ಭಾರತಕ್ಕೆ ಇಟಲಿಯ ಡುಕಾತಿ ಸೂಪರ್ ಬೈಕ್

ಭಾರತ ಪ್ರಮುಖ ಹತ್ತು ನಗರಗಳಲ್ಲಿ ಸರ್ವಿಸ್ ಸೆಂಟರ್ ಗಳನ್ನು ಆರಂಭಿಸುವುದು ಹಾಗೂ ಈಗಿರುವ ಡೀಲರ್ ಗಳ ಸಂಖ್ಯೆಯನ್ನು ಹೆಚ್ಚಿಸುವುದು ಡುಕಾತಿ ಸಂಸ್ಥೆ ಮುಂದಿರುವ ಸದ್ಯದ ಗುರಿಯಾಗಿದೆ. ಮುಂದಿನ ವರ್ಷದಲ್ಲಿ ಕನಿಷ್ಠವೆಂದರೂ ಸುಮಾರು 300 ಬೈಕುಗಳನ್ನು ಮಾರಾಟ ಮಾಡುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ. ಗುಜರಾತ್ ನಲ್ಲಿ ಸುಮಾರು 40 ರಿಂದ 60 ಬೈಕುಗಳು ಮಾರಾಟವಾಗುವ ಸಾಧ್ಯತೆಯಿದೆ ಎಂದು ಕಂಪೆನಿ ಹೇಳಿದೆ.
2009ರಿಂದ ಇಲ್ಲಿಯವರೆಗೂ ಸುಮಾರು 100 ವಾಹನಗಳನ್ನು ಮಾರಾಟ ಮಾಡಿದ ದಾಖಲೆಯನ್ನು ಮುಂಬೈ ಹಾಗೂ ಗುರ್ ಗಾವ್ ನ ಡೀಲರ್ ಗಳು ತೋರಿಸುತ್ತಾರೆ. 2011ರ ಜನವರಿ ಅಥವಾ ಫೆಬ್ರವರಿ ಡಿಯಾವೆಲ್ ಬೈಕ್ ಗಳನ್ನು ಮೊದಲಿಗೆ ಯುರೋಪಿಯನ್ ಹಾಗೂ ಅಮೆರಿಕನ್ ಮಾರುಕಟ್ಟೆಗೆ ಬಿಡಲಾಗುತ್ತದೆ ನಂತರ ಏಪ್ರಿಲ್ ತಿಂಗಳ ವೇಳೆಗೆ ಭಾರತದ ರಸ್ತೆಗಿಳಿಯಲಿದೆ.
1200ಸಿಸಿ ಇಂಜಿನ್ ಸಾಮರ್ಥ್ಯದ ಡಿಯಾವೆಲ್ ಬೇಸ್ ಹಾಗೂ ಕಾರ್ಬನ್ ಎಸ್ ಎಂಬ ಎರಡು ಮಾದರಿಯಲ್ಲಿ ಲಭ್ಯವಾಗಲಿದೆ. 1926ರಲ್ಲಿ ಬೈಕು ಮಾರುಕಟ್ಟೆಗಿಳಿದ ಡುಕಾತಿ, ಎರಡನೇ ವಿಶ್ವಯುದ್ಧದ ನಂತರ ಹೆಚ್ಚಿನ ಮಾರುಕಟ್ಟೆ ವಿಸ್ತರಣೆ ಕಂಡಿತು. ಭಾರತದಲ್ಲಿ ಡುಕಾತಿ ಬೈಕುಗಳ ಬೆಲೆ ರು.8 ಲಕ್ಷ ದಿಂದ ರು.22 ಲಕ್ಷವರೆಗೂ ಇದೆ. ಜಾಗತಿಕವಾಗಿ ಅಮೆರಿಕದ ಹಾರ್ಲೆ ಡೇವಿಡ್ ಸನ್ ಬೈಕುಗಳು ಡುಕಾತಿಗೆ ಪ್ರತಿಸ್ಪರ್ಧೆ ಒಡ್ಡುತ್ತಿದ್ದು, ಭಾರತದಲ್ಲಿ ಯಮಹಾ, ಸುಜುಕಿ, ಹೋಂಡಾ ಹಾಗೂ ಕವಾಸಕಿ ಬೈಕು ಹಾಗೂ ಸೂಪರ್ ಬೈಕುಗಳೊಡನೆ ಡುಕಾತಿ ನುಗ್ಗಬೇಕಿದೆ. [ಸೂಪರ್ ಬೈಕ್]


Click it and Unblock the Notifications








