ಕುಸಿತದತ್ತ ಹೀರೋ ಹೋಂಡಾ, ಲಾಭ ಇಳಿಕೆ

Hero Honda
ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಹೀರೋ ಹೋಂಡಾ ನಿವ್ವಳ ಲಾಭ 429 ಕೋಟಿ ರೂ.ಗೆ ತಲುಪಿದ್ದು ಹಿಂದಿನ ವರ್ಷದ 535.7 ಕೋಟಿ ರೂ.ಗೆ ಹೋಲಿಸಿದರೆ ಶೇಕಡ 20ರಷ್ಟು ಇಳಿಕೆ ಕಂಡಿದೆ. 2010ರ ವರ್ಷಾಂತ್ಯದಲ್ಲಿ ಜಂಟಿ ಉದ್ಯಮ ಕೊನೆಗೊಳಿಸಿದ ನಂತರ ನಷ್ಟದತ್ತ ಕಂಪನಿಯು ಮುಖ ಮಾಡಿದೆ.

ಆದರೆ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಮಾರಾಟ 5,118.19 ಕೋಟಿ ರೂ.ಗೆ ತಲುಪಿದ್ದು, ಇದಕ್ಕೂ ಹಿಂದಿನ ವರ್ಷದ 3,814 ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ 34.1ರಷ್ಟು ಏರಿಕೆ ಕಂಡಿದೆ.

ಲೇಲ್ಯಾಂಡ್ ಲಾಭ ಇಳಿಕೆ: 2011ರ ಜನವರಿ ತಿಂಗಳಲ್ಲಿ ಅಶೋಕ್ ಲೇಲ್ಯಾಂಡ್ 7,711 ಯೂನಿಟ್ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳ 7,871 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 2ರಷ್ಟು ಇಳಿಕೆ ಕಂಡಿದೆ.

ಇದೇ ರೀತಿ ಕಂಪನಿಯ ದೇಶಿಯ ಮಾರಟ 2010ರ ಜನವರಿಯಲ್ಲಿ 6,880 ಯೂನಿಟ್ ಗೆ ತಲುಪಿದ್ದು, ಕಳೆದ ವರ್ಷದ ಜನವರಿ ತಿಂಗಳ 7,460 ಯೂನಿಟ್ ಗೆ ಹೋಲಿಸಿದರೆ ಇಳಿಕೆ ಕಂಡಿದೆ. ಆದರೆ ಕಂಪನಿಯು ಜನವರಿಯಲ್ಲಿ 831 ವಾಹನಗಳನ್ನು ರಫ್ತು ಮಾಡಿದ್ದು. ಕಳೆದ ವರ್ಷದ ಇದೇ ತಿಂಗಳ 411 ಯೂನಿಟ್ ರಫ್ತಿಗೆ ಹೋಲಿಸಿದರೆ ಏರಿಕೆ ದಾಖಲಿಸಿದೆ.

Article Published On: Friday, February 4, 2011, 12:57 [IST]
English summary
English Summary: Hero Honda faced another blow to its smooth running as its sale profit in Q3 of this fiscal was down by 20% with Rs429 crore. In janavary Ashok Leyland as it could sell 7711 units making a fall by 2% from its 7871 units of January 2010.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+