ದೇಶದ ರಸ್ತೆಗೆ ವಿಕ್ಟರಿ ಬೈಕ್ ಬರೋದು ಗ್ಯಾರಂಟಿ

Victory Motorcycles
ದೇಶದ ರಸ್ತೆಯಲ್ಲಿ ವಿಕ್ಟರಿ ಮೋಟರ್ ಬೈಕ್ ರೈಡಿಂಗ್ ನೋಡಲು ಇನ್ನೂ ಒಂದು ವರ್ಷ ಕಾಯಬೇಕಿದೆ. ಯಾಕೆಂದರೆ ಕಂಪನಿ ಇಲ್ಲಿಗೆ 2012ಕ್ಕೆ ಪ್ರವೇಶಿಸಲು ನಿರ್ಧರಿಸಿದೆ. ದೇಶದ ಜನರಿಗೆ ರೇಸಿಂಗ್ ಕ್ರೇಝ್ ಜಾಸ್ತಿಯಾಗುತ್ತಿದೆ. ಇದೇ ಕಾರಣಕ್ಕೆ ಎಂಬಂತೆ ಹಲವು ಜಾಗತಿಕ ವಾಹನ ತಯಾರಿಕಾ ಕಂಪನಿಗಳು ತಮ್ಮ ವಾಹನಗಳನ್ನು ದೇಶದತ್ತ ರೈಡ್ ಮಾಡುತ್ತಿವೆ.

ವಿಕ್ಟರಿ ಮೋಟರ್ ಸೈಕಲ್ಸ್ ಕಂಪನಿಯು ದೇಶದಲ್ಲಿ ಘಟಕವನ್ನು ನಿರ್ಮಿಸುವ ಯೋಜನೆಯನ್ನೂ ಹೊಂದಿದೆ. ಆದರೆ ಆರಂಭಿಕವಾಗಿ ವಿಕ್ಟರಿ ಬೈಕ್ ಗಳನ್ನು ಆಮದು ಮಾಡಿಕೊಳ್ಳಲಾಗುವುದು. ನಂತರ ಗ್ರಾಹಕರ ಬೇಡಿಕೆಯನ್ನು ನೋಡಿಕೊಂಡು ದೇಶದಲ್ಲಿ ಘಟಕ ನಿರ್ಮಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲೂ ವಿಕ್ಟರಿ ಮೋಟರ್ ಸೈಕಲ್ ಇರಲಿದೆ.

ದೇಶದ ರಸ್ತೆಗಿಳಿಯುವ ಯೋಜನೆಯನ್ನು ಕಂಪನಿ ಈಗ ಬಹಿರಂಗಪಡಿಸಿದ್ದು, ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ವಿಕ್ಟರಿ ಅಮೆರಿಕದ ಹರ್ಲೆ ಡೇವಿಡ್ ಸನ್ ಜೊತೆಗಾರನಾಗಿ ದೇಶದ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುವ ನಿರೀಕ್ಷೆಯಿದೆ. ದೇಶದಲ್ಲಿ ಕಂಪನಿ ಉತ್ಪಾದನಾ ಘಟಕ ಸ್ಥಾಪಿಸಿದರೆ ವಿಕ್ಟರಿ ಬೈಕ್ ದರ ಸುಮಾರು ಶೇ. 30ರಷ್ಟು ಅಗ್ಗವಾಗಲಿದೆ. ದೇಶದ ಗ್ರಾಹಕರಿಂದ ವಿಕ್ಟರಿ ಬೈಕ್ ಗೆ ಬರುವ ಬೇಡಿಕೆ ನೋಡಿಕೊಂಡು ಕಂಪನಿ ಘಟಕ ನಿರ್ಮಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಸ್ಪೈನ್, ಫ್ರಾನ್ಸ್, ಜರ್ಮನಿ, ಅಮೆರಿಕ, ಇಂಗ್ಲೆಂಡ್. ನ್ಯೂಜಿಲ್ಯಾಂಡ್ ಮುಂತಾದ ದೇಶಗಳಲ್ಲಿ ವಿಕ್ಟರಿ ಜನಪ್ರಿಯ ಬೈಕಾಗಿದೆ.

Article Published On: Thursday, February 24, 2011, 14:30 [IST]
English summary
The Indian motorcycle market is getting more racers in the growing stint and the entry of global makers is not a new phenomenon. The latest is the entry of Victory Motorcycles to the Indian roads in 2012 which may get its own manufacturing plant in the years to come.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+