ಹೀರೋ ಹೋಂಡಾ ಗ್ಲಾಮರ್ ಬೈಕ್ ಗೆ ಹೊಸ ಲುಕ್

ಹೊಸ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ನೂತನ ಗ್ಲಾಮರ್ ಬೈಕನ್ನು ಹೊರತರಲಾಗಿದೆ. ಎಂಜಿನ್, ಪವರ್, ಮೈಲೇಜ್ ಎಲ್ಲವೂ ಹಿಂದಿನ ಬೈಕ್ ನಂತೆಯೇ ಇದೆ. ಅಂದ್ರೆ ಏರ್ ಕೂಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ನ ಎಂಜಿನ್ ಹೊಂದಿದ್ದು 4 ಸಾವಿರ ಆರ್ ಪಿಎಂಗೆ 9 ಹಾರ್ಸ್ ಪವರ್ ನೀಡುತ್ತದೆ.
ಹಾಗಾದ್ರೆ ಹೊಸ ಆವೃತ್ತಿಯಲ್ಲಿ ಹೊಸದೇನಿದೆ ಎಂದು ನೀವು ಕೇಳಬಹುದು. ಕಂಪನಿಯು ತನ್ನ ಜನಪ್ರಿಯ ಬೈಕ್ ಗಳಿಗೆ ಒಂದಿಷ್ಟು ಹೊಸ ಸ್ಟಿಕರ್ ಅಂಟಿಸಿ ದೀಪಾವಳಿ, ಹೊಸ ವರ್ಷ, ಹೀಗೆ ವಿಶೇಷ ದಿನಗಳಂದು ಹೊರತರುವುದು ಇದು ಮೊದಲಲ್ಲ. ನೂತನ ಬೈಕ್ ನಲ್ಲಿ ಹೊಸದಾಗಿ ಡಿಜಿಟಲ್ ಡಿಸ್ ಪ್ಲೇ ಅಳವಡಿಸಲಾಗಿದ್ದು, ಹೊಸ ಸ್ಟಿಕರ್, ಹೆಡ್ ಲ್ಯಾಂಪ್ ಮರು ವಿನ್ಯಾಸ ಮತ್ತು ಟ್ಯಾಂಕ್ ಎಕ್ಸ್ ಟೆನ್ಸನ್ ಮರು ವಿನ್ಯಾಸ ಮಾಡಲಾಗಿದೆ. ಸೈಲೆನ್ಸರ್ ಹೀಟ್ ಶೀಲ್ಡ್, ಹೆಡ್ ಲೈಟ್ ಇತ್ಯಾದಿಗಳನ್ನು ಮರು ವಿನ್ಯಾಸ ಮಾಡಲಾಗಿದ್ದು, ನೂತನ ಬೈಕ್ ಇನ್ನಷ್ಟು ಗ್ಲಾಮರ್ ಆಗಿದೆ.
ಹೀರೋ ಹೋಂಡಾ ನೂತನ ಗ್ಲಾಮರ್ ನ ಫ್ರಂಟ್ ಡಿಸ್ಕ್ ಆವೃತ್ತಿಗೆ ದೆಹಲಿ ಎಕ್ಸ್ ಶೋರೂಂನಲ್ಲಿ 51,200 ರೂ. ಇದ್ದು, ಫ್ರಂಟ್ ಡ್ರಮ್ ಆವೃತ್ತಿಗೆ ಸುಮಾರು 49,300(ಎಕ್ಸ್ ಶೋರೂಂ ದೆಹಲಿ) ಇದೆ. ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯ 100-125 ಸಿಸಿ ಸೆಗ್ಮೆಂಟ್ ಗೆ ಹೀರೋ ಹೋಂಡಾ ಹೆಚ್ಚು ಒತ್ತು ನೀಡುತ್ತಿದೆ. ಈ ಸೆಗ್ಮೆಂಟ್ ನ ಬೈಕ್ ಗಳೇ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.


Click it and Unblock the Notifications








