ದಿನದ ಬೈಕ್: ಸುಜುಕಿ ಆಕ್ಸೆಸ್ 125, ಸ್ಮೂತ್ ರೈಡ್ ಗೆ ಹಾಯ್

ಸುಜುಕಿ ಆಕ್ಸೆಸ್ 125 ಸಿಸಿ
ಸುಜುಕಿ ಆಕ್ಸೆಸ್ 125 ಮುದ್ದಾದ ಸ್ಕೂಟರೇಟ್. ರಸ್ತೆಗಿಳಿದು ಕೆಲವು ವರ್ಷವೇ ಕಳೆದಿದೆ. ಆದರೆ ಇದರ ಮೇಲಿನ ಪ್ರೀತಿ ಗ್ರಾಹಕರಿಗಿನ್ನೂ ಕಡಿಮೆಯಾಗಿಲ್ಲ. ಇದು ಆಕ್ಟಿವಾ, ಏವಿಯೇಟರ್ ಮುಂತಾದ ಗಾಡಿಗಳಿಗೆ ಪ್ರಬಲ ಪ್ರತಿಸ್ಪರ್ಧಿ. ತುಂಬಾ ಜನರಿಗೆ ಆಕ್ಸೆಸ್ ಅಂದ್ರೆ ಇಷ್ಟ. ಅದರ ಕಾರ್ಯಕ್ಷಮತೆ, ಮೈಲೇಜ್, ಸ್ಟೈಲಿಶ್ ಲುಕ್, ಶಕ್ತಿಶಾಲಿ 125 ಸಿಸಿ ಎಂಜಿನ್ ಗ್ರಾಹಕರಿಗೆ ಹೆಚ್ಚು ಇಷ್ಟವಾಗಿದೆ. ವಿನೂತನ ಗೇರ್ ಲೆಸ್ ತಂತ್ರಜ್ಞಾನದಿಂದ ಬಂದಿರುವ ಆಕ್ಸೆಸ್ ಮೈಲೇಜ್ ಆಕ್ಟಿವಾಕ್ಕೆ ಹೋಲಿಸಿದರೆ ತುಂಬಾ ಜಾಸ್ತಿನೇ ಇದೆ. ಸುಜುಕಿ ಆಕ್ಸೆಸ್ 125 ಸಿಸಿ ಬೈಕ್ ಪ್ರತಿಲೀಟರ್ ಇಂಧನಕ್ಕೆ ಸುಮಾರು 55 ಕಿ.ಮೀ. ಮೈಲೇಜ್ ನೀಡುತ್ತದೆ.

ಶಕ್ತಿಶಾಲಿ 125 ಸಿಸಿ ಎಂಜಿನ್ ಹೊಂದಿರುವ ಸುಜುಕಿ ಆಕ್ಸೆಸ್ ಡೈನಾಮಿಕ್ ಹೀರೋ. ಇದರ ಇಂಧನ ದಕ್ಷತೆ ಕೂಡ ಅತ್ಯುತ್ತಮವಾಗಿದೆ. ಸಿವಿಟಿ ತಂತ್ರಜ್ಞಾನದ 4 ಸ್ಟ್ರೋಕ್ ಎಂಜಿನ್ ಇದಕ್ಕಿದೆ. ಕೇವಲ 6.56 ಸೆಕೆಂಡ್ ನಲ್ಲಿ 0-60ಕಿ.ಮೀ.ಗೆ ಬದಲಾಯಿಸಬಹುದು. ಆಕರ್ಷಕ ಆಕ್ಸೆಸ್ ಸುಮಾರು 6 ಬಣ್ಣಗಳಲ್ಲಿ ದೊರಕುತ್ತದೆ. ಲುಕ್ ನ ವಿಷಯಕ್ಕೆ ಬಂದರೆ ಆಕ್ಸೆಸ್ ಸೂಪರ್. ಇದಕ್ಕೆ ಕಾರಣವಾಗಿರುವುದು ಜಪಾನ್ ನ ವಿನೂತನ ವಿನ್ಯಾಸ. ಕೈನಟಿಕ್ ಫೈಟ್ ಮತ್ತು ಹೋಂಡಾ ಆಕ್ಟಿವಾಕ್ಕೆ ಹೋಲಿಸಿದರೆ ಆಕ್ಸೆಸ್ ಒಟ್ಟಾರೆ ವಿನ್ಯಾಸ ಸಿಂಪಲ್ ಆಗಿದೆ.

ಇದರ ಹೆಡ್ ಲ್ಯಾಂಪ್ ಬಹು ರಿಫ್ಲೆಕ್ಟರ್ ಹೊಂದಿದ್ದು, ಆಕ್ಸೆಸ್ ನ್ನು ಹೆಚ್ಚು ಆಕರ್ಷಕವಾಗಿಸಿದೆ. ಇಂಧನ ಮೀಟರ್, ಸ್ಪೀಡೊಮೀಟರ್ ಮುಂತಾದ ಸಾಧನಗಳು ಅತ್ಯುತ್ತಮವಾಗಿವೆ. ಸೀಟ್ ನಡಿ ಸಾಕಷ್ಟು ಸ್ಥಳಾವಕಾಶವಿದೆ. ಕಾಲಿಡುವ ಸ್ಥಳ ಕೂಡ ನೀಟಾಗಿದೆ. ಎದುರಿನ ಇಂಡಿಕೇಟರ್ ದೊಡ್ಡದಾಗಿದ್ದು, ತುಂಬಾ ಆಕರ್ಷಕವಾಗಿದೆ. ಸಿಂಗಲ್ ಕಲರ್ ಗ್ರಾಫಿಕ್ಸ್ ನಿಂದಾಗಿ ಆಕ್ಸೆಸ್ ಇನ್ನಷ್ಟು ಮುದ್ದಾಗಿದೆ. ಸ್ಕೂಟರೇಟ್ ಹಿಂದುಗಡೆ ಸುಂದರವಾದ ಇಂಡಿಕೇಟರ್ ಗಳು, ಸ್ಟೈಲಿಶ್ ಎಲ್ ಇಡಿ ಟೇಲ್ ಲ್ಯಾಂಪ್ ಇದೆ.

ಆಕ್ಸೆಸ್ ಕೂಡ ತೂಕದ ಗಾಡಿ. ಇದು 115 ಕೆ.ಜಿ. ಭಾರವಿದೆ. ಸುಜುಕಿ ಆಕ್ಸೆಸ್ ತುಂಬಾ ಆರಾಮದಾಯಕತೆ ನೀಡುತ್ತದೆ ಮತ್ತು ಇದರಿಂದ ಆರಾಮದಾಯಕವಾದ ರೈಡಿಂಗ್ ಮಾಡಬಹುದಾಗಿದೆ. ಗೇರ್ ಲೆಸ್ ಮತ್ತು ಸೆಲ್ಫ್ ಸ್ಟ್ರಾಟ್ ನಿಂದಾಗಿ ಇದು ಹೆಚ್ಚು ಆಪ್ತವಾಗುತ್ತದೆ. ಶಕ್ತಿಶಾಲಿ ಸಸ್ಪೆನ್ಷನ್ ಸಿಸ್ಟಮ್ ನಿಂದಾಗಿ ಸದೃಢ ಮತ್ತು ಸುರಕ್ಷತೆಯ ರೈಡಿಂಗ್ ಮಾಡಬಹುದಾಗಿದೆ. ಆಕ್ಸೆಸ್ ಟೈರ್ ಗಳು ಸ್ಪೋರ್ಟಿ ಲುಕ್ ಹೊಂದಿದ್ದು ಅತ್ಯುತ್ತಮ ರೈಡಿಂಗ್ ಅನುಭವ ನೀಡುತ್ತದೆ. ಟೈರ್ ಗಾತ್ರ ದೊಡ್ಡದಾಗಿರುವುದರಿಂದ ಸ್ಕಿಡಾಗುವ ಅಪಾಯ ಕಡಿಮೆಯಿದ್ದು ರಸ್ತೆಯಲ್ಲಿ ನಿಯಂತ್ರಣವೂ ಸುಲಭವಾಗಿದೆ. ನಿಜಾರ್ಥದಲ್ಲಿ ಆಕ್ಸೆಸ್ ಕಂಫರ್ಟೆಬಲ್ ಬ್ಯೂಟಿ.

Article Published On: Monday, February 21, 2011, 11:02 [IST]
English summary
The mileage which the Suzuki Access 125cc delivers is 55 kmpl. The dynamic and powerful 125cc engine of the Suzuki Access 125cc ensures impressive performance on road. Access 125 Bangalore Ex Show Room Price Rs 45,874 and On-road Price Rs 52,272
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+