡಿಸಲಾಗಿದ್ದು, ಬೈಕ್ ಸವಾರರು ಹೆಲ್ಮೆಟ್ ಹಾಕಿದ ನಂತರ ಹೊರಗಿನ ಧೂಳು, ವಾಹನಗಳ ಮಾಲಿನ್ಯದಿಂದ ಗರಿಷ್ಠ ರಕ್ಷಣೆ ಒದಗಿಸುತ್ತದೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಹೆಲ್ಮೆಟ್‌ನಲ್ಲಿರುವ ಏರ್‌ಫಿಲ್ಟರ್‌ಗಳು ಹೊರಗಿನ ಬರುವ ಧೂಳಿನ ಕಣಗಳನ್ನು ತಡೆದು ಶುದ್ದ ಗಾಳಿಯ ಸೇವನೆಗೆ ಅನುವು ಮಾಡಿಕೊಡಲಿದ್ದು, ಏರ್‌ಫಿಲ್ಟರ್ ಚಾರ್ಜ್‌ ಮಾಡಲು ಹೆಲ್ಮೆಟ್‌ನಲ್ಲಿ ಯುಎಸ್‌ಬಿ ಸ್ಲಾಟ್ ಕೂಡಾ ನೀಡಲಾಗಿದೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಅಂದಹಾಗೆ ವಿಶೇಷ ಸೌಲಭ್ಯಗಳನ್ನು ಹೊಂದಿರುವ ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್‌ನ ಹೆಲ್ಮೆಟ್ ಬೆಲೆಯು ರೂ. 4,500 ವರೆಗೆ ಮಾರಾಟಕ್ಕೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಪ್ರಯತ್ನದಲ್ಲಿರುವುದಾಗಿ ಕಂಪನಿಯು ಹೇಳಿಕೊಂಡಿದೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಮಾಲಿನ್ಯದಿಂದ ರಕ್ಷಿಸಿಲು ಪ್ರತಿಯೊಬ್ಬ ಬೈಕ್ ಸವಾರರು ಕೂಡಾ ಖರೀದಿಸುವ ರೀತಿಯಲ್ಲಿ ಉತ್ತಮ ಬೆಲೆಯೊಂದಿಗೆ ಬಿಡುಗಡೆ ಮಾಡುವ ಆಶಯ ವ್ಯಕ್ತಪಡಿಸಿರುವ ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್‌ ಕಂಪನಿಯು ಶೀಘ್ರದಲ್ಲಿಯೇ ದೇಶಾದ್ಯಂತ ಹೊಸ ಮಾದರಿಯ ಹೆಲ್ಮೆಟ್ ಖರೀದಿಗೆ ಲಭ್ಯವಿರಲಿದೆ ಎಂದಿದೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

2016ರಲ್ಲಿ ಆರಂಭವಾದ ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್‌ ಕಂಪನಿಯು ಬೈಕ್ ಸವಾರರ ಅಭಿಪ್ರಾಯ ಸಂಗ್ರಹಿಸಿ ಹೊಸ ಮಾದರಿಯ ಹೆಲ್ಮೆಟ್ ಉತ್ಪನ್ನವನ್ನು ಅಭಿವೃದ್ದಿಪಡಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಹೆಲ್ಮೆಟ್ ಹೊರತರುವ ಯೋಜನೆಯಲ್ಲಿದೆ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ವಾಹನ ಚಾಲನೆ ವೇಳೆ ಸವಾರರಿಗೆ ಉತ್ತಮ ಗಾಳಿ ಸೇವನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕಾರು ಕಂಪನಿಗಳು ಏರ್ ಫಿಲ್ಟರ್ ಸೌಲಭ್ಯವನ್ನು ಕಡ್ಡಾಯವಾಗಿ ಜೋಡಣೆ ಮಾಡುತ್ತಿವೆ. ಆದರೆ ಬೈಕ್‌ಗಳಲ್ಲಿ ಅಂತಹ ಸಾಧನೆ ಜೋಡಣೆ ಅಸಾಧ್ಯ.

ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಮಾರುಕಟ್ಟೆಗೆ..

ಹೀಗಾಗಿ ಬೈಕ್ ಸವಾರರಿಗೂ ಚಾಲನೆ ವೇಳೆ ಮಾಲಿನ್ಯದಿಂದ ರಕ್ಷಿಸಿ ಉತ್ತಮ ಗಾಳಿ ಸೇವನೆಗೆ ಸಹಕಾರಿಯಾಗಲೆಂದು ಹೆಲ್ಮೆಟ್‌ನಲ್ಲಿ ಏರ್ ಫಿಲ್ಟರ್ ಸಾಧನವನ್ನು ಅಳವಡಿಸಲಾಗಿದ್ದು, ಈ ಹೆಲ್ಮೆಟ್ ಸವಾರನಿಗೆ 80 ಪ್ರತಿಶತದಷ್ಟು ಶುದ್ದ ಗಾಳಿಯ ಒದಗಿಸುತ್ತದೆ ಎನ್ನಲಾಗಿದೆ.

Most Read Articles

Kannada
English summary
Shellios technolabs introduce helmet with air purifier details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X