ಬೆಂಗ್ಳೂರಲ್ಲಿ ಫ್ಯಾಟ್ ಬಾಬ್ ಲಾಂಚ್; ದರ ಎಷ್ಟು?
ವಿಶ್ವದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹರ್ಲಿ ಡೇವಿಡ್ಸನ್ ಬಹುನಿರೀಕ್ಷಿತ ಫ್ಯಾಟ್ ಬಾಬ್ ಬೈಕ್ ಅನ್ನು ಉದ್ಯಾನ ನಗರಿ ಬೆಂಗಳೂರಿನಲ್ಲಿ ನಡೆದ ರಾಕ್ ರೈಡರ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ ಲಾಂಚ್ ಮಾಡಲಾಗಿದೆ.
ದರ ಮಾಹಿತಿ: 12. 8 ಲಕ್ಷ ರು. (ಪ್ರಾರಂಭಿಕ ದರ)
ಡೈನಾ ಫ್ಯಾಮಿಲಿಯಿಂದ ಆಗಮನವಾಗಿರುವ ಕಂಪ್ಲೀಟ್ ನಾಕ್ ಡೌನ್ (ಸಿಕೆಡಿ) ಬೈಕ್ ಆದ ಫ್ಯಾಟ್ ಬಾಬ್ ಇದೇ ಮೊದಲ ಬಾರಿಗೆ ದೇಶದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಈ ವರೆಗೆ ಹರ್ಲಿ ಡೇವಿಡ್ಸನ್‌ನಿಂದ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮಾರಾಟವಾಗುತ್ತಿದ್ದವು.
ಇದರೊಂದಿಗೆ ಬೆಂಗಳೂರಿನ ಹರ್ಲಿ ಡೇವಿಡ್ಸನ್ ಬೈಕ್ ಪ್ರಿಯರಿಗೆ ಶುಭ ಸಂದೇಶ ಒದಗಿ ಬಂದಿದೆ. ಖಂಡಿತವಾಗಿಯೂ ನೂತನ ಟ್ವಿನ್ ಹೆಡ್‌ಲೈಟ್ಸ್ ಗ್ರಾಹಕರ ಮನಸೆಳೆಯುವ ನಿರೀಕ್ಷೆಯಿದೆ.

ಫ್ಯಾಟ್ ಬಾಬ್ ಬಿಡುಗಡೆ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಹರ್ಲಿ ಡೇವಿಡ್ಸನ್ ಮ್ಯಾನೇಜಿಂಗ್ ಡೈರಕ್ಟರ್ ಅನೂಪ್ ಪ್ರಕಾಶ್, ನೂತನ ಬೈಕ್ ಸಿಕೆಡಿ ಸೌಲಭ್ಯದಲ್ಲಿ ಲಭ್ಯವಿದೆ ಎಂಬುದನ್ನು ತಿಳಿಸಿದ್ದಾರೆ. ಸಿಕೆಡಿ ನೆರವಿನಿಂದ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯನ್ನು ಅನೂಪ್ ಹೊಂದಿದ್ದಾರೆ.

ಹರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್ ಏರ್ ಕೂಲ್ಡ್, ಟ್ವಿನ್ ಕ್ಯಾಮ್ 96 ಟಿಎಂ ಎಂಜಿನ್‌ನಲ್ಲಿ ಲಭ್ಯವಿದ್ದು, ಇದು 3500 ಆರ್‌ಪಿಎಂ ಪೀಕ್ ಟರ್ಕ್ಯೂನಲ್ಲಿ 126 ಎನ್ ಎಂ ಉತ್ಪಾದಿಸಲಿದೆ. ಸೂಪರ್ ಎಫಿಷಿಯಂಟ್ 1585 ಸಿಸಿ ಎಂಜಿನ್ ಸಿಕ್ಸ್ ಸ್ಪೀಡ್ ಕ್ರೂಸ್ ಡ್ರೈವ್‌ನಿಂದ ನಿರ್ಮಿಸಲ್ಪಟ್ಟಿದೆ. ಇದರಿಂದ ಭಾರತೀಯ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ನೆರವಾಗಲಿದೆ.

ಹಾರ್ಡ್‌ಕೋರ್ ಫ್ರಂಟ್ ಎಂಡ್, ಟ್ವಿನ್ ಹೆಡ್‌ಲೈಟ್ಸ್ ಹಾಗೂ 1600 ಸಿಸಿ ವಿ-ಟ್ವಿನ್ ಸೌಂಡ್ ಟ್ರ್ಯಾಕ್ ನೈಜ ಹರ್ಲಿ ಡೇವಿಡ್ಸನ್ ಸಂಕೇತವಾಗಿದೆ.

ಬೆಂಗಳೂರಿನಲ್ಲಿ ಆಯೋಜನೆಗೊಂಡ ರಾಕ್ ರೈಡರ್ಸ್ ಸೀಸನ್ III ಹರ್ಲಿ ಡೇವಿಡ್ಸನ್ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಹರ್ಲಿ ಡೇವಿಡ್ಸನ್ ಹೆಮ್ಮೆಯಿಂದ ಫ್ಯಾಟ್ ಬಾಬ್ ಆವೃತ್ತಿಯಲ್ಲಿ 18.8 ಲೀಟರ್ ಎಂಜಿನ್ ಆಳವಡಿಸಿದೆ.

ಬೆಂಗಳೂರಿನಲ್ಲಿ ಸಾಗಿದ ಹರ್ಲಿ ಡೇವಿಡ್ಸನ್ ರಾಕ್ ರೈಡರ್ಸ್ ಕಾರ್ಯಕ್ರಮದ ಕೆಲವೊಂದು ಆಕರ್ಷಕ ಫೋಟೋಸ್

Click it and Unblock the Notifications