ಎಚ್ಚರ... ಸೈಕಲ್ ತುಳಿದು ಹೊಗೆ ಹಾಕಿಸಿಕೊಳ್ಳಬೇಡಿ

ಪರಿಸರ ಸ್ವಲ್ಪವಾದರೂ ಉಳಿಯಲಿ ಎಂದು ಹೆಚ್ಚು ಜನರು ಸೈಕಲ್ ಸವಾರಿ ಮಾಡುತ್ತಾರೆ. ಆದರೆ ಅವರ ಒಳ್ಳೆಯತನವೇ ಅವರಿಗೆ ಮುಳ್ಳಾಗುತ್ತಿದೆ. ಯಾಕೆಂದರೆ ಇತರ ವಾಹನಗಳ ಹೊಗೆಗೆ ಹೆಚ್ಚು ಅಪಾಯ ಅನುಭವಿಸುವರು ಸೈಕಲ್ ಸವಾರರಂತೆ. ಇವರು ಪಾದಚಾರಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಪಾಯ ಅನುಭವಿಸುತ್ತಾರಂತೆ!!

ವಾಹನಗಳ ಹೊಗೆಯಲ್ಲಿ ಇಂಗಾಲ ಸೇರಿದಂತೆ ಲೆಕ್ಕವಿಲ್ಲದಷ್ಟು ಸಂಖ್ಯೆಯ ವಿಷಾ ಪದಾರ್ಥಗಳಿವೆ. ಈ ಹೊಗೆಯನ್ನು ಅನಿವಾರ್ಯವಾಗಿ ಪಾದಚಾರಿಗಳು ಮತ್ತು ರಸ್ತೆಯಲ್ಲಿ ಸಾಗುವ ಎಲ್ಲರೂ ಸೇವಿಸಬೇಕಾಗುತ್ತದೆ. ಆದರೆ ಇದು ಪಾದಚಾರಿಗಳಿಗಿಂತ ಹೆಚ್ಚು ರಸ್ತೆಯಲ್ಲಿ ಬೈಸಿಕಲ್ ತುಳಿಯೋರಿಗೆ ಹಾನಿ ಉಂಟು ಮಾಡುತ್ತದೆ ಅಂತ ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

ಬೈಸಿಕಲ್ ಸವಾರರು ವಾಹನಗಳ ಹೊಗೆಯಿಂದ ಹೆಚ್ಚು ಹೃದಯಘಾತ ಮತ್ತು ಶ್ವಾಸಕೋಶದ ತೊಂದರೆಗಳಿಗೆ ಈಡಾಗುತ್ತಾರೆ ಎಂದು ಲಂಡನ್ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ಕಂಡುಕೊಂಡಿದ್ದಾರೆ.

ಪ್ರತಿದಿನ ನಿಯಮಿತವಾಗಿ ಕೆಲಸಕ್ಕೆ ಸೈಕಲಿನಲ್ಲಿ ಹೋಗುವ ಹಲವು ಜನರನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಅಷ್ಟೇ ಸಂಖ್ಯೆಯ ಪಾದಚಾರಿಗಳನ್ನೂ ಅಧ್ಯಯನ ಮಾಡಲಾಗಿದೆ. ಅವರೆಲ್ಲ ಧೂಮಪಾನ ಮಾಡದ ವ್ಯಕ್ತಿಗಳು. ಆದರೂ ಅವರೆಲ್ಲರ ಶ್ವಾಶಕೋಶದಲ್ಲಿ ಹೊಗೆ ಗೂಡುಕಟ್ಟಿತ್ತು. ಅದು ವಾಹನ ಹೊರಸೂಸುವ ಹೊಗೆಯಾಗಿತ್ತು.

ಪಾದಚಾರಿಗಳಿಗಿಂತ ಎರಡು ಮೂರು ಪಟ್ಟು ಹೆಚ್ಚು ಅಪಾಯ ಸೈಕಲಿಗರಿಗೆ ಅಂತೆ. ವಾಹನಗಳ ಹೊಗೆಕೊಳವೆ ಹಿಂದೆ ಸೈಕಲ್ ತುಳಿಯುತ್ತ ಹೆಚ್ಚು ಗಾಳಿ ಸೇವಿಸುವ ಇವರ ಶ್ವಾಸಕೋಸಕ್ಕೆ ಸುಲಭವಾಗಿ ಇಂಗಾಲ ಪ್ರವೇಶಿಸುತ್ತದೆ ಎಂದು ಅಧ್ಯಯನ ಹೇಳಿದೆ.

More from DriveSpark

Article Published On: Wednesday, September 28, 2011, 16:34 [IST]
English summary
Cyclists in cities run a higher risk of damaging their lungs from inhalation of more black carbon particles than pedestrians Report said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+