ಚಲ್ ಮೇರಿ ಬೈಸಿಕಲ್: ಬೈಕಿಗಿಂತ ಸೈಕಲ್ ವಾಸಿ ಕಣೋ

ಆದ್ರೆ ಸೈಕಲ್ ಸವಾರಿ ಕುರಿತು ಮತ್ತೆ ಆಲೋಚಿಸಬೇಕಾದ ಕಾಲ ಮತ್ತೆ ಬಂದಿದೆ. ಯಾಕೆಂದರೆ ಈ ವರ್ಷ ಪೆಟ್ರೋಲ್ ದರ ಹೆಚ್ಚಾಗಿರುವುದು ಇದು ಐದನೇ ಬಾರಿ. ಡೀಸೆಲ್ ಮತ್ತು ಎಲ್ ಪಿಜಿ ದರನೂ ಹೆಚ್ಚಾಗುವ ಸೂಚನೆ ದೊರಕಿದೆ. ಹೀಗಾಗಿ ಇನ್ನು ಮುಂದೆ ಸೈಕಲ್ ಸವಾರಿ ಕುರಿತು ನೀವು ಯೋಚಿಸಲೇಬೇಕು.
ಪರಿಸರ ಸ್ನೇಹಿ ಸೈಕಲ್ ಸವಾರಿ ದುಬಾರಿಯಲ್ಲ. 3 ಸಾವಿರ ರುಪಾಯಿಯಿಂದ ಲಕ್ಷ ರು.ವರೆಗಿನ ಸೈಕಲ್ ಗಳು ದೊರಕುತ್ತವೆ. ಪರಿಸರಕ್ಕೂ ಉತ್ತಮ. ನಿಮ್ಮ ಆರೋಗ್ಯಕ್ಕೂ ಉತ್ತಮ. ಟ್ರಾಫಿಕ್ ನೊಳಗೆ ದಾರಿ ಮಾಡಿಕೊಂಡು ಸಾಗಲು ಸೈಕಲಿಗಿಂತ ಬೆಸ್ಟ್ ಇನ್ಯಾವುದು ಇಲ್ಲ.
ಈಗ ಮಾರುಕಟ್ಟೆಯಲ್ಲಿ ನಿಮ್ಮ ಅಭಿರುಚಿಗೆ ಪೂರಕವಾಗಿರುವ ಸೈಕಲ್ ಗಳು ದೊರಕುತ್ತವೆ. ಪುಟ್ಟ ಮಕ್ಕಳಿಗೆ, ಕಾಲೇಜಿಗೆ, ಆಫೀಸಿಗೆ ಹೋಗುವರಿಗೆ ಸೂಕ್ತವಾಗಿರುವ ಸೈಕಲ್ ಗಳನ್ನು ಖರೀದಿಸಿಕೊಳ್ಳಬಹುದು. ಗೇರ್ ಇರುವ, ಇಲ್ಲದಿರುವ ಸೈಕಲ್ ಸವಾರಿ ಮಾಡಬಹುದು.
ದಿನನಿತ್ಯ ಜಾಸ್ತಿ ದೂರ ಪ್ರಯಾಣಿಸುವರು ನೀವಲ್ಲದಿದ್ದರೆ ಸರಳ ಗೇರಿಲ್ಲದ ಸೈಕಲ್ ಸೂಕ್ತ. ಹೆಚ್ಚು ದೂರ ನಿತ್ಯ ಸಾಗಬೇಕಿದೆ ಎನ್ನುವರು ಗೇರ್ ಸೈಕಲ್ ಆಯ್ಕೆ ಮಾಡಿಕೊಳ್ಳಬಹುದು. ಗೇರಿರುವ ಸೈಕಲ್ ತುಳಿಯಲು ಹೆಚ್ಚು ತ್ರಾಸ ಪಡಬೇಕಿಲ್ಲ.
ಹೈಬ್ರಿಡ್ ಸೈಕಲ್ ಗಳೂ ಮಾರುಕಟ್ಟೆಯಲ್ಲಿ ದೊರಕುತ್ತವೆ. ತುಳಿದು ತುಳಿದು ಸಾಕಾದರೆ ಬ್ಯಾಟರಿ ಮೂಲಕ ಸವಾರಿ ಮಾಡಬಹುದು.
ಪರಿಸರ ಸ್ನೇಹಿ, ಆರೋಗ್ಯ ಸ್ನೇಹಿ, ಟ್ರಾಫಿಕ್ ಸ್ನೇಹಿ ಹೀಗೆ ಸೈಕಲ್ ಸವಾರಿಯ ಲಾಭದ ಪಟ್ಟಿ ತುಂಬಾ ಉದ್ದವಾಗಿದೆ. ಬೈಕ್ ಗಳಿಗೆ ಹೋಲಿಸಿದರೆ ಸೈಕಲ್ ದರವೂ ಅಗ್ಗ. ಒಮ್ಮೆ ಹೂಡಿಕೆ ಮಾಡಿದರೆ ಮತ್ತೆ ಹೆಚ್ಚು ಖರ್ಚಿಲ್ಲ. ಹೆಚ್ಚೆಂದರೆ ಪಂಕ್ಚರ್ ಇತ್ಯಾದಿ ಸಣ್ಣಪುಟ್ಟ ಖರ್ಚು ಇರಬಹುದು.
ಬೈಸಿಕಲ್ ನಿಮಗೆ ಇಷ್ಟವಾಗದ ಒಂದೇ ಕಾರಣವೆಂದರೆ ಇದರಲ್ಲಿ ಬೈಕಿನಷ್ಟು ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ಆದರೆ ವೇಗವಾಗಿ ಹೋಗುವುದು ನಿಮ್ಮ ಕಾಲಿನಲ್ಲಿದೆ. ದಿನಕಳೆದಂತೆ ಹೆಚ್ಚು ವೇಗವಾಗಿ ಸೈಕಲ್ ಹೊಡೆಯಲು ನೀವು ಕಲಿಯಬಹುದು. ಪೆಟ್ರೋಲ್ ದರ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಸೈಕಲ್ ಕುರಿತು ಎಲ್ಲರೂ ಗಂಭೀರವಾಗಿ ಚಿಂತಿಸಲೇಬೇಕು.


Click it and Unblock the Notifications








