ಯಮಹಾ ಆರ್15: ಮತ್ತೆ ಸ್ಪೋರ್ಟಿ ರೈಡಿಗೆ ರೆಡಿಯಾಗಿ

ಸದ್ಯ ರಸ್ತೆಯಲ್ಲಿರುವ ಆರ್15 ಬೈಕಿಗೆ ಹೋಲಿಸಿದರೆ ನೂತನ ಆವೃತ್ತಿ ಚೂರು ಭಿನ್ನವಾಗಿ ಕಾಣುತ್ತದೆ. ಹಿಂದಿನ ಚಕ್ರದ ರಿಮ್ ವಿನ್ಯಾಸ ಕೂಡ ಬದಲಾಗಿದೆ. ಬೈಕಿನ ಎಂಜಿನ್ ಕಪ್ಪು ಕಲರ್ ಕೋಟಿನಿಂದ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ಹಿಂದಿನ ಚಕ್ರದ ನೂತನ ವಿನ್ಯಾಸ ಮತ್ತು ನೂತನ ಅಲಾಯ್ ರಿಮ್ ವಿನ್ಯಾಸ ಹೊಸ ಆರ್15ನ ಪ್ರಮುಖ ಬದಲಾವಣೆಯಾಗಿದೆ. ಬಾಡಿ ಮತ್ತು ಎಂಜಿನ್ ಮೇಲೆ ವ್ಯಾಪಿಸಿರುವ ಹೊಚ್ಚಹೊಸ ಗ್ರಾಫಿಕ್ಸ್ ಬೈಕಿಗೆ ಹೊಸ ಲುಕ್ ನೀಡಿದೆ.
ಕಂಪನಿಯು ಆರ್15 ಎರಡು ಹೊಸ ಆವೃತ್ತಿಗಳನ್ನು ಹೊರತರಲಿದೆ ಎಂಬ ವದಂತಿಯೂ ಇದೆ. ಆದರೆ ನೂತನ ಬೈಕ್ ಸ್ಟೈಲ್ ವಿಷ್ಯದಲ್ಲಿ ಮಾತ್ರ ಬದಲಾಗಲಿದೆ. ಆದರೆ ಎಂಜಿನ್ ಸೇರಿದಂತೆ ಟೆಕ್ನಿಕಲ್ ಆಗಿ ಯಾವುದೇ ಬದಲಾವಣೆಯನ್ನು ನಿರೀಕ್ಷಿಸುವಂತ್ತಿಲ್ಲ. ಸದ್ಯ ರಸ್ತೆಯಲ್ಲಿರುವ ಯಮಾಹ ಆರ್15 150 ಸಿಸಿಯ ಲಿಕ್ವಿಡ್ ಕೂಲ್ಡ್, ಡಿಂಎಚ್ಸಿ 4 ಕವಾಟದ ಎಂಜಿನ್ ಹೊಂದಿದೆ.


Click it and Unblock the Notifications