ಹೀರೋ ಹೋಂಡಾ ಇನ್ನು ಮುಂದೆ ಹೀರೋ ಮೊಟೊಕಾರ್ಪ್

Hero MotoCorp
ಹೋಂಡಾ ಕಂಪನಿಯ ಮೈತ್ರಿಯ ಕೊಂಡಿ ಕಡಿದುಹೋದ ಮೇಲೆ ಅದರ ಹೆಸರು ತನಗ್ಯಾಕೆ. ಹಾಗಂತ ದೇಶದ ಬೃಹತ್ ದ್ವಿಚಕ್ರವಾಹನ ತಯಾರಿಕಾ ಕಂಪನಿ ಹೀರೋ ಹೋಂಡಾ ತನ್ನ ಹೆಸರನ್ನು ಬದಲಾಯಿಸಿದೆ. ಅದರ ಹೊಸ ಹೆಸರು- ಹೀರೋ ಮೊಟೊಕಾರ್ಪ್. ಹೊಸ ನಾಮಕರಣಕ್ಕೆ ಕಂಪನಿಯ ಷೇರುದಾರರು ಸಮ್ಮತಿ ನೀಡಿದ್ದಾರೆ.

ಕಳೆದ ವರ್ಷ ಹೀರೋ ಗ್ರೂಪ್ ಮತ್ತು ಹೋಂಡಾ ಜಂಟಿ ಉದ್ಯಮಕ್ಕೆ ಮಂಗಳ ಹಾಡಿದ್ದವು. ಹೀರೋ ಮೋಟರ್ಸ್ ಕಂಪನಿಯು ಹೋಂಡಾದ ಶೇ. 26ರಷ್ಟು ಪಾಲನ್ನು ಸುಮಾರು 3,841.83 ಕೋಟಿ ರು.ಗೆ ಖರೀದಿಸಿತ್ತು.

ಇದರಿಂದಾಗಿ ಜಂಟಿಉದ್ಯಮದ ಹೆಸರನ್ನು ಬದಲಾಯಿಸುವ ಅವಶ್ಯಕತೆ ಹೀರೋ ಗ್ರೂಪ್ ಗಿತ್ತು. ಹೊಸ ಹೆಸರು ದೇಶಿ ವಾಹನ ಮಾರುಕಟ್ಟೆ ಮಾತ್ರವಲ್ಲದೇ ಜಾಗತಿಕವಾಗಿ ಗಮನ ಸೆಳೆಯುವಂತ್ತಿರಬೇಕೆಂದು ಕಂಪನಿ ಬಯಸಿತ್ತು. ಹೊಸ ಬ್ರಾಂಡ್ ಹೆಸರಿಗಾಗಿ ಕಂಪನಿಯು ಸಾಕಷ್ಟು ಶ್ರಮವಹಿಸಿತ್ತು.

"ಹೊಸ ಹೀರೋ ಮೊಟೊಕಾರ್ಪ್ ಹೆಸರಿಗೆ ಷೇರುದಾರರು ಸಮ್ಮತಿಸಿದ್ದಾರೆ. ಮೊಟೊಕಾರ್ಪ್ ಎಂಬ ಹೆಸರು ಕಂಪನಿಯ ಜಾಗತಿಕ ಮಹಾತ್ವಕಾಂಕ್ಷೆಗೆ ಸೂಕ್ತವಾದ ಹೆಸರಾಗಿದೆ" ಎಂದು ಹೀರೋ ಮೋಟರ್ಸ್ ಹೇಳಿದೆ. ಭಾರತದಲ್ಲಿ ಕಂಪನಿಯು ಮುಂದಿನ ವರ್ಷ ಹೊಸ ಘಟಕವೊಂದನ್ನು ತೆರೆಯಲಿದೆ.

More from DriveSpark

Article Published On: Tuesday, June 21, 2011, 14:37 [IST]
English summary
Hero Honda, India's largest two-wheeler manufacturer has officially changed its name to Hero MotoCorp after its shareholders approved the name change. It may be recalled that Hero Motors and Honda decided to end their 26 year joint venture last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+