ಹರ್ಲಿ ಡೇವಿಡ್ ಸನ್ ಬೈಕಲ್ಲಿ ಮ್ಯೂಸಿಕ್ ಮಸ್ತಿ

ಕಂಪನಿಯು ಇತ್ತೀಚೆಗೆ ಬೂಮ್ ಮ್ಯೂಸಿಕ್ ಸಿಸ್ಟಮನ್ನು ಅಮೆರಿಕದಲ್ಲಿ ಹೊರತಂದಿದೆ. ಈ ಆಡಿಯೋ ಸಿಸ್ಟಮ್ ನ್ನು ಹರ್ಲಿ ಡೇವಿಡ್ ಬೈಕ್ ಗಳಿಗೆ ಸುಲಭವಾಗಿ ಅಳವಡಿಸಬಹುದೆಂದು ಕಂಪನಿ ಹೇಳಿದೆ. ನೋಡಲು ಥೇಟ್ ವಿಮಾನದ ಎಂಜಿನಿನಂತೆ ಕಾಣುವ ಈ ಸ್ಪೀಕರುಗಳು ರೈಡರಿನತ್ತ ಫೋಕಸ್ ಆಗಿವೆ.
ಈ ಬೂಮ್ ಆಡಿಯೋ ಸಿಸ್ಟಮ್ ಎರಡು 100 ವೋಲ್ಟೆಜ್ 2 ಚಾನೆಲ್ ಆಂಪ್ಲಿಪ್ಲೇಯರ್ಸ್ , 5.25 ಇಂಚಿನ ಎರಡು ಸ್ಪೀಕರ್, ಎರಡು ಟ್ವೀಟರ್ ಪ್ಯಾಡ್, ಎರಡು ಮಧ್ಯಮದರ್ಜೆಯ ಸ್ಪೀಕರುಗಳು ಮತ್ತು ಎರಡು ಅತ್ಯುತ್ತಮ ಗುಣಮಟ್ಟದ ಸ್ಪೀಕರುಗಳನ್ನು ಹೊಂದಿದೆ. ಬೈಕಿನಲ್ಲಿ ಇಂತಹ ಸಂಗೀತ ಕೇಳುವುದು ಅಗ್ಗವಲ್ಲ. ಯಾಕೆಂದರೆ ಇದು ಭಾರತದ ಮಾರುಕಟ್ಟೆಗೆ ತಲುಪಿದಾಗ ಇದರ ಅಂದಾಜು ದರ ಸುಮಾರು 90 ಸಾವಿರ ರು. ಇರಲಿದೆ.


Click it and Unblock the Notifications








