ದೇಶದಲ್ಲಿ ಹರ್ಲಿ ಡೇವಿಡ್‌ಸನ್ ಬೈಕ್ ಘಟಕ
ಬಿಎಂಡಬ್ಲ್ಯು, ಕವಾಸಕಿ, ಕೆಟಿಎಂ ಮತ್ತು ಹ್ಯೋಸಂಗ್ ಬೈಕುಗಳಿಗೆ ಸಮರ್ಥ ಪೈಪೋಟಿ ನೀಡಲು ಹರ್ಲಿ ಡೇವಿಡ್ ಸನ್ ನೂತನ ಘಟಕ ಸಾಥ್ ನೀಡಲಿದೆ. ಉತ್ಪಾದನೆಯ ಸ್ಥಳೀಕರಣದಿಂದಾಗಿ ಉತ್ಪಾದನೆ ವೆಚ್ಚ ತಗ್ಗಲಿದೆ. ಸಹಜವಾಗಿ ಬೈಕ್ ದರಗಳೂ ಅಗ್ಗವಾಗಲಿದೆ. ದರ ಕಡಿಮೆಯಾದರೆ ದೇಶದಲ್ಲಿ ಹರ್ಲಿ ಬೈಕುಗಳಿಗೆ ಬೇಡಿಕೆ ಹೆಚ್ಚಾಗಲಿದೆ.
ಈಗ ಕಂಪನಿಯು ಥೈಲಾಂಡ್ ಘಟಕದಿಂದ ದೇಶಕ್ಕೆ ಬೈಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಕಂಪನಿಯು ಕೆಲವು ಬೈಕುಗಳನ್ನು ಹರ್ಯಾಣದಲ್ಲಿ ಅಸೆಂಬಲ್ ಮಾಡುತ್ತಿದೆ. ಅಮೆರಿಕದ ಬೈಕ್ ತಯಾರಿಕ ಕಂಪನಿಯು ಕಳೆದ ವರ್ಷ ದೇಶದಲ್ಲಿ ಸುಮಾರು 700 ಹರ್ಲಿ ಬೈಕುಗಳನ್ನಿಲ್ಲಿ ಮಾರಾಟ ಮಾಡಿದೆ. ಕಂಪನಿಯು ಈಗ ಪ್ರತಿತಿಂಗಳು ಸರಾಸರಿ ನೂರರಷ್ಟು ಬೈಕುಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.
ಸದ್ಯ ದೇಶದಲ್ಲಿ ಮಾರಾಟವಾಗುತ್ತಿರುವ ಹೆಚ್ಚಿನ ಪ್ರೀಮಿಯಂ ಬೈಕುಗಳ ದರ ಹರ್ಲಿ ಡೇವಿಡ್‌ಸನ್ ಗಿಂತ ಕಡಿಮೆ ಇದೆ. ಹರ್ಲಿ ಡೇವಿಡ್‌ಸನ್ ಬೈಕ್ ದರ ಕಡಿಮೆಯೆಂದ್ರೆ ಆರು ಲಕ್ಷ ರುಪಾಯಿ ಇದೆ. ಆದರೆ ಹ್ಯೋಸಂಗ್ ಕಂಪನಿಯ ಬೈಕ್ ದರ ಸುಮಾರು 2 ಲಕ್ಷ ರುಪಾಯಿಗಿಂತಲೂ ಕಡಿಮೆಯಿದೆ.
ಕಂಪನಿಯು ಸದ್ಯ ದೇಶದಲ್ಲಿ ನೂತನ ಘಟಕಕ್ಕೆ ಸೂಕ್ತ ಸ್ಥಳ ಹುಡುಕುತ್ತಿದೆ. ದೇಶದಲ್ಲೇ ಕಂಪನಿಯು ಬೈಕ್ ಉತ್ಪಾದಿಸಲು ಆರಂಭಿಸಿದರೆ ಅಬಕಾರಿ ಸುಂಕ, ಆಮದು ಸುಂಕ, ತೆರಿಗೆಗಳು ಕಡಿಮೆಯಾಗಿ ಹರ್ಲಿ ಬೈಕುಗಳು ಕಡಿಮೆ ದರಕ್ಕೆ ದೊರಕಲಿವೆ. ವಿಶ್ವದ ಎರಡನೇ ಬೃಹತ್ ದ್ವಿಚಕ್ರ ವಾಹನ ಮಾರುಕಟ್ಟೆಯಾದ ಭಾರತವನ್ನು ಹರ್ಲಿ ಡೇವಿಡ್ ಸನ್ ಗಂಭೀರವಾಗಿ ಪರಿಗಣಿಸಿದ್ದು, ಇಲ್ಲಿ ವಹಿವಾಟು ಹೆಚ್ಚಿಸುವ ಅವಕಾಶಗಳನ್ನು ಹುಡುಕುತ್ತಿದೆ.


Click it and Unblock the Notifications









