ಹೋಂಡಾ ಬಿಟ್ಟ ಹೀರೋದ ಬೈಕ್ ಮಾರಾಟ ಹಿಂಗೈತೆ ನೋಡಿ

ಕಂಪನಿಯು ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯ 16,61,725 ಲಕ್ಷ ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡಾ 22ರಷ್ಟು ಏರಿಕೆಯಾಗಿದೆ.
ಹೀರೋ ಹೋಂಡಾ ಮೋಟರ್ಸ್ ಶುಕ್ರವಾರದಿಂದ ತನ್ನ ಹೆಸರನ್ನು ಹೀರೋ ಮೋಟೊಕಾರ್ಪ್ ಎಂದು ಬದಲಾಯಿಸಿಕೊಳ್ಳಲು ಕಂಪನಿಗಳ ದಾಖಲಾತಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿತ್ತು. ಜಪಾನಿನ ಹೋಂಡಾದೊಂದಿಗಿನ ಮೈತ್ರಿ ಕಡಿದುಕೊಂಡ ನಂತರ ಹೊಸ ಹೆಸರು ರಚಿಸುವ ಅನಿವಾರ್ಯತೆ ಕಂಪನಿಗೆ ಒದಗಿತ್ತು.


Click it and Unblock the Notifications








