ಹೀರೊ ಮೊಟೊಕಾರ್ಪ್ ಮಾರಾಟ ಭರ್ಜರಿ ಹೆಚ್ಚಳ

ಸೆಪ್ಟಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 603.62 ಕೋಟಿ ರು.ಗೆ ತಲುಪಿದ್ದು, ಶೇಕಡ 19.93ರಷ್ಟು ಏರಿಕೆ ಕಂಡಿದೆ. ಕಂಪನಿಯ ಒಟ್ಟಾರೆ ವಹಿವಾಟು 5,829.32 ಕೋಟಿ ರು.ಗೆ ತಲುಪಿ ಶೇಕಡ 28.06ರಷ್ಟು ಏರಿಕೆ ಕಂಡಿದೆ.
ಇದೇ ಸಮಯದಲ್ಲಿ ಕಂಪನಿಯ ಮಾರಾಟ ಕೂಡ ಗಮನಾರ್ಹವಾಗಿ ಏರಿಕೆ ಕಂಡಿದೆ. ಅಂದರೆ ಸೆಪ್ಟಂಬರ್ ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು 15,44,315 ದ್ವಿಚಕ್ರ ವಾಹನ ಮಾರಾಟ ಮಾಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಹೀರೋ ಹೋಂಡಾದ 12,85,944 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 20.09ರಷ್ಟು ಹೆಚ್ಚಳವಾಗಿದೆ.


Click it and Unblock the Notifications








