ಹೀರೋ ಸೈಕಲ್ ನಿಂದ ಹೊಸ ಸೂಪರ್ ಸೈಕಲ್

"ನಾವು ನವೆಂಬರ್ ನಲ್ಲಿ ನೂತನ ಪ್ರೀಮಿಯಂ ಬೈಸಿಕಲ್ ಗಳನ್ನು ಭಾರತಕ್ಕೆ ಪರಿಚಯಿಸಲಿದ್ದೇವೆ. ಹೈ-ಎಂಡ್ ಬೈಸಿಕಲ್ ಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ" ಎಂದು ಹೀರೋ ಸೈಕಲ್ಸ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಮುಂಜಾಲ್ ಹೇಳಿದ್ದಾರೆ.
"ವೇಗವಾಗಿ ಪ್ರಗತಿ ಕಾಣುತ್ತಿರುವ ಪ್ರೀಮಿಯಂ ಬೈಸಿಕಲ್ ಮಾರುಕಟ್ಟೆಯಲ್ಲಿ ಗ್ರಾಹಕರು ಫೀಚರ್ಸ್ ಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಗ್ರಾಹಕರು ಇಂತಹ ಸೈಕಲ್ ಗಳಲ್ಲಿ ಅಂತರಾಷ್ಟ್ರೀಯ ಸ್ಟಾಂಡರ್ಡ್ ಬಯಸುತ್ತಾರೆ" ಎಂದು ಅವರು ಹೇಳಿದ್ದಾರೆ.
"ಇಂದು ಬೈಸಿಕಲ್ ಗಳು ಬಹು ಉಪಯೋಗಿ. ಇಂಧನದ ಹಂಗಿಲ್ಲದ ಇಂತಹ ಸೈಕಲ್ ಗಳನ್ನು ಕೇವಲ ಪ್ರಯಾಣಕ್ಕೆ ಮಾತ್ರವಲ್ಲದೇ ವ್ಯಾಯಾಮ, ಕ್ರೀಡೆ ಸೇರಿದಂತೆ ಹಲವು ಅವಶ್ಯಕತೆಗಳಿಗೆ ಬಳಸಲಾಗುತ್ತಿದೆ" ಎಂದರು.
ಇದರೊಂದಿಗೆ ಕಂಪನಿಯು ಎರಡು ನೂತನ ಬೈಸಿಕಲ್ ಘಟಕವನ್ನು ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದೆ. ಆದರೆ ಎಲ್ಲಿ ಮತ್ತು ಎಷ್ಟು ಹೂಡಿಕೆ ಮಾಡಲಾಗುವುದು ಎಂಬುದನ್ನು ಮುಂಜಾಲ್ ಬಹಿರಂಗಪಡಿಸಿಲ್ಲ. ಕಂಪನಿಯು ಸದ್ಯ ಹೈ ಎಂಡ್ ಅಲ್ಯುಮಿನಿಯಂ ಬೈಸಿಕಲ್ ಗಳನ್ನು ಹೊರತರುತ್ತಿದೆ.


Click it and Unblock the Notifications








