ಹೆಸರಾಗಿಯೇ ಉಳಿದ ಹೀರೋ ಹೋಂಡಾ ಮೋಟಾರ್ ಸೈಕಲ್‍‍ಗಳಿವು..

ದೇಶಿಯಾ ಹೀರೋ ಮತ್ತು ಜಪಾನಿನ ಹೋಂಡಾ ಎರಡು ಜಂಟಿಯಾಗಿ ಮಾರುಕಟ್ಟೆಗೆ ಬೈಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದವು. ಆದರೆ ಎರಡೂ ಕಂಪೆನಿಗಳು ಕಳೆದ ಕೆಲವು ವರ್ಷಗಳಿಂದ ಕಹಿ ಕ್ಷಾಮದಿಂದ ಬೇರ್ಪಟ್ಟಿವೆ.

By Rahul Ts

ದೇಶಿಯ ಹೀರೋ ಮತ್ತು ಜಪಾನಿನ ಹೋಂಡಾ ಎರಡು ಜಂಟಿಯಾಗಿ ಮಾರುಕಟ್ಟೆಗೆ ಬೈಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದವು. ಆದರೆ ಹಣಕಾಸಿನ ವಿಚಾರವಾಗಿ ನಡೆದ ಬಿಕ್ಕಟ್ಟಿನಿಂದ ಬೇರ್ಪಟ್ಟಿದ್ದವು. ತದನಂತರ ಮಾರುಕಟ್ಟೆಯಲ್ಲಿ ಹೋಂಡಾ ಮತ್ತು ಹೀರೋ ಸಂಸ್ಥೆಗಳು ಪ್ರತ್ಯೇಕವಾಗಿಯೇ ಬೈಕ್ ಮಾರಾಟ ಪ್ರಕ್ರಿಯೆ ನಡೆಸುತ್ತಿದ್ದು, ಜಂಟಿಯಾಗಿದ್ದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದ್ದ ಕೆಲವು ಬೈಕ್‌ಗಳು ಇಂದಿಗೂ ಕೂಡಾ ಜನಪ್ರಿಯವಾಗಿ ಎನ್ನುವುದೇ ಒಂದು ವಿಶೇಷ.

ಹೆಸರಾಗಿಯೆ ಉಳಿದ ಹೀರೋ ಹೋಂಡಾ ಮೋಟಾರ್‍‍ಸೈಕಲ್‍‍ಗಳಿವು..

ಸದ್ಯ ಹೀರೋ ಮೋಟಾರ್ ಸೈಕಲ್ ಸಂಸ್ಥೆಯು ಹೋಂಡಾ ಸಂಸ್ಥೆಗೆ ತೀವ್ರ ಪೈಪೋಟಿ ನೀಡುತ್ತಿದ್ದು, ದಶಕದಿಂದ ಹೀರೋ ಮತ್ತು ಹೋಂಡಾ ಜೊತೆಗೂಡಿ ಮಾರುಕಟ್ಟೆಯಲ್ಲಿ ಹಲವಾರು ಬೈಕ್‍‍ಗಳನ್ನು ಬಿಡುಗಡೆಗೊಳಿಸಿವೆ. ಅಂತಹ ಉತ್ಪನ್ನಗಳಲ್ಲಿ ಕೆಲವು ಬೈಕ್ ಮಾದರಿಗಳು ಇಂದಿಗೂ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ.

ಹೆಸರಾಗಿಯೆ ಉಳಿದ ಹೀರೋ ಹೋಂಡಾ ಮೋಟಾರ್‍‍ಸೈಕಲ್‍‍ಗಳಿವು..

ಸಿಡಿ 100

ಸಿಡಿ 100 ಹೀರೊ ಸಂಸ್ಥೆಯ ಮೊದಲ ಯಶಸ್ವಿ ಬೈಕ್ ಆಗಿದ್ದು, 1985ರಲ್ಲಿ ಬಿಡುಗಡೆಗೊಂಡಿತ್ತು. ಸಿಡಿ 100 ಬೈಕ್ 97ಸಿಸಿ 2 ಸ್ಟ್ರೋಕ್ ಎಂಜಿನ್ ಸಹಾಯದಿಂದ 7.5 ಬಿಹೆಚ್‍‍ಪಿ ಮತ್ತು 7.16 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತೀ ಲೀಟರ್‍‍‍ಗೆ 80 ಕಿಲೋಮೀಟರ್ ಮೈಲೇಜ್ ನೀಡುತಿತ್ತು. ಅಷ್ಟೆ ಅಲ್ಲದೆ ಸಿಡಿ 100 ಬೈಕ್ ಅನ್ನು ಹಿಮಾಲಯ ವಾತಾವರಣದಲ್ಲಿ ಭಾರತದ ಸೇನೆಯು ಉಪಯೋಗಿಸುತ್ತಿದ್ದರು.

ಹೆಸರಾಗಿಯೆ ಉಳಿದ ಹೀರೋ ಹೋಂಡಾ ಮೋಟಾರ್‍‍ಸೈಕಲ್‍‍ಗಳಿವು..

ಸ್ಲೀಕ್

ಸ್ಲೀಕ್ ಬೈಕ್ 1989ರಲ್ಲಿ ಬಿಡುಗಡೆಗೊಂಡಿದ್ದು, ಬಿಡುಗಡೆಗೊಂಡ ಹೊಸತರಲ್ಲಿ ಯುವ ಸಮುದಾಯವನ್ನು ಹೆಚ್ಚಾಗಿ ಸೆಳೆದಿತ್ತು. ಸ್ಕೀಕ್ ಬೈಕ್ 97.2ಸಿಸಿ ಸಿಮ್ಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 6.8 ಬಿಹೆಚ್‍‍ಪಿ ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿತ್ತು.

ಹೆಸರಾಗಿಯೆ ಉಳಿದ ಹೀರೋ ಹೋಂಡಾ ಮೋಟಾರ್‍‍ಸೈಕಲ್‍‍ಗಳಿವು..

ಸ್ಟ್ರೀಟ್

ಹೀರೋ ಹೋಂಡಾ ಸ್ಕೂಟರ್ ವಿನ್ಯಾಸದಲ್ಲಿ ಸ್ಟ್ರೀಟ್ ಬೈಕ್ ಅನ್ನು ತಯಾರಿ ಮಾಡಿದ್ದು, 1997ರಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು. ಇನ್ನು ಈ ಸ್ಟ್ರೀಟ್ ಬೈಕ್‍‍ಗಳು 97.2 ಸಿಸಿ ಏರ್ ಕೂಲ್ಡ್, 4 ಸ್ಟ್ರೋಕ್ ಎಂಜಿನ್ ಸಹಾಯದಿಂದ 6.5 ಬಿಹೆಚ್‍‍ಪಿ ಉತ್ಪಾದಿಸುವ ಶಕ್ತಿಯನ್ನು ಪದೆದುಕೊಂಡಿತ್ತು.

ಹೆಸರಾಗಿಯೆ ಉಳಿದ ಹೀರೋ ಹೋಂಡಾ ಮೋಟಾರ್‍‍ಸೈಕಲ್‍‍ಗಳಿವು..

ಸಿಬಿಝೆಡ್

ಸಿಬಿಝೆಡ್ ಬೈಕ್‍‍ಗಳು 156.8ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಪಡೆದಿಕೊಂಡು ದೇಶದ ಮೊದಲ 5 ಸ್ಪೀಡ್ ಗೇರ್‍‍ಬಾಕ್ಸ್ ಪಡೆದ ಬೈಕ್ ಆಗಿತ್ತು. ಮತ್ತೆ ಹಿರೋ ಹೋಂಡಾ ಸಂಸ್ಥೆಯು ಸಿಬಿಝೆಡ್ ಬೈಕ್‍‍ಗಳಲ್ಲಿ ಹಲವು ವೇರಿಯಂಟ್‍‍ಗಳನ್ನು ಕೂಡಾ ಪರಿಚಯಿಸಿತ್ತು.

ಹೆಸರಾಗಿಯೆ ಉಳಿದ ಹೀರೋ ಹೋಂಡಾ ಮೋಟಾರ್‍‍ಸೈಕಲ್‍‍ಗಳಿವು..

ಜಾಯ್

ಜಾಯ್ ಬೈಕ್‍ 2001ರಲ್ಲಿ ಎಂಟ್ರಿ ಲೆವೆಲ್ ಸರಣಿಯ ಬೈಕ್‍‍ಗಳಲ್ಲಿ ಹೆಚ್ಚಾಗೆ ಸದ್ದು ಮಾಡಿತ್ತು. ಇನ್ನು ಜಾಯ್ ಬೈಕ್‍‍ಗಳು 97.2ಸಿಸಿ ಏರ್ ಕೂಲ್ಡ್ ಎಂಜಿನ್ ಎಂಜಿನ್ ಸಹಾಯದಿಂದ 7.8 ಬಿಹೆಚ್‍‍ಪಿ ಮತ್ತು 8ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಬಿಡುಗಡೆಗೊಂಡ ಹೊಸತರಲ್ಲಿ ಈ ಬೈಕ್ ಹೆಚ್ಚು ಇಂಧನ ಕಾರ್ಯಕ್ಷಮತೆಯನ್ನು ಪಡೆದಿದ್ದ ಬೈಕ್ ಆಗಿತ್ತು.

ಹೆಸರಾಗಿಯೆ ಉಳಿದ ಹೀರೋ ಹೋಂಡಾ ಮೋಟಾರ್‍‍ಸೈಕಲ್‍‍ಗಳಿವು..

ಆಂಬಿಷನ್ 135

ಸಿಬಿಝೆಡ್ ಬೈಕ್‍‍ಗಳ ಯಶಸ್ವಿಯ ನಂತರ ಹೀರೋ ಹೋಂಡಾ ಸಂಸ್ಥೆಯು ಆಂಬಿಷನ್ 135 ಬೈಕ್ ಅನ್ನು 2002ರಲ್ಲಿ ಬಿಡುಗಡೆಗೊಳಿಸಿದ್ದು, ಕಡಿಮೆ ಬೆಲೆಗೆ ಹೆಚ್ಚು ಪರ್ಫಾಮೆನ್ಸ್ ಬೈಕ್ ಅನ್ನು ನಿರೀಕ್ಷಿಸಿದ ಯುವ ಪೀಳಿಗೆಯನ್ನು ಗುರಿಯಾಗಿಸಿ ಈ ಬೈಕ್ ಹೊರತರಲಾಗಿತ್ತು.

ಇನ್ನು ಈ ಬೈಕ್‍‍ಗಳು 133ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 11 ಬಿಹೆಚ್‍‍‍ಪಿ ಮತ್ತು 10.5 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿತ್ತು.

ಹೆಸರಾಗಿಯೆ ಉಳಿದ ಹೀರೋ ಹೋಂಡಾ ಮೋಟಾರ್‍‍ಸೈಕಲ್‍‍ಗಳಿವು..

ಡಾನ್ ಸಿಡಿ100

ಡಾನ್ ಸಿಡಿ100 ಬೈಕ್‍‍ಗಳು ಮಾರುಕಟ್ಟೆಯಲ್ಲಿ ಆರಂಭಿಕ ಗ್ರಾಹಕರನ್ನು ಗುರಿಯಾಗಿಸಿಕೊಂಡು 2003ರಲ್ಲಿ ಬಿಡುಗಡೆಗೊಂಡಿತ್ತು. ಡಾನ್ ಸಿಡಿ100 ಬೈಕ್‍‍ಗಳು 97.2 ಸಿಸಿ ಏರ್ ಕೂಲ್ಡ್ ಒಹೆಚ್‍‍ಸಿ ಎಂಜಿನ್ ಸಹಾಯದಿಂದ 7.5 ಬಿಹೆಚ್‍‍ಪಿ ಮತು 8.04 ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿತ್ತು.

ಹೆಸರಾಗಿಯೆ ಉಳಿದ ಹೀರೋ ಹೋಂಡಾ ಮೋಟಾರ್‍‍ಸೈಕಲ್‍‍ಗಳಿವು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

Most Read Articles

Kannada
Read more on hero motocorp honda
English summary
forgotten motorcycles from Hero Honda, now known as Hero MotoCorp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X