ಹರ್ಲಿ ಡೇವಿಡ್ ಸನ್ "ಕೊಬ್ಬಿದ ಗೂಳಿ" ದೇಶದ ರಸ್ತೆಗೆ

ಈ ಕೊಬ್ಬಿದ ಗೂಳಿ ದೇಶದಲ್ಲಿರುವ ಕಂಪನಿಯ ಎಲ್ಲಾ ಶೋರೂಂಗಳಲ್ಲಿ ಶೀಘ್ರದಲ್ಲಿ ದೊರಕಲಿದೆ. ಈಗಾಗಲೇ ರಸ್ತೆಯಲ್ಲಿರುವ ಕಂಪನಿಯ 14 ಬೈಕ್ ಬಳಗಕ್ಕೆ ಫ್ಯಾಟ್ ಬಾಯ್ ನೂತನ ಸೇರ್ಪಡೆಯಾಗಿದೆ.
"ನಾವೀಗ ಹರ್ಲಿ ಡೇವಿಡ್ ಸನ್ ಫ್ಯಾಟ್ ಬಾಯ್ ಸ್ಪೆಷಲ್ ಬೈಕನ್ನು ಭಾರತದಲ್ಲಿ ಅನಾವರಣ ಮಾಡಿದ್ದೇವೆ. ಇದು ಇಲ್ಲಿನ ಜನರ ಐಷಾರಾಮಿ ಮತ್ತು ಸ್ಪೋರ್ಟಿ ರೈಡಿಗೆ ಪೂರಕವಾಗಿದೆ" ಎಂದು ಹರ್ಲಿ ಡೇವಿಡ್ ಸನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಅನುಪ್ ಪ್ರಕಾಶ್ ಹೇಳಿದ್ದಾರೆ.
ಗ್ರಾಹಕರಿಗೆ ಈ ಬೈಕ್ ಖರೀದಿ ಸುಲಭವಾಗುವಂತೆ ಕಂಪನಿಯು ಎಚ್ ಡಿಎಫ್ ಸಿ ಬ್ಯಾಂಕಿನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದಕ್ಕೂ ಮೊದಲು ಕಂಪನಿಯು ಐಸಿಐಸಿಐ ಬ್ಯಾಂಕಿನೊಂದಿಗೆ ಸಹಭಾಗಿತ್ವ ಮಾಡಿಕೊಂಡಿತ್ತು. ಇವೆರಡು ಬ್ಯಾಂಕುಗಳು ಗ್ರಾಹಕರಿಗೆ ಸಾಲ ಪಡೆಯಲು ನೆರವಾಗಲಿದೆ ಎಂದು ಅನುಪ್ ಪ್ರಕಾಶ್ ಹೇಳಿದ್ದಾರೆ.
ನೂತನ ಫ್ಯಾಟ್ ಬಾಯ್ ಬೈಕನ್ನು ಕಂಪನಿಯು ಮೊದಲು 1990ರಲ್ಲಿ ಅಮೆರಿಕದಲ್ಲಿ ಹೊರತಂದಿತ್ತು. ಕಂಪನಿಯು 1980ರ ಕಾಲದಲ್ಲಿ ಮಾರಾಟದಲ್ಲಿ ತೀವ್ರ ತರದ ಹಿನ್ನಡೆ ಅನುಭವಿಸುತ್ತಿತ್ತು. ಈ ಫ್ಯಾಟ್ ಬಾಯ್ ಆಗಮಿಸಿದ ನಂತರ ಕಂಪನಿಯ ಮಾರಾಟ ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಂಡಿದೆ.


Click it and Unblock the Notifications








