ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

By Praveen Sannamani

ನೀವು ಹೊಸ ವಾಹನಗಳನ್ನು ಖರೀದಿಸಲು ಡೀಲರ್ಸ್ ಬಳಿ ಹೋದಾಗ ಶೋರಂ ಒಳಗಡೆ ಎಷ್ಟೊಂದು ಅಂದಾ ಚೆಂದ ಮಾಡಿರುತ್ತಾರೆ ನೀವೆಲ್ಲಾ ನೋಡಿಯೇ ಇರುತ್ತೀರಿ. ಗ್ರಾಹಕರನ್ನು ಆಕರ್ಷಣೆ ಮಾಡಲು ಯಾವೆಲ್ಲಾ ಪ್ಲ್ಯಾನ್ ಮಾಡಬೇಕೋ ಎಲ್ಲಾ ರೀತಿಯಲ್ಲೂ ಸಿದ್ದಮಾಡಲಾಗಿರುತ್ತೆ. ಆದ್ರೆ ಇಲ್ಲೊಬ್ಬ ಕಾರು ಡೀಲರ್ ಮಾತ್ರ ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಶೋರಂನಲ್ಲಿ ಪ್ರದರ್ಶನಕ್ಕಿಟ್ಟು ಗ್ರಾಹರಕನ್ನು ಆಕರ್ಷಣೆ ಮಾಡುತ್ತಿದ್ದಾನೆ.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಅರೇ, ಕಾರು ಶೋರಂನಲ್ಲಿ ಹೊಸ ಕಾರುಗಳನ್ನು ಪ್ರದರ್ಶನ ಮಾಡಿ ಗ್ರಾಹಕರನ್ನು ಸೆಳೆಯುವುದು ಮಾಮೂಲು. ಆದ್ರೆ ಈ ಕಾರು ಡೀಲರ್ಸ್ ಮಾತ್ರ ಅಪಘಾತಕ್ಕೀಡಾದ ಕಾರುನ್ನು ಪ್ರದರ್ಶನಕ್ಕಿಟ್ಟು ಏನು ಮಾಡ್ತಾ ಇದಾನೆ ಅನ್ನೋದೆ ಇಂಟ್ರಸ್ಟಿಂಗ್ ವಿಚಾರ. ಜೊತೆಗೆ ಅಪಘಾತವಾದ ಕ್ಯಾಮ್ರಿ ಸೆಡಾನ್ ಕಾರನ್ನು ಶೋರಂನಲ್ಲಿ ನಿಲ್ಲಿಸಲು ಹಲವು ಕಾರಣಗಳಿವೆ.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಅರಿಜೋನಾದಲ್ಲಿ ಟೊಯೊಟಾ ಡೀಲರ್ಸ್ ಒಬ್ಬ ಗ್ರಾಹಕರನ್ನು ಸೆಳೆಯಲು ಅಪಘಾತಕ್ಕೀಡಾದ ಕ್ಯಾಮ್ರಿ ಸೆಡಾನ್ ಕಾರನ್ನು ಶೋರಂನಲ್ಲಿ ಪ್ರದರ್ಶನ ಮಾಡುತ್ತಿದ್ದು, ಇದರಿಂದಲೇ ಕ್ಯಾಮ್ರಿ ಕಾರುಗಳ ಮಾರಾಟ ಪ್ರಮಾಣ ಹೆಚ್ಚಳವಾಗುತ್ತಿದೆಯೆಂತೆ.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಅಷ್ಟಕ್ಕೂ ಅಪಘಾತಕ್ಕೀಡಾದ ಕಾರಿನ ಪ್ರದರ್ಶನದಿಂದ ಹೊಸ ಕಾರು ಮಾರಾಟ ಹೆಚ್ಚಳವಾಗಲು ಹೇಗೆ ಸಾಧ್ಯ ಅಂತಾ ತಿಳಿದ್ರೆ ನಿಮಗೂ ಅಚ್ಚರಿ ಆಗದೇ ಇರಲಾರದು. ಇದಕ್ಕೆ ಕಾರಣ, ಉತ್ಕೃಷ್ಟ ಗುಣಮಟ್ಟದ ಬಾಡಿ ಕಿಟ್ ಹೊಂದಿರುವ ಕ್ಯಾಮ್ರಿ ಕಾರುಗಳಲ್ಲಿ ಸುರಕ್ಷೆತೆಗ ಹೆಚ್ಚಿನ ಒತ್ತು ನೀಡಲಾಗಿದೆ ಎಂಬುವುದನ್ನು ಸಾಬೀತುಪಡಿಸಲು ಅಪಘಾತಕ್ಕೀಡಾದ ಕಾರನ್ನೆ ಪ್ರದರ್ಶನ ಮಾಡಲಾಗುತ್ತಿದೆ.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಇದಕ್ಕೂ ಮುನ್ನ ಹೊಸ ಕ್ಯಾಮ್ರಿ ಕಾರು ಖರೀದಿಗೆ ಬಂದಿದ್ದ ಗ್ರಾಹಕನೊಬ್ಬ ಟೆಸ್ಟ್ ಡ್ರೈವ್ ಮಾಡಲು ಕಾರನ್ನು ಹೊರಗೆ ತೆಗೆದುಕೊಂಡು ಹೋಗಿದ್ದಾಗ ಸರಣಿ ಅಪಘಾತದಲ್ಲಿ ಸಿಲುಕಿ ಕಾರು ಸಂಪೂರ್ಣ ಜಖಂಗೊಂಡಿತ್ತು. ಆದರೂ ಆ ಅವಘಡದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಗ್ರಾಹಕನಿಗೆ ಒಂದೇ ಒಂದು ಸಣ್ಣ ಗಾಯ ಕೂಡಾ ಆಗಿರಲಿಲ್ಲ.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಕಾರಿನ ಬ್ಯಾನೆಟ್ ಮತ್ತು ಬೂಟ್ ಸ್ಪೆಸ್ ಸಂಪೂರ್ಣ ಜಖಂಗೊಂಡಿದ್ದರು ಕಾರಿನ ಒಳಭಾಗದಲ್ಲಿ ಕಾರು ಚಾಲಕನಿಗೆ ಮಾತ್ರ ಎಳ್ಳಷ್ಟು ತೊಂದರೆ ಆಗಿರಲಿಲ್ಲ. ಜೊತೆಗೆ ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿದ್ದ ಏರ್‌ಬ್ಯಾಗ್ ಕೂಡಾ ಸರಿಯಾದ ಸಮಯಕ್ಕೆ ಕಾರ್ಯ ನಿರ್ವಹಣೆ ಮಾಡಿದ್ದವು.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಇದರಿಂದ ಹೊಸ ಕಾರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಆ ಗ್ರಾಹಕ ಅಪಘಾತ ಮಾಡಿದ ತಪ್ಪಿಗೆ ಹೆಚ್ಚುವರಿ ಹಣ ನೀಡಿದಲ್ಲದೇ ಅದೇ ಮಾದರಿಯ ಮತ್ತೊಂದು ಹೊಸ ಕಾರು ಖರೀದಿ ಮಾಡಿದ್ದನಂತೆ. ಇದರಿಂದ ಆ ಕಾರು ಡೀಲರ್ಸ್ ನಡೆದ ಘಟನೆ ಬಗ್ಗೆ ತಲೆಕೆಡಿಸಿಕೊಳ್ಳದೇ ಅಪಘಾತವಾದ ಕಾರು ತಂದು ಶೋರಂನಲ್ಲಿ ಪ್ರದರ್ಶನ ಮಾಡುತ್ತಿದ್ದಾನೆ.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಪ್ರದರ್ಶನಕ್ಕಿಟ್ಟ ಕಾರು ಕಂಡು ಸಾವಿರಾರು ಗ್ರಾಹಕರು ಸಹ ಸುರಕ್ಷೆತೆಗೆ ಹೆಚ್ಚಿನ ಒತ್ತು ನೀಡಲಾಗಿರುವ ಕ್ಯಾಮ್ರಿ ಕಾರುಗಳನ್ನೇ ಆಯ್ಕೆ ಮಾಡುತ್ತಿದ್ದು, ಅಂದು ನಡೆದ ಅಪಘಾತವು ಇಂದು ಟೊಯೊಟಾ ಡೀಲರ್ಸ್‌ಗೆ ವರವಾಗಿ ಪರಿಣಮಿಸಿದ್ದು ಮಾತ್ರ ಸುಳ್ಳಲ್ಲ.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಇನ್ನು ಟೊಯೊಟಾ ಉತ್ಪಾದನೆಯ ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾದ ಕ್ಯಾಮ್ರಿ ಕಾರುಗಳ ಸಹ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕಾರಿನಲ್ಲಿ ಒದಗಿಸಲಾಗಿರುವ ಗುಣಮಟ್ಟದ ಸುರಕ್ಷಾ ಸೌಲಭ್ಯಗಳು ಮತ್ತು ಗುಣಮಟ್ಟದ ಬಾಡಿ ಕಿಟ್ ಕೂಡಾ ಕಾರಿನ ಮೌಲ್ಯವನ್ನು ಹೆಚ್ಚಿಸಿವೆ.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ವಿನ್ಯಾಸಗಳೊಂದಿಗೆ ಖರೀದಿಗೆ ಲಭ್ಯವಿರುವ ಕ್ರಾಮ್ರಿ ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ಪೆಟ್ರೋಲ್ ವರ್ಷನ್‌ಗೆ ರೂ.28.80 ಲಕ್ಷ ಹಾಗೂ ಹೈಬ್ರಿಡ್ ವರ್ಷನ್‌ಗಳಿಗೆ ರೂ. 37.22 ಲಕ್ಷ ಬೆಲೆ ಹೊಂದಿರುವುದು ದುಬಾರಿ ಎನ್ನಿಸಲಿವೆ.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಆದರೂ ಕಾರಿನಲ್ಲಿರುವ ಒದಗಿಸಲಾಗಿರುವ ವಿಶ್ವದರ್ಜೆ ಗುಣಮಟ್ಟದ ಸೌಲಭ್ಯಗಳು, ಬಾಡಿ ಕಿಟ್ ಮತ್ತು ಆಕರ್ಷಕ ಕಾರಿನ ಡಿಸೈನ್‌ಗಳು ಕಾರಿನ ಆಯ್ಕೆಯನ್ನು ಹೆಚ್ಚಿಸಿದ್ದು, ಟೊಯೊಟಾ ಡೀಲರ್ಸ್ ನಡೆ ಹಾಸ್ಯಾಸ್ಪದವಾಗಿ ಕಂಡರೂ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ಈ ರೀತಿಯಾಗಿಯೂ ಗ್ರಾಹಕರನ್ನು ಸೆಳೆಯಬಹುದು ಎಂಬುವುದು ಇಲ್ಲಿ ಸ್ಪಷ್ಟವಾಗಿದೆ.

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ..!!

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

Kannada
Read more on toyota sedan
English summary
Toyota dealer proudly displays crashed Camry in showroom to highlight built quality.
Story first published: Friday, May 25, 2018, 13:47 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more