ಜಾಗತಿಕ ಪಾಲುದಾರನ ಹುಡುಕಾಟದಲ್ಲಿ ಹೀರೋ ಹೋಂಡಾ

ಕಂಪನಿಯು ಜಪಾನಿನ ಹೋಂಡಾದೊಂದಿಗೆ 2014ರವರೆಗೆ ಪರವಾನಿಗೆ ಒಪ್ಪಂದವನ್ನು ಹೊಂದಿದೆ. ಇನ್ನು ಮುಂದೆ ಹೆಚ್ಚು ಸ್ವತಂತ್ರವಾಗಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಆರ್ ಆಂಡ್ ಡಿ ವಿಭಾಗಕ್ಕೆ ನೂರಾರು ಪರಿಣತರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.
"ಹೋಂಡಾದೊಂದಿಗೆ ಪಾಲುದಾರಿಕೆ ಕೊನೆಗೊಂಡಿದೆ. ಇದರಿಂದ ಇನ್ನು ಸ್ವತಂತ್ರವಾಗಿ ಆರ್ ಆಂಡ್ ಡಿಗೆ ಹೆಚ್ಚು ಒತ್ತು ನೀಡಲು ಕಂಪನಿಗೆ ಸದಾವಕಾಶವಾಗಿದೆ" ಎಂದು ಹೀರೋ ಹೋಂಡಾ ಮೋಟರ್ಸ್ ನ ಹಿರಿಯ ಉಪಾಧ್ಯಕ್ಷರಾದ ಅನಿಲ್ ದುವಾ ಹೇಳಿದ್ದಾರೆ. ಕಂಪನಿಯು ತಾಂತ್ರಿಕವಾಗಿ ಹೆಚ್ಚು ಸದೃಢತೆ ಹೊಂದಲು ಹೆಚ್ಚು ಹೆಚ್ಚು ಹೂಡಿಕೆ ಮಾಡಲಾಗುವುದು ಎಂದರು.
"ಈಗ ಆರ್ ಆಂಡ್ ಡಿ ವಿಭಾಗದಲ್ಲಿ ಕೆಲವು ನೂರು ಸಂಖ್ಯೆಯಲ್ಲಿ ಉದ್ಯೋಗಿಗಳಿದ್ದಾರೆ. ನಾವು ಇನ್ನಷ್ಟು ಜನರ ನೇಮಕಾತಿ ಮತ್ತು ಸಲಕರಣೆಗಾಗಿ ಹೂಡಿಕೆ ಮಾಡಲಿದ್ದೇವೆ" ಎಂದು ಹೇಳಿದ್ದಾರೆ. ಆದರೆ ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಲಾಗುವುದು ಎಂದು ತಿಳಿಸಲು ಡುವಾ ನಿರಾಕರಿಸಿದ್ದಾರೆ.
ಕಂಪನಿಯು ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟಾರೆ 54,02,444 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಈ ಆರ್ಥಿಕ ವರ್ಷದಲ್ಲಿ 60 ಲಕ್ಷಕ್ಕಿಂತ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. (ಪಿಟಿಐ)


Click it and Unblock the Notifications








