ಹ್ಯೊಸಂಗ್ ಬೈಕ್ "ಜಿಟಿ 650 ಎನ್" ರಸ್ತೆಗೆ

"ಹೆಚ್ಚಿನ ಗ್ರಾಹಕರು ಇಂತಹ ಬೈಕೊಂದನ್ನು ಪರಿಚಯಿಸುವಂತೆ ವಿನಂತಿಸುತ್ತಿದ್ದರು. ಹೀಗಾಗಿ ಜಿಟಿ 650 ಹೊರತಂದಿದ್ದೇವೆ" ಎಂದು ಗಾರ್ ವೇರ್ ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕರಾದ ದಿಯಾ ಗಾರ್ ವೇರ್ ಹೇಳಿದ್ದಾರೆ.
ಇದು ಶಕ್ತಿಶಾಲಿ ಮತ್ತು ಸ್ಟೈಲಿಷ್ ಬೈಕಾಗಿದೆ. ಕಂಪನಿಯು ಕಳೆದ ಆರು ತಿಂಗಳಲ್ಲಿ ದೇಶದ ಮಾರುಕಟ್ಟೆಗೆ ಎರಡು ಬೈಕುಗಳನ್ನು ಪರಿಚಯಿಸಿದೆ. "ಕಂಪನಿಯು ಇನ್ನೊಂದು ಬೈಕನ್ನು ಮುಂದಿನ ವರ್ಷ ಮಾರ್ಚ್ ಗೆ ಹೊರತರಲಿದೆ" ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಈ ಬೈಕಿನ ಆರಂಭಿಕ ದರ ಸುಮಾರು 4.49 ಲಕ್ಷ ರುಪಾಯಿ.
ಹ್ಯೋಸಂಗ್ ಸೂಪರ್ ಬೈಕ್ ಗಳನ್ನು ದೇಶದಲ್ಲಿ ಸುಮಾರು 10 ಡೀಲರ್ ಕೇಂದ್ರಗಳ ನೆರವಿನಿಂದ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ. ಪುಣೆ ಅಸೆಂಬ್ಲಿ ಘಟಕಕ್ಕೆ ಕಂಪನಿ ಈಗಾಗಲೇ 20 ಕೋಟಿ ರೂ. ಹೂಡಿಕೆ ಮಾಡಿದೆ.


Click it and Unblock the Notifications








