ಭಾರತದಲ್ಲಿ ಹೆಚ್ಚಿದ ಪ್ರೀಮಿಯಂ ಬೈಕುಗಳ ಮಾರಾಟ

ಕೊರಿಯಾದ ಬೈಕ್ ಬ್ರಾಂಡ್ ಹ್ಯೊಸಂಗ್ ಇತ್ತೀಚೆಗೆ 650 ಸಿಸಿಯ ಸೂಪರ್ ಬೈಕ್ ಹೊರತಂದಿತ್ತು. ಇದೀಗ 250 ಸಿಸಿಯ ಸೂಪರ್ ಬೈಕ್ ಹೊರತರಲು ನಿರ್ಧರಿಸಿದೆ. ಇಟಲಿಯ ಡುಕಾಟಿ ಕೂಡ ಮುಂದಿನ ವರ್ಷ ಎರಡು ಪಟ್ಟು ಮಾರಾಟ ಹೆಚ್ಚುವ ನಿರೀಕ್ಷೆಯನ್ನು ಹೊಂದಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ದೇಶದ ಪ್ರಿಮಿಯಂ ಬೈಕ್ ಮಾರುಕಟ್ಟೆ ಹತ್ತು ಪಟ್ಟು ಏರಿಕೆ ಕಾಣುವ ನಿರೀಕ್ಷೆಯನ್ನು ಹರ್ಲಿ ಡೇವಿಡ್ ಸನ್ ವ್ಯಕ್ತಪಡಿಸಿದೆ.
ಭಾರತಕ್ಕೆ ಬೈಕ್ ರಫ್ತು ಮಾಡಲು ವಿದೇಶಿ ಕಂಪನಿಗಳು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತಿದೆ. ಹೀಗೆ ಕಂಪನಿಗಳು ಅತ್ಯಧಿಕ ತೆರಿಗೆ ಪಾವತಿಸುವುದರಿಂದ ಸಹಜವಾಗಿಯೇ ಬೈಕ್ ದರ ದುಬಾರಿಯಾಗುತ್ತಿದೆ. ಆದರೆ ಕೆಲವು ಕಂಪನಿಗಳು ಭಾರತದಲ್ಲಿರುವ ತಮ್ಮ ಘಟಕದಲ್ಲಿ ಬೈಕ್ ಗಳನ್ನು ಅಸೆಂಬಲ್(ಬಿಡಿಭಾಗ ಜೋಡನೆ) ಮಾಡುತ್ತಿವೆ. ಭಾರತದ ಘಟಕದಲ್ಲಿ ಬೈಕ್ ಜೋಡಿಸುವುದರಿಂದ ತೆರಿಗೆ ವೆಚ್ಚ ಅಗ್ಗವಾಗಿ ಬೈಕ್ ದರ ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಹರ್ಲಿ ಡೇವಿಡ್ ಸನ್ ಮತ್ತು ಹ್ಯೊಸಂಗ್ ಕಂಪನಿಗಳು ಭಾರತದಲ್ಲಿ ಸೂಕ್ತ ಪಾಲುದಾರರ ಹುಡುಕಾಟದಲ್ಲಿವೆ.
ದೇಶದಲ್ಲಿ ದುಬಾರಿ ಸೂಪರ್ ಬೈಕುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆಯೆಂದರೆ ದೇಶದ ಅರ್ಥವ್ಯವಸ್ಥೆ ಹೆಚ್ಚು ಪ್ರಗತಿ ಕಾಣುತ್ತಿದೆ ಎಂದೂ ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಭಾರತೀಯರ ಸೂಪರ್ ಬೈಕ್ ವ್ಯಾಮೋಹವನ್ನೂ ಸೂಚಿಸುತ್ತಿದೆ. ದೇಶದ ದುಬಾರಿ ಬೈಕು ಪ್ರೇಮಿಗಳಿಂದಾಗಿ ಪ್ರೀಮಿಯಂ ಬೈಕ್ ತಯಾರಿಕಾ ಕಂಪನಿಗಳ ಮುಖದಲ್ಲಿ ಮಂದಹಾಸ ಮೂಡಿದೆ ಎಂದರೆ ತಪ್ಪಾಗದು.


Click it and Unblock the Notifications








