ಹೀರೊ ಮೊಟೊಕಾರ್ಪ್ ಮಾರಾಟ ಶೇ. 18.6 ಹೆಚ್ಚಳ

Hero MotoCorp
ನವದೆಹಲಿ, ಸೆ 02: ದೇಶದ ಬೃಹತ್ ಬೈಕ್ ತಯಾರಿಕಾ ಕಂಪನಿ ಹೀರೋ ಮೊಟೊಕಾರ್ಪ್ ಬೈಕ್ ಮಾರಾಟ ಗಣನೀಯವಾಗಿ ಏರಿಕೆ ಕಂಡಿದೆ. ಕಂಪನಿಯು ಕಳೆದ ತಿಂಗಳು 5,03,654 ದ್ವಿಚಕ್ರವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳ 4,24,617 ಯೂನಿಟ್ ಗೆ ಹೋಲಿಸಿದರೆ ಶೇಕಡ 18.61ರಷ್ಟು ಏರಿಕೆ ಕಂಡಿದೆ.

ಕಳೆದ ತಿಂಗಳು ಕಂಪನಿಯು ಲಂಡನಿನಲ್ಲಿ ನೂತನ ಲೊಗೊ ಅನಾವರಣ ಮಾಡಿತ್ತು. ಹೀರೋ ಮೋಟೊಕಾರ್ಪ್ ನ ಏಪ್ರಿಲ್ ನಿಂದ ಆಗಸ್ಟ್ ವರೆಗಿನ ಒಟ್ಟಾರೆ ದ್ವಿಚಕ್ರವಾಹನ ಮಾರಾಟ 25 ಲಕ್ಷ ಯೂನಿಟ್ ಗೆ ತಲುಪಿದ್ದು ಶೇಕಡ 21ರಷ್ಟು ಹೆಚ್ಚಳವಾಗಿದೆ. ಕಂಪನಿಯು ಕಳೆದ ವರ್ಷ ಇದೇ ಅವಧಿಯಲ್ಲಿ 2.08 ಲಕ್ಷ ದ್ವಿಚಕ್ರವಾಹನ ಮಾರಾಟ ಮಾಡಿತ್ತು.

ಕಂಪನಿಯು ಈ ವರ್ಷ 60 ಲಕ್ಷ ಬೈಕ್ ಮತ್ತು ಸ್ಕೂಟರ್ ಮಾರಾಟ ಮಾಡುವತ್ತ ದಾಪುಗಾಲಿಡುತ್ತಿದೆ ಎಂದು ಹೀರೋ ಮೊಟೊಕಾರ್ಪ್ ಪ್ರಕಟಣೆಯಲ್ಲಿ ತಿಳಿಸಿದೆ.

"ಆಗಸ್ಟ್ ತಿಂಗಳು ನಮಗೆ ಮರೆಯಲಾಗದ ಮತ್ತು ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ದಿನ. ಕಂಪನಿಗೆ ಹೊಸ ಹೆಸರು, ಹೊಸ ಐಡೆಂಟೆಟಿ ಮತ್ತು ಹೊಸ ಸ್ಥಾನಮಾನ ನೀಡಿದ ತಿಂಗಳದು. ಕಂಪನಿಯು ಹೊಸ ಬ್ರಾಂಡ್ ಐಡೆಂಟೆಟಿಯೊಂದಿಗೆ ಮುನ್ನಡೆಯಲಿದೆ" ಎಂದು ಕಂಪನಿಯ ಉಪಾಧ್ಯಕ್ಷ ಅನಿಲ್ ದುವಾ ಹೇಳಿದ್ದಾರೆ.

More from DriveSpark

Article Published On: Friday, September 2, 2011, 13:29 [IST]
English summary
Hero MotoCorp reported an increase of 18.61 per cent in its August(2011) sales to 503,654 units as compared to 424,617 units sold in the same period of 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+