ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಸದ್ಯ ವಾಹನ ಉದ್ಯಮದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಭಾರೀ ಸದ್ದು ಮಾಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗೆ ಪರ್ಯಾಯವಾಗಿ ಇವಿ ವಾಹನಗಳು ಹೊಸ ಅವಕಾಶಗಳನ್ನು ಒದಗಿಸುತ್ತಿದೆ.

By Rahul Ts

ಸದ್ಯ ವಾಹನ ಉದ್ಯಮದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಭಾರೀ ಸದ್ದು ಮಾಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗೆ ಪರ್ಯಾಯವಾಗಿ ಇವಿ ವಾಹನಗಳು ಹೊಸ ಅವಕಾಶಗಳನ್ನು ಒದಗಿಸುತ್ತಿದ್ದು, ಅದರ ಸಾಧಕ-ಬಾಧಕ ಕುರಿತಾದ ಚರ್ಚೆ ಕೂಡಾ ಪ್ರಮುಖವಾಗಿದೆ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳಿಂದಾಗಿ ಉಂಟಾಗುತ್ತಿರುವ ಮಾಲಿನ್ಯ ಪ್ರಮಾಣವು ಹಲವು ಸಮಸ್ಯೆಗೆ ಕಾರಣವಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಚಯಿಸಲಾಗುತ್ತಿರುವ ಇವಿ ವಾಹನಗಳು ಮಾಲಿನ್ಯ ತಡೆಯಲು ಹೊಸ ಪರಿಹಾರ ಎಂದೇ ಬಿಂಬಿಸಲಾಗುತ್ತಿದೆ. ಹಾಗಾದ್ರೆ ವಿದ್ಯುತ್ ವಾಹನಗಳನ್ನು ಬಳಕೆ ಮಾಡುವುದರಿಂದ ಏನು ಅನುಕೂಲತೆಗಳಿವೆ ಜೊತೆಗೆ ಯಾವೆಲ್ಲಾ ಅನಾನುಕೂಲತೆಗಳಿವೆ ಎನ್ನುವ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಅನಾನುಕೂಲತೆಗಳು

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆಯೆ ವಿದ್ಯುತ್ ವಾಹನಗಳನ್ನು ಬಳಸಲು ಪ್ರಮುಖ ಅನಾನುಕೂಲ ಎನ್ನಬಹುದು. ಏಕೆಂದರೆ ದೇಶದಲ್ಲಿ ವಿದ್ಯುತ್ ವಾಹನಗಳು ಹೆಚ್ಚುತ್ತಿದ್ದರೂ, ಇವಿ ಚಾರ್ಜಿಂಗ್ ಸ್ಟೇಷನ್‍‍ಗಳು ಮಾತ್ರ ಕಡಿಮೆಯೆ ಇದೆ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಾಗಿದ್ದಲ್ಲಿ ಪೆಟ್ರೋಲ್ ಬಂಕ್ ಮತ್ತು ಗ್ಯಾಸ್ ಸ್ಟೇಷನ್‍‍ಗಳಿವೆ ಆದರೆ ವಿದ್ಯುತ್ ವಾಹನಗಳಿಗಾಗಿ ಇವಿ ಸ್ಟೇಷನ್‍‍ಗಳು ಕಡಿಮೆ ಇರುವುದು ನಾವು ಗಮನಿಸಲೇಬೇಕು.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ದುಬಾರಿ ಬೆಲೆ

ಎಲೆಕ್ಟ್ರಿಕ್ ವಾಹನಗಳನ್ನು ಕೊಳ್ಳುವುದು ಅಷ್ಟು ಸುಲಭವಾದ ಕೆಲಸವಲ್ಲ. ಏಕೆಂದರೆ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗಿಂತ ಇಂಧನ ಆಧಾರಿತ ವಾಹನಗಳು ದೊರೆಯುತ್ತಿವೆ. ಭಾರತದಲ್ಲಿ ವಾಹನ ತಯಾರಕ ಸಂಸ್ಥೆಗಳು ವಿದ್ಯುತ್ ವಾಹನಗಳನ್ನು ತಯಾರಿಸುವ ಯೋಜನೆಯಿದ್ದರು ಅವುಗಳ ಬೆಲೆ ಹೆಚ್ಚು. ಏಕೆಂದರೆ ಇವುಗಳಲ್ಲಿ ಬಳಸಲಾಗುತ್ತಿರುವ ಬ್ಯಾಟರಿಯನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಬೇಕು.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಶಕ್ತಿ ಮತ್ತು ರೇಂಜ್‍‍ನ ಕೊರತೆ

ವಿದ್ಯುತ್ ವಾಹನಗಳಿಗೆ ಹೋಲಿಸಿದರೆ ಇಂಧನ ಆಧಾರಿತ ವಾಹನಗಳು ಉತ್ತಮ ವೇಗವನ್ನು ನೀಡುತ್ತದೆ. ಟೆಸ್ಲಾ ಮತ್ತು ಫೋಕ್ಸ್‌ವ್ಯಾಗನ್ ಸಂಸ್ಥೆಗಳ ವಿದ್ಯುತ್ ವಾಹನಗಳು ಉತ್ತಮ ಶ್ರೇಣಿಯಲ್ಲಿ ತಯಾರುಮಾಡಲಾಗಿದ್ದು, ಸರಾಸರಿ ಒಂದು ಬಾರಿ ಚಾರ್ಜ್‍‍ಗೆ ಸುಮಾರು 100 ರಿಂದ 200 ಮೈಲಿಗಳವರೆಗೆ ಸುಲಭವಾಗಿ ಚಲಿಸಬಲ್ಲವು. ಆದ್ದರಿಂದ ಲಾಂಗ್ ಡ್ರೈವ್‍‍ಗಳಿಗೆ ಈಗಲೂ ಜನರು ಇಂಧನ ಆಧಾರಿತ ಕಾರುಗಳನ್ನೆ ಆಯ್ಕೆಮಾಡಿಕೊಳ್ಳುತ್ತಾರೆ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಕನಿಷ್ಠ ಪ್ರಮಾಣದ ಮಾಲಿನ್ಯ

ವಿದ್ಯುತ್ ವಾಹನಗಳು ಶೇಕಡಾ 100ರಷ್ಟು ಎಮಿಶನ್ ಮುಕ್ತವಾಗಿರುವುದಿಲ್ಲ. ಪರೋಕ್ಷವಾಗಿ ಪರಿಸರಕ್ಕೆ ಮಾಲಿನ್ಯವನ್ನು ಉಂಟುಮಾಡುತ್ತವೆ. ಏಕೆಂದರೆ ವಿದ್ಯುತ್ ವಾಹನಗಳಲ್ಲಿ ಬಳಸಲಾಗಿರುವ ಬ್ಯಾಟರಿಗಳನ್ನು ನವೀಕರಿಸಲಾದ ಇಂಧನ ಮೂಲಗಳಿಂದ ತಯಾರಿಸಲಾಗುತ್ತಿವೆ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಇವುಗಳೆಲ್ಲ ವಿದ್ಯುತ್ ವಾಹನಗಳ ಅನಾನುಕೂಲತೆಗಳಾದರೆ, ಅನುಕೂಲತೆಗಳ ಬಗ್ಗೆ ಮಾಹಿತಿ ಮುಂದಿದೆ ಓದಿ..

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಅನುಕೂಲತೆಗಳು

ಪರಿಸರ ಸ್ನೇಹಿ

ವಿದ್ಯುತ ವಾಹನಗಳನ್ನು ಬಳಸಿಕೊಳ್ಳಲು ಮೂಲ ಕಾರಾಣವೆಂದರೆ ಇವು ಪರಿಸರ ಸ್ನೇಹಿ. ಇವುಗಳು ಇಂಧನ ಆಧಾರಿತ ಕಾರುಗಳ ಹಾಗೆ ವಾಯು ಮಾಲಿನ್ಯಕ್ಕೆ ಕಾರಣವಾಗುವ ಕೆಟ್ಟ ಅನಿಲಗಳನ್ನು ಬಿಡುಗಡೆ ಮಾಡುವುದಿಲ್ಲ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಯಾವುದೇ ಗ್ಯಾಸ್ ಅಥವಾ ಇಂಧನದ ವೆಚ್ಚವಿಲ್ಲ

ವಿದ್ಯುತ್ ವಾಹನಗಳಿಗೆ ಇಂಧನ ಅಥವಾ ಗ್ಯಾಸ್ ಅವಶ್ಯಕತೆಯು ಇಲ್ಲದಿರುವ ಕಾರಣ ಇಂಧನ ಮತ್ತು ಗ್ಯಾಸ್‍ ಉತ್ಪನ್ನಗಳ ಬೆಲೆಗಳಿಂದ ಗ್ರಾಹಕರು ತಪ್ಪಿಸಿಕೊಳ್ಳಬಹುದು. ವಿದ್ಯುತ್ ವಾಹನಗಳಿಗೆ ಒಮ್ಮೆ ಚಾರ್ಜ್ ಮಾಡಿದರೆ ಸಾಕು ಬರೊಬ್ಬರಿ 100 ಮೈಲಿ ಚಲಿಸುವ ಸಾಮರ್ಥ್ಯಗಳನ್ನು ಪಡೆದಿರುತ್ತವೆ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಹೆಚ್ಚು ಅನುಕೂಲಕರ

ವಿದ್ಯುತ್ ವಾಹನಗಳು ರಿಚಾರ್ಜ್ ಮಾಡಲು ಸುಲಭವಾಗಿದ್ದು, ಮನೆಯಿಂದ ವಾಹನವನ್ನು ಹೊರತೆಗೆಯುವ ಮುನ್ನ ಪೆಟ್ರೋಲ್ ಅಥವಾ ಗ್ಯಾಸ್ ಸ್ಟೇಷನ್‍‍ಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ನಿಯಮಿತ ಮನೆಯಲ್ಲಿಯೇ ಬಳಸಬಹುದಾದ ಸಾಕೆಟ್ ಇದ್ದರೆ ಸಾಕು.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ವ್ಯಾಪಕ ವೇಗ

ವಿದ್ಯುತ್ ಕಾರುಗಳು ಒಂದು ಬಾರಿಯ ಚಾರ್ಜ್‍‍ಗೆ ಸುಮಾರು 100 ರಿಂದ 200 ಮೈಲಿಗಳು ಚಲಿಸಬಲ್ಲವು. ಟೆಸ್ಲಾ ಸಂಸ್ಥೆಯ ಕಾರುಗಳು ಸುಮಾರು 300 ಮೈಲಿಗಳಷ್ಟು ಚಲಿಬಲ್ಲ ವೇಗವನ್ನು ಹೊಂದಿದ್ದರೆ, ಇನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯ ವಿದ್ಯುತ್ ಕಾರುಗಳು ಪ್ರತೀ ಚಾರ್ಜ್‍‍ಗೆ ಸುಮಾರು 400 ಮೈಲಿ ಚಲಿಸಬಲ್ಲ ವೇಗವನ್ನು ಹೊಂದಿರುತ್ತವೆ. ಆದರೆ ಇವುಗಳು ಸಮಯ ಕಳೆದಂತೆ ಈ ಸಂಖ್ಯೆಗಳು ಸುಧಾರಣೆಗೊಳ್ಳುತ್ತವೆ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಅಗ್ಗದ ಬೆಲೆಯಲ್ಲಿ ಕಾರ್ಯನಿರ್ವಹಣೆ

ಜಾಗತಿಕವಾಗಿ ವಿದ್ಯುತ್ ದರಗಳು ಕುಸಿಯುತ್ತಿರುವ ಕಾರಣದಿಂದಾಗಿ ವಿದ್ಯುತ್ ವಾಹನಗಳನ್ನು ಬಳಸಬಹುದಾಗಿದ್ದು, ಪ್ರತಿ ಮೈಲಿಗೆ ವಿದ್ಯುತ್ ವಾಹನಗಳು ಗ್ಯಾಸೊಲಿನ್ ವೆಚ್ಚಕ್ಕಿಂತ ಸುಮಾರು ಶೇಕಡಾ 25 ರಿಂದ 30ರಷ್ಟು ಕಡಿಮೆ ಎನ್ನಲಾಗಿದೆ. ಪ್ರಪಂಚದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆಯು ಅಧಿಕವಾಗಿದ್ದು, ಇದರಿಂದಾಗಿ ಪರಿಸರ ಸ್ನೇಹಿಯಾದ ಮತ್ತು ಅಗ್ಗದ ಬೆಲೆಯಲ್ಲಿ ವಿದ್ಯುತ್ ವಾಹನಗಳನ್ನು ಬಳಸಬಹುದು.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಕಡಿಮೆ ಶಬ್ದ

ಇಂಧನ ಆಧಾರಿತ ವಾಹನಗಳಿಗಿಂತ ವಿದ್ಯುತ್ ವಾಹನಗಳು ಕಡಿಮೆ ಶಬ್ದವನ್ನು ಮಾಡುತ್ತವೆ ಆದ್ದರಿಂದ ಇವು ಪರಿಸರದಲ್ಲಿ ಶಬ್ದ ಮಾಲಿನ್ಯಕ್ಕೆ ದಾರಿ ಮಾಡಿಕೊಡುವುದಿಲ್ಲ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಬ್ಯಾಟರಿ ವೆಚ್ಚ

ವಿದ್ಯುತ್ ವಾಹನಗಳಲ್ಲಿ ಬ್ಯಾಟರಿಯೇ ಮೂಲವಾದ ಕಾರಣ ಬಹುತೇಕ ಬ್ಯಾಟರಿಗಳು ಲೀಥಿಯಂನಿಂದ ತಯಾರು ಮಾಡಲಾಗುತ್ತದೆ. ದಿನಕಳೆದಂತೆ ಬ್ಯಾಟರಿಗಳ ಬೆಲೆಯು ಕಡಿಮೆಯಾಗುತ್ತಿದ್ದು, ಒಳ್ಳೆಯ ಬ್ಯಾಟರಿಯನ್ನು ಖರೀದಿಸಿದರೆ ಸುಮಾರು 10 ವರ್ಷದ ವರೆಗು ಬಳಕೆ ಬರುತ್ತದೆ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಹೆಚ್ಚು ಪರಿಣಾಮಕಾರಿ

ಮಾಹಿತಿಗಳ ಪ್ರಕಾರ ಒಂದು ವಿದ್ಯುತ್ ವಾಹನವು ದಹನಕಾರಿ ಎಂಜಿನ್ ಹೊಂದಿರುವ ವಾಹನಗಳಿಗಿಂತ ಮೂರು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಸುಧಾರಿತ ಸುರಕ್ಷತೆ

ವಿದ್ಯುತ್ ವಾಹನಗಳು ರಸ್ತೆ ಅಪಘಾತದ ಸಮಯದಲ್ಲಿ ಸ್ಥಿರವಾಗಿರಲು ಗುರುತ್ವಾಕರ್ಷಣೆಯ ಕೇಂದ್ರವನ್ನು ನೀಡಲಾಗಿದ್ದು, ಜೊತೆಗೆ ಇವುಗಳಲ್ಲಿ ಯಾವುದೇ ಇಂಧನ ಅಥವ ಅನಿಲ ಇಲ್ಲದಿರುವ ಕಾರಣ ಸ್ಪೋಟಗೊಳ್ಳುವ ಸಾಧ್ಯತೆಗಳಿರುವುದಿಲ್ಲ.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಶಕ್ತಿ ಭದ್ರತೆ

ಎಲೆಕ್ಟ್ರಿಕ್ ಕಾರುಗಳಲ್ಲಿ ಯಾವುದೇ ಇಂಧನ ಅಗತ್ಯವಿಲ್ಲದಿರುವುದರಿಂದ ಅವುಗಳನ್ನು ಬೇರೆ ದೇಶದಿಂದ ಆಮದು ಬೆಲೆಯನ್ನು ಕಡಿಮೆಮಾಡಬಹುದು ಮತ್ತು ಅವುಗಳನ್ನು ಹೆಚ್ಚು ಶಕ್ತಿಯುತವಾಗಿಸಬಹುದು.

ವಿದ್ಯುತ್ ವಾಹನಗಳ ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆಗಳು..

ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಅನೇಕ ದೇಶಗಳು ಇಂಧನವನ್ನು ಆಮದು ಮಾಡಿಕೊಳ್ಳುಲು ತಮ್ಮ ಸಂಪತ್ತನ್ನು ಖರ್ಚು ಮಾಡುತ್ತಿವೆ ಮತ್ತು ಇವುಗಳ ಬೆಲೆಯು ಕೂಡಾ ಹೆಚ್ಚುತ್ತಲೆ ಇವೆ. ಆದ್ದರಿಂದ ಸರ್ಕಾರವು ವಿದ್ಯುತ್ ವಾಹನಗಳ ಬಳಕೆಯನ್ನು ಗಮನಾರ್ಹವಾಗಿ ತೆಗೆದುಕೊಂಡಲ್ಲಿ ಸಾರ್ವಜನಿಕ ಖಜಾನೆಯಿಂದ ಹೆಚ್ಚು ವೆಚ್ಚವಾಗದಿರುವ ಹಾಗೆ ರಕ್ಷಿಸಿಕೊಳ್ಳಬಹುದು.

Most Read Articles

Kannada
English summary
Advantages And Disadvantages Of Electric Vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X