ಯಾರು ನಂ.1 ಹೀರೋನಾ? ಹೋಂಡಾನಾ?

Hero Honda
ಬೈಕ್ ಮಾರುಕಟ್ಟೆಯಲ್ಲಿ ಯಾರು ನಂಬರ್ ಒನ್ ಆಗಲಿದ್ದಾರೆ. ಹೀರೋ ಗ್ರೂಪ್ ಅಥವಾ ಹೋಂಡಾನಾ? ಸುಮಾರು 26 ವರ್ಷಗಳ ದಾಂಪತ್ಯಕ್ಕೆ ವಿಚ್ಛೇದನ ನೀಡಿದ ನಂತರ ಇವೆರಡು ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಯಾವ ರೀತಿ ಪೈಪೋಟಿಗೆ ಬೀಳಲಿವೆ ಎಂದು ಕಾದುನೋಡಬೇಕಿದೆ.

ಹೀರೋ ಗ್ರೂಪ್ ಮತ್ತು ಹೀರೋ ಹೋಂಡಾ ಜಂಟಿ ಉದ್ಯಮದಿಂದ ಕಳೆದ ವರ್ಷವೇ ಹೊರಬಂದಿತ್ತು. ಆದರೆ ಜಂಟಿ ಉದ್ಯಮದಿಂದ ಹೊರಬರುವ ಅಂತಿಮ ಪ್ರಕ್ರಿಯೆ ಇನ್ನೂ ಕೊನೆಗೊಂಡಿಲ್ಲ. ಮುಂದಿನ ಜೂನ್ ವೇಳೆಗೆ ಇವೆರಡು ಅಧಿಕೃತವಾಗಿ ಬೇರೆ ಬೇರೆಯಾಗುವ ನಿರೀಕ್ಷೆಯಿದೆ.

ಮುಂದಿನ ಜೂನ್ ನಿಂದ ಸ್ಪ್ಲೆಂಡರ್ ಮತ್ತು ಫ್ಯಾಷನ್ ಬೈಕ್ ಗಳು ಹೀರೋ ಗ್ರೂಪ್ ಪಾಲಿಗೆ ಗಗನಕುಸುಮ. ಗ್ಲಾಮರ್ ಮತ್ತು ಹಂಕ್ ಮೂಲಕ ಜಾಗತಿಕವಾಗಿ ಛಾಪು ಮೂಡಿಸುವ ಅವಕಾಶ ಹೀರೋ ಗ್ರೂಪ್ ಗಿದೆ.

ಹೀರೂ ಹೋಂಡಾ ಮುಂದಿನ ಜೂನ್ ನಿಂದ ಸ್ಪ್ಲೆಂಡರ್ ಮತ್ತು ಫಾಷನ್ ಬೈಕ್ ಗಳ ಮೂಲಕ ಮಿಂಚಲಿದೆ. ಹೀರೋ ಗ್ರೂಪ್ ಗ್ಲಾಮರ್ ಮತ್ತು ಹಂಕ್ ಮುಂತಾದ ಮಾಡೆಲ್ ಮೂಲಕ ಸ್ವತಃ ಬ್ರಾಂಡ್ ಇಮೇಜ್ ಸೃಷ್ಟಿಸಲಿದೆ. ಆದರೆ ಹೀರೋ ಗ್ರೂಪ್ ನಲ್ಲಿ ಹೋಂಡಾಕ್ಕೆ ಯಾವುದೇ ಬ್ರಾಂಡ್ ಇಮೇಜ್ ಇಲ್ಲ.

ಇಲ್ಲಿವರೆಗೆ ಸ್ಪ್ಲೆಂಡರ್ ಜಾಗತಿಕವಾಗಿ ಫೇಮಸ್ ಬ್ರಾಂಡ್. ಕಳೆದ ಆರ್ಥಿಕ ವರ್ಷದಿಂದ ಸುಮಾರು 10 ಲಕ್ಷ ಬೈಕ್ ಮಾರಾಟ ಮಾಡಿದೆ. ಫ್ಯಾಷನ್ ಕೂಡ ಮಾರಾಟದಲ್ಲಿ ಸಾಕಷ್ಟು ಮುನ್ನಡೆಯಲ್ಲಿದೆ. ಇವೆರಡು ಬ್ರಾಂಡ್ ಗಳ ಒಟ್ಟು ಮಾರಾಟ ಸುಮಾರು 46 ಲಕ್ಷ ಯೂನಿಟ್ ಗೆ ತಲುಪಿದ್ದು, ಕಂಪನಿಗಳ ಒಟ್ಟು ಬೈಕ್ ಗಳಲ್ಲಿ ಇವೆರಡು ಬ್ರಾಂಡ್ ಗಳ ಪಾಲು ಶೇ. 45ರಷ್ಟಿದೆ.

ಇದೇ ರೀತಿ ಸಿಬಿಝಡ್ ಮತ್ತು ಸಿಡಿ ಮಾಡೆಲ್ ಗಳ ಮಾರಾಟ ಕೂಡ ಶೇಕಡ 30ರಷ್ಟಿದೆ. ಕಂಪನಿ ವರದಿ ಪ್ರಕಾರ ಜಂಟಿ ಉದ್ಯಮದಿಂದ ಹೊರಬರುವ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೂ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. 2010ರ ಡಿಸೆಂಬರ್ ನಲ್ಲಿ ಜಂಟಿ ಉದ್ಯಮದ ವಿಚ್ಛೇದನದ ಪ್ರಕ್ರಿಯೆ ಆರಂಭವಾಗಿತ್ತು. ಇದರಿಂದಾಗಿ ಸುಮಾರು 26 ವರ್ಷಗಳ ಮೈತ್ರಿ ಕೊನೆಗೊಂಡಿದೆ. ಮುಂದಿನ ತಿಂಗಳು ಅಂತಿಮ ಪ್ರಕ್ರಿಯೆ ಕೊನೆಗೊಳ್ಳುವ ನಿರೀಕ್ಷೆಯಿದೆ.

ಆದರೆ ಜಂಟಿ ಉದ್ಯಮ ಕೊನೆಗೊಂಡರೂ ಮುಂದಿನ 2014ರವರೆಗೆ ಹೀರೋ ಗ್ರೂಪ್ ಗೆ ಹೋಂಡಾ ತಂತ್ರಜ್ಞಾನ ಸವಲತ್ತು ನೀಡುವ ಪರವಾನಗಿಯ ಒಪ್ಪಂದ ಹೊಂದಿದೆ. ಇಲ್ಲಿವರೆಗೆ ಅಂದರೆ 26 ವರ್ಷಗಳಲ್ಲಿ ಹೀರೋ ಗ್ರೂಪ್ ಗೆ ಜಾಗತಿಕ ಮಾರುಕಟ್ಟೆಗೆ ಸರಿಯಾದ ಆಯಕಟ್ಟಿನಲ್ಲಿ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆದರೆ ಜಂಟಿ ಉದ್ಯಮ ಮುರಿದು ಬಿದ್ದಿರುವುದರಿಂದ ತನ್ನ ಉತ್ಪನ್ನಗಳ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಛಾಪು ಮೂಡಿಸುತ್ತದ್ದೋ ಕಾದು ನೋಡಬೇಕಿದೆ.

More from DriveSpark

Article Published On: Friday, February 11, 2011, 13:06 [IST]
English summary
English Summary: The Honda craze in the Hero Honda’s portfolio Splendor and Passion will not be carried over by Hero Group from this June. Rather Hero Group will set on its own brand markings and this will be applicable for other models like Glamour and Hunk too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+