ಹೀರೋ ಹೋಂಡಾ: 2011ರ ಸ್ಪ್ಲೆಂಡರ್ ಪ್ರೊ ಹೀಗಿದೆ ನೋಡಿ

ದೇಶದ ಬೃಹತ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಹೋಂಡಾ, ಸ್ಪ್ಲೆಂಡರ್ ಪ್ರೊ ಬೈಕ್ ನ ನೂತನ ಪರಿಷ್ಕೃತ ಆವೃತ್ತಿಯನ್ನು ಅನಾವರಣ ಮಾಡಿದೆ. ಹೀರೋ ಹೋಂಡಾ ಸ್ಪ್ಲೆಂಡರ್ ಬೈಕನ್ನು 1994ರಲ್ಲಿ ಹೊರತಂದಿತ್ತು. ಆಗಿನಿಂದಲೇ ದೇಶದ ಗ್ರಾಹಕರು ಇದರತ್ತ ಆಕರ್ಷಿತರಾಗಿದ್ದಾರೆ. ಇಲ್ಲಿವರೆಗೆ ದೇಶದಲ್ಲಿ ಸುಮಾರು 80 ಲಕ್ಷ ಸ್ಪ್ಲೆಂಡರ್ ಬೈಕ್ ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ಸ್ಪ್ಲೆಂಡರ್ ಬೈಕ್ ಖರೀದಿಸಬಯಸುವರಿಗಾಗಿ ಸ್ಪ್ಲೆಂಡರ್ ಪ್ರೊ ಬೈಕ್ ನ ಪರಿಷ್ಕೃತ ಆವೃತ್ತಿಯನ್ನು ಕಂಪನಿ ಹೊರತಂದಿದೆ.
ಸ್ಪ್ಲೆಂಡರ್ ಪ್ರೊದಲ್ಲಿ ಹೊಸ ಫೀಚರ್ ಗಳೇನಿದೆ?
* ಬಿಎಸ್ಐಐಐ 97.2 ಸಿಸಿ ಎಂಜಿನ್ ಅಳವಡಿಸಲಾಗಿದ್ದು, 5 ಸಾವಿರ ಆರ್ ಪಿಎಂಗೆ ಗರಿಷ್ಠ 7.95 ಟಾರ್ಕ್ ಪೂರೈಕೆ ಮಾಡುತ್ತದೆ.
* ಹೊಸದಾಗಿ ಎಲೆಕ್ಟ್ರಿಕ್ ಸ್ಟಾರ್ಟ್ ಸಿಸ್ಟಮ್ ಅಳವಡಿಸಲಾಗಿದೆ.
* ಕಪ್ಪು ಬ್ಯಾಕ್ ಗ್ರೌಂಡ್ ನ ಮತ್ತು ಹಸಿರು ಬಣ್ಣದ ಹೊಸ ಸ್ಟಿಕರ್ ಅಂಟಿಸಲಾಗಿದೆ.
* ಸ್ಪೀಡೋಮೀಟರ್ ನ್ನು ಪರಿಷ್ಕರಿಸಲಾಗಿದ್ದು, ಹೊಸದಾಗಿ ಕಾಣುತ್ತದೆ.
* ಬಾಡಿ ಬಣ್ಣದ ರಿಯರ್ ವ್ಯೂ ಮಿರರ್
* ಕ್ಲೀಯರ್ ಲೆನ್ಸ್ ನ ಆರೇಂಜ್ ಬಲ್ಬ್ ಹೊಂದಿರುವ ಟರ್ನ್ ಇಂಡಿಕೇಟರ್
* ಕ್ಯಾರಿಯರ್ ಮತ್ತು ಸೈಲೇನ್ಸರ್ ಗಳನ್ನು ಒಂದಿಷ್ಟು ಅಪ್ ಗ್ರೇಡ್ ಮಾಡಲಾಗಿದೆ.
ಸ್ಪ್ಲೆಂಡರ್ ಪ್ರೊನಲ್ಲಿರುವ ಆಕರ್ಷಕ ಫೀಚರ್ ಗಳು
* 4 ಸ್ಪೀಡ್ ಗೇರ್ ಬಾಕ್ಸ್
* ಡ್ರಮ್ ಬ್ರೇಕ್
* 12 ವಾಲ್ಟೇಜ್-2.5 ಎಎಚ್ ಬ್ಯಾಟರಿ
* 11 ಲೀಟರ್ ಸಂಗ್ರಹ ಸಾಮರ್ಥ್ಯದ ಇಂಧನ ಟ್ಯಾಂಕ್, 1 ಲೀಟರ್ ರಿಸರ್ವ್
ನೂತನ ಸ್ಪ್ಲೆಂಡರ್ ಪ್ರೊ ಎಕ್ಸ್ ಶೋರೂಂ ದರ ಸುಮಾರು 42,700 ರೂ. ಇರುವ ನಿರೀಕ್ಷೆಯಿದೆ. ಸ್ಪ್ಲೆಂಡರ್ ಪ್ಲಸ್ ಎಕ್ಸ್ ಶೋರೂಂನಲ್ಲಿ 40,050 ರೂ.ಗೆ ಮತ್ತು ಹಳೆಯ ಫ್ಯಾಷನ್ ಪ್ರೊ (ಎಕ್ಸ್ ಶೋರೂಂ) 45,300 ರೂ.ಗೆ ದೊರಕುತ್ತಿದೆ.


Click it and Unblock the Notifications








