ಯಮಹಾ ಸೂಪರ್ ಬೈಕ್ FZ1 8 ಲಕ್ಷಕ್ಕೆ

Yamaha superbike FZ1
ನವದೆಹಲಿ, ನ.26: ಯಮಹಾ ಮೋಟರ್ಸ್ ಭಾರತದಲ್ಲಿ ಹೆಚ್ಚುತ್ತಿರುವ ಸೂಪರ್ ಬೈಕಿನ ಕ್ರೇಜ್ ಗೆ ತಕ್ಕಂತೆ ಹೊಸ ವಿನ್ಯಾಸ ಬೈಕುಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಸುಮಾರು 8 ರಿಂದ 9 ಲಕ್ಷ ರು ಬೆಲೆಯ FZ1 ಸೂಪರ್ ಬೈಕು ಮಾದರಿ ಹೊರ ಬರಲಿದ್ದು, ಯಮಹಾ ಈಗಾಗಲೇ R1 ಹಾಗೂ MT-01 ಮಾದರಿಗಳು ಮಾರುಕಟ್ಟೆಗೆ ಬಿಟ್ಟಿದೆ. FZ1 ನಲ್ಲಿ 1000ಸಿಸಿ ಇಂಜಿನ್ ಸಾಮರ್ಥ್ಯವಿದ್ದು ಹೋಂಡಾದ CB1000R ಅಲ್ಲದೆ ಜಾಗತಿಕವಾಗಿ ಸುಜುಕಿ ಬ್ಯಾಂಡಿಟ್ ಹಾಗೂ ಕವಾಸಕಿ Z1000S ಬೈಕುಗಳಿಗೆ ಪೈಪೋಟಿ ನೀಡಲಿದೆ.

ಸಾಮಾನ್ಯವಾಗಿ ಸೂಪರ್ ಬೈಕುಗಳನ್ನು 500ಸಿಸಿ+ ಇಂಜಿನ್ ಸಾಮರ್ಥ್ಯದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ಹೋಂಡಾ, ಯಮಹಾ, ಕವಾಸಕಿ ಅಲ್ಲದೆ ಡುಕಾಟಿ, ಹಯಬುಸಾ ಹಾಗೂ ಬಿಎಂಡಬ್ಲ್ಯೂ ಎಲ್ಲವೂ ಭಾರತದ ಮಾರುಕಟ್ಟೆಯಲ್ಲಿ ಪರಿಚಿತ ಹೆಸರಾಗಿಬಿಟ್ಟಿವೆ. ಹೊಸತನ ಮೈಗೂಡಿಸಿಕೊಂಡಿರುವ ಯಮಹಾ ಹೆಚ್ಚಿನ ಇಂಜಿನ್ ಸಾಮರ್ಥ್ಯವುಳ್ಳ FZ1 ಅನ್ನು ಪರಿಚಯಿಸುವ ಮೂಲಕ ಹೆಚ್ಚಿನ ಪವರ್ ಬಯಸುವ ಯುವ ಪೀಳಿಗೆಗೆ ಕಿಚ್ಚು ಹಚ್ಚುತ್ತಿದೆ.

ಆಮದು ಮಾಡಿಕೊಂಡ ಬೈಕುಗಳ ಪೈಕಿ FZ1 ಬೆಲೆ ಹೋಂಡಾ CB1000R ಗಿಂತ ಕಮ್ಮಿಯಿದ್ದು, ಅತಿ ಕಮ್ಮಿ ಬೆಲೆಯ ಸೂಪರ್ ಬೈಕ್ ಎನಿಸಲಿದೆ. ಭಾರತದ ಮಾರುಕಟ್ಟೆಯಲ್ಲಿ ಸುಮಾರು 80 ರಿಂದ 100 ಸೂಪರ್ ಬೈಕುಗಳನ್ನು ಮಾರಾಟ ಮಾಡುವ ದಾಖಲೆಯನ್ನು ಯಮಹಾ ಹೊಂದಿದೆ. ಬೈಕುಗಳ ಬೆಲೆ ಕೂಡಾ ಇತರೆ ಕಂಪೆನಿ ಬೈಕುಗಳಿಗೆ ಹೋಲಿಸಿದರೆ ತುಸು ಕಮ್ಮಿ ಎನ್ನಬಹುದು. 14 ರಿಂದ 24 ಲಕ್ಷ ರು ತನಕ ಬೆಲೆಯಿದೆ.

ಈ ರೀತಿಯ ಬೈಕು ಹತ್ತಲು ಬಯಸುವವರು ಬೆಲೆಗಿಂತ, ವಿನ್ಯಾಸ ಹಾಗೂ ಸಾಮರ್ಥ್ಯದ ಮೇಲೆ ಹೆಚ್ಚಿನ ಗಮನಹರಿಸುತ್ತಾರೆ. ಸೂಪರ್ ಬೈಕು ಭಾರತದಲ್ಲಿ ಸ್ಪರ್ಧಾತ್ಮಕವಾಗಿ ಅಥವಾ ಕ್ರೀಡೆಗಾಗಿ ಅಲ್ಲದಿದ್ದರೂ ಕ್ರೇಜ್ ಗಾಗಿ ಖರೀದಿಸುವ ಯುವಕರ ದೊಡ್ಡ ಪಡೆಯೇ ಹುಟ್ಟಿಕೊಂಡಿದೆ ಎಂಬುದನ್ನು ಯಮಹಾ ಕಂಪೆನಿ ಗಮನಿಸಿದೆ.

ಹೊಸ ಉತ್ಪನ್ನದ ಬಗ್ಗೆ ಜಾಹೀರಾತು ನೀಡುವಾಗ ಈ ಅಂಶಗಳನ್ನು ಅಳವಡಿಸಿಕೊಳ್ಳುವುದನ್ನು ಯಮಹಾ ಮರೆತಿಲ್ಲ. ಉತ್ತರ ಪ್ರದೇಶ ಹಾಗೂ ಹರ್ಯಾಣದಲ್ಲಿರುವ ತನ್ನ ಘಟಕದಲ್ಲಿ ತಿಂಗಳಿಗೆ 10, 000 ಆರ್ಡರ್ ಗಳ ಬೇಡಿಕೆಯಿದೆ. ವಾರ್ಷಿಕವಾಗಿ 3.5 ಲಕ್ಷ ವಾಹನಗಳನ್ನು ಹೊರಬಿಡುತ್ತಿದ್ದು, ಈ ಸಂಖ್ಯೆಯನ್ನು 8 ಲಕ್ಷಕ್ಕೆ ಏರಿಸುವ ಗುರಿಯನ್ನು ಯಮಹಾ ಮೋಟರ್ಸ್ ಹೊಂದಿದೆ.

More from DriveSpark

Article Published On: Friday, November 26, 2010, 12:36 [IST]
English summary
The Indian Yamaha Motors is coming out with a new launch, FZ1(Rs.8-9 lakh) to grab further share in the power bike segment in India. This will include the list of Yamaha R1 and MT-01 models already in the market. The bike will be fitted with a 1000cc, 4-cylinders to take on Honda"s CB1000R while globally it challenges Suzuki Bandit and Kawasaki Z1000S.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+