ಹರ್ಲಿ ಡೇವಿಡ್ ಸನ್ ಖರೀದಿಸಿದ ಭಾರತದ ಮೊದಲ ಮಹಿಳೆ

ಇದಕ್ಕೂ ಮುನ್ನ ಶೀಜಾ ಯಮಾಹ ರಾಜ್ ದೂತ್ 350 ಬೈಕ್ ಸವಾರಿ ಮಾಡುತ್ತಿದ್ದರು. ಇದೀಗ ಅವರು ಆಯ್ಕೆ ಮಾಡಿಕೊಂಡಿರುವುದು ಹರ್ಲಿ ಡೇವಿಡ್ ಸನ್ ನ ಐರನ್ 883 ಎಂಬ ಆಕರ್ಷಕ ಬೈಕ್. ಇದನ್ನು ವಾರಕ್ಕೊಮ್ಮೆಯಾದರೂ ರೈಡ್ ಮಾಡುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹರ್ಲಿ ಡೇವಿಡ್ ಸನ್ ಬೈಕ್ ಶೋರೂಂ ಆರಂಭವಾದಗ ಸುಮ್ಮನೆ ಹೋಗಿ ಈ ಬೈಕ್ ಕುರಿತು ವಿಚಾರಿಸಿದರಂತೆ. ಆಗ ಶೋರೂಂನದಲ್ಲಿದ್ದವರು ಭಾರತದಲ್ಲಿ ಇಲ್ಲಿವರೆಗೆ ಯಾವುದೇ ಮಹಿಳೆ ಈ ಬೈಕ್ ಖರೀದಿಸಿಲ್ಲವೆಂದರಂತೆ. ತಾನೇ ಯಾಕೆ ಈ ಬೈಕ್ ಗೆ ಭಾರತದ ಮೊದಲ ಮಾಲಕಿಯಾಗಬಾರದೆಂದು ಅನಿಸಿದೇ ತಡ ಹರ್ಲಿ ಬೈಕ್ ಖರೀದಿಸಿದ್ದಾರೆ.
ಶೀಜಾ ಮ್ಯಾಥ್ಯುಗೆ ಬೈಕ್ ರೈಡ್ ಕ್ರೇಜ್. ಜೊತೆಗೆ ಕಾರುಗಳೆಂದರೂ ಇಷ್ಟ. ಇವರ ಬಳಿ ಈಗಾಗಲೇ ಷೆವರ್ಲೆ ಕ್ರೂಝ್ ಮತ್ತು ಟಾಟಾ ಸಫಾರಿ ಕಾರುಗಳಿವೆ.
ಈ ಬೈಕ್ ಎಕ್ಸ್ ಶೋರೂಂ ದರ ಸುಮಾರು 6.5 ಲಕ್ಷ ರು. ಆಸುಪಾಸಿನಲ್ಲಿದೆ. ಶೀಜಾ ಮ್ಯಾಥ್ಯು ಈ ಬೈಕ್ ಗೆ ಸುಮಾರು 8 ಲಕ್ಷ ರು. ನೀಡಿದ್ದಾರಂತೆ! ಸದ್ಯ ಭಾರತದ ರಸ್ತೆಯಲ್ಲಿ ಹರ್ಲಿ ಡೇವಿಡ್ ಸನ್ ನ 15 ಬೈಕ್ ಮಾಡೆಲ್ ಗಳು ದೊರಕುತ್ತಿವೆ. ಇವುಗಳ ದರ ಸುಮಾರು 5.5 ಲಕ್ಷ ರು.ನಿಂದ 38.66 ಲಕ್ಷ ರು.ವರೆಗಿದೆ.


Click it and Unblock the Notifications








