ಪೋಷಕರೇ ಎಚ್ಚರ! ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ಕೆಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳಿಗಾಗಿ ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೆ ತಂದಿದ್ದು, ದ್ವಿಚಕ್ರ ವಾಹನದಲ್ಲಿ ಪ್ರಯಾಣ ಬೆಳೆಸುವ ಮಕ್ಕಳಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿ ಪಡಿಸಲು ಕಠಿಣ ಕ್ರಮಗಳನ್ನು ಘೋಷಣೆ ಮಾಡಿದೆ.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳಿಗಾಗಿ ಹೆಲ್ಮೆಟ್ ಮತ್ತು ಸುರಕ್ಷತಾ ಸರಂಜಾಮು (Safety harnesses) ಕಡ್ಡಾಯಗೊಳಿಸಿದ್ದು, ಇದರ ಜೊತೆ ವಾಹನದ ವೇಗವನ್ನು ಪ್ರತಿ ಗಂಟೆ ಗರಿಷ್ಠ 40 ಕಿ.ಮೀ ಮಿತಿಗೊಳಿಸಿದೆ. ಹಾಗಾದರೆ ಈ ನಿಯಮ ಮಕ್ಕಳಿಗೆ ಎಷ್ಟು ಸುರಕ್ಷಿತವಾಗಬಲ್ಲದು? ಮತ್ತು ಪ್ರಾಯೋಗಿಕವಾಗಿ ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳಲಿದೆ ಎನ್ನುವುದನ್ನು ಮುಖ್ಯ ವಿಚಾರವಾಗಿದೆ.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ದೇಶದ ಬಹುಸಂಖ್ಯಾತರಿಗೆ ದ್ವಿಚಕ್ರ ವಾಹನಗಳೇ ಜೀವಧಾರವಾಗಿದೆ. ಇನ್ನು ಪ್ರತಿದಿನ ಲಕ್ಷಾಂತರ ಮಕ್ಕಳು ದ್ವಿಚಕ್ರ ವಾಹನಗಳ ಮೇಲೆ ಶಾಲೆಗೆ ಹೋಗಿ ಬರುತ್ತಿರುತ್ತಾರೆ. ಹಿಂದಿನ ಸೀಟಿನಲ್ಲಿ ಹಾಗೂ ಬೈಕ್ ಪೆಟ್ರೋಲ್‌ ಟ್ಯಾಂಕ್‌ ಮೇಲೆ ಕುಳಿತು ಮಕ್ಕಳು ಪ್ರಯಾಣಿಸುವುದು ಸಾಮಾನ್ಯವಾಗಿಬಿಟ್ಟಿದೆ.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ಇಂತಹ ಸಂದರ್ಭದಲ್ಲಿ ಅಪಘಾತ ಸಂಭವಿಸಿದರೆ ಮಗುವಿಗೆ ತೀವ್ರ ಗಾಯವಾಗಬಹುದು. ಈ ಹಿಂದೆ ಇಂತಹ ಅಪಘಾತಗಳಿಗೆ ಮಕ್ಕಳು ಬಲಿಯಾದ ಉದಾಹರಣೆಗಳೂ ಇವೆ.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ದೇಶಾದ್ಯಂತ ಹಲವು ನಗರಗಳಲ್ಲಿ ಈಗಾಗಲೇ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದರೂ ಮಕ್ಕಳ ಸುರಕ್ಷತೆಗಾಗಿ ಪ್ರತ್ಯೇಕ ನಿಯಮಗಳ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 2021ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮವೊಂದನ್ನು ಪ್ರಸ್ತಾಪಿಸಿ ಹೆಲ್ಮೆಟ್ ಇಲ್ಲದೆ ಮಕ್ಕಳೊಂದಿಗೆ ಸಂಚರಿಸುವ ದ್ವಿಚಕ್ರ ವಾಹನಗಳ ವೇಗವನ್ನು ಪ್ರತಿ ಗಂಟೆಗೆ 40 ಕಿ.ಮೀ ಗೆ ದಾಟದಂತೆ ಮಿತಿಗೊಳಿಸಿತು.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ಇದೀಗ ಅದನ್ನು ಕೇಂದ್ರ ಮೋಟಾರು ವಾಹನಗಳ ನಿಯಂತ್ರಣ ಕಾಯ್ದೆಯಲ್ಲಿ ಸೇರಿಸಲಾಗಿದ್ದು, ಜತೆಗೆ ಹೆಲ್ಮೆಟ್ ಮತ್ತು ಸುರಕ್ಷತಾ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ಈ ಬಗ್ಗೆ ಫೆಬ್ರವರಿ 15 ರಂದು ಬಿಡುಗಡೆಯಾದ ಅಧಿಸೂಚನೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನಿಯಮ 138 ಅನ್ನು ತಿದ್ದುಪಡಿ ಮಾಡಿ ನಿಯಮಾವಳಿಗಳನ್ನು ನಿಗದಿಪಡಿಸಿದೆ. ಅಲ್ಲದೇ ಮಕ್ಕಳಿಗೆ ಅನುಕೂಲವಾಗುವಂತಹ ಹೆಲ್ಮೆಟ್ಗಳ ತಯಾರಿಗಾಗಿ ಹೆಲ್ಮೆಟ್ ತಯಾರಿಕಾ ಕಂಪನಿಗಳೊಂದಿಗೆ ಸರ್ಕಾರವು ಮಾತುಕತೆ ನಡೆಸಿತ್ತು.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ಮಕ್ಕಳಿಗಾಗಿ ತಯಾರಾದ ಸುರಕ್ಷತಾ ಸರಂಜಾಮು ಹಗುರವಾಗಿರಬೇಕು, ವಾಟರ್‌ಪ್ರೂಫ್ ಮತ್ತು ಮೃದುವಾಗಿಯಾಗಿರಬೇಕು. ಕನಿಷ್ಠ 30 ಕೆಜಿಯನ್ನು ಭಾರ ಹೊರುವ ಸಾಮರ್ಥ್ಯ ಹೊಂದಿರಬೇಕು. ಮಕ್ಕಳೊಂದಿಗೆ ಸಂಚರಿಸುವ ವೇಳೆ ಕಡ್ಡಾಯವಾಗಿ ಸುರಕ್ಷತಾ ಸರಂಜಾಮನ್ನು ಬಳಸಬೇಕು ಎಂಬ ನಿಯಮ ಜಾರಿಗೆ ತಂದಿದೆ.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ನಿಯಮ ಉಲ್ಲಂಘಿಸಿದರೆ ಕನಿಷ್ಠ 1,000 ರೂ.ದಂಡ ಹಾಗೂ 3 ತಿಂಗಳ ವರೆಗೆ ಸವಾರರ ಬೈಕ್ ಚಾಲನಾ ಪರವಾನಗಿ ಅಮಾನತುಗೊಳಿಸಲಾಗುವುದು ಎನ್ನಲಾಗಿದ್ದು, ಈ ಹೊಸ ಕಾನೂನನ್ನು ಫೆಬ್ರವರಿ 15ರಿಂದಲೇ ಅಧಿಕೃತವಾಗಿ ಜಾರಿಗೊಳಿಸಲಾಗಿದೆ.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ನಿಯಮಗಳು ಪ್ರಾಯೋಗಿಕವಾಗಿದೆಯೇ?

ಹೊಸ ನಿಯಮದಿಂದ ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶ ಉತ್ತಮವಾಗಿದ್ದರೂ ಇದರಲ್ಲಿ ಕೆಲವು ಅಪ್ರಾಯೋಗಿಕವಾಗಿಸುವ ಸಮಸ್ಯೆಗಳಿವೆ. ಮೊದಲನೆಯದಾಗಿ ಮಕ್ಕಳಿಗಾಗಿ ದುಬಾರಿ ಬೆಲೆಯ ಹೆಲ್ಮೆಟ್‌ಗಳನ್ನು ಕೆಲವರು ಖರೀದಿಸಿದರೂ ಕಾರ್ಮಿಕ ವರ್ಗದವರಿಗೆ ಹೊಸ ನಿಯಮವು ತುಸು ಹೊರೆಯಾಗಲಿದೆ. ಎರಡು ಹೆಲ್ಮೆಟ್‌ ಖರೀದಿಯು ಹೊರೆಯಾಗುವುದಲ್ಲದೆ ಸುರಕ್ಷತಾ ಸರಂಜಾಮುಗಳನ್ನು ಖರೀದಿಸಲು ಕೂಡಾ ತುಂಬಾ ಕಷ್ಟಕರವಾಗಲಿದೆ.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ಇನ್ನು ಹೆಲ್ಮೆಟ್ ತಯಾರಿಕಾ ಕಂಪನಿಯಾದ ವೆಗಾ ಮಕ್ಕಳಿಗಾಗಿ ವೆಗಾ ಜೂನಿಯರ್ ಬಡ್ಸ್ ಎಂಬ ಹೆಲ್ಮೆಟ್ ಅನ್ನು ತಯಾರಿಸುತ್ತಿದ್ದು, ಇದರ ಬೆಲೆ 998 ರೂ. ಇದೆ. ಮತ್ತೊಂದೆಡೆ ಸುರಕ್ಷತಾ ಸರಂಜಾಮುಗಳ ಬೆಲೆ 400 ರಿಂದ 1,500 ರೂ. ನಡುವೆ ಇರಲಿದೆ. ಮಕ್ಕಳ ಸುರಕ್ಷತೆಗಾಗಿ ಹಣಕಾಸು ಸಮಸ್ಯೆಯನ್ನು ಹೊರತುಪಡಿಸಿ ಈ ಎಲ್ಲಾ ಸುರಕ್ಷಾ ಸೌಲಭ್ಯಗಳನ್ನು ಖರೀದಿ ಮಾಡಿದರೂ ನಿಯಮ ಅನುಷ್ಠಾನ ಎಷ್ಟರ ಮಟ್ಟಿಗೆ ಜಾರಿಗೆ ಬರಲಿದೆ ಎನ್ನುವುದು ಮತ್ತೊಂದು ಪ್ರಶ್ನೆಯಾಗಿದೆ.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ಹೊಸ ನಿಯಮವು ಪ್ರಮುಖ ನಗರಗಳಲ್ಲ ಕಟ್ಟುನಿಟ್ಟಾಗಿ ಜಾರಿಗೆ ಬಂದರೂ ನಗರ ಹೊರವಲಯಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿಯಮ ಪಾಲಿಸುವವರು ಇಲ್ಲದಿದ್ದರೂ ಹೆಲ್ಮೆಟ್ ಖರೀದಿಗೂ ಹೊರೆಯಾಗಲಿದೆ.

ಮಕ್ಕಳೊಂದಿಗೆ ಬೈಕ್ ರೈಡ್ ಮಾಡುವಾಗ ಈ ತಪ್ಪು ಮಾಡಿದ್ರೆ ದಂಡ ಫಿಕ್ಸ್..

ಹೀಗಾಗಿ ಹೊಸ ನಿಯಮದ ಅನುಷ್ಠಾನದ ಚಿಂತನೆಯು ನ್ಯಾಯಯುತವಾಗಿದ್ದರೂ ನಿಯಮಗಳ ಪ್ರಾಯೋಗಿಕ ಜಾರಿಯಲ್ಲಿ ಹಲವಾರು ಗೊಂದಲಗಳಿದ್ದು ಈ ನಿಯಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವುದು ಇದೀಗ ಒಂದು ಸವಾಲಾಗಿದೆ. ಇದರೊಂದಿಗೆ ಮಕ್ಕಳಿಗೆ ಹೆಲ್ಮೆಟ್ ಮತ್ತು ಸರಂಜಾಮುಗಳಿಂದ ಕಿರಿಕಿರಿಯಾಗಬಹುದಾಗಿದ್ದು, ಈ ಎಲ್ಲಾ ಸಮಸ್ಯೆಗಳ ನಡುವೆಯೂ ನಿಯಮಗಳ ಪಾಲನೆಯಾಗಬೇಕಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ಪೋಷಕರು ಹೊಸ ನಿಯಯ ಪಾಲನೆಯನ್ನು ಹೇಗೆ ಪಾಲನೆ ಮಾಡುತ್ತಾರೆ ಎನ್ನುವುದು ಕಾಯ್ದುನೋಡಬೇಕಿದೆ.

Most Read Articles

Kannada
English summary
New safety rules for children on two wheelers in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X