ನೂತನ ಸಾವಿರ ಸಿಸಿ ಸರದಾರ ಹೋಂಡಾ ಸಿಬಿಆರ್

ಇದು ಫೈರ್ ಬ್ಲೇಡ್ ಸೂಪರ್ ಬೈಕ್. 2012ರ ಈ ಸೂಪರ್ ಬೈಕ್ ಹಳೆಯ ಮಾಡೆಲಿನ ಎಂಜಿನ್ ಹೊಂದಿದೆ. ಆದರೆ ಕಂಪನಿಯು ನೂತನ ಆವೃತ್ತಿಗೆ ಹೊಸ ಸ್ಟೈಲಿಶ್ ವಿನ್ಯಾಸ ಮಾಡಿದೆ. ಹೊಸ ಅಲಾಯ್ ವೀಲ್, ಅತ್ಯುತ್ತಮ ಸಸ್ಪೆನ್ಷನ್ ಟ್ಯೂನಿಂಗ್, ಆಕರ್ಷಕವಾಗಿ ಕಾಣುವ ಇನ್ಸುಟ್ರುಮೆಂಟ್ ಕ್ಲಸ್ಟರ್ ಮತ್ತು ಇತರ ಕಾಸ್ಮೆಟಿಕ್ ವಿನ್ಯಾಸಗಳನ್ನು ಮಾಡಿದೆ.
ಇವೆಲ್ಲ ಹೊಸತನಗಳಿಂದ ಸೂಪರ್ ಬೈಕ್ ಮತ್ತಷ್ಟು ಸೂಪರ್ಬ್ ಆಗಿದೆ. ಮುಂಭಾಗದ ವಿನ್ಯಾಸದಂತೆ ಈ ಸೂಪರ್ ಬೈಕಿನ ಹಿಂಭಾಗವೂ ಹೆಚ್ಚು ಆಕರ್ಷಕವಾಗಿದೆ. ಡಬಲ್ ಟ್ಯೂಬ್ ತಂತ್ರಜ್ಞಾನದ ಮೂಲಕ ಈ ಬೈಕ್ ಅತ್ಯುತ್ತಮ ರೈಡಿಗೆ ಸಹಕರಿಸುತ್ತದೆ.
ಈ ಬೈಕ್ 999ಸಿಸಿ ಫೋರ್ ಸಿಲಿಂಡರ್ ಎಂಪಿಎಫ್ಐ ಇನ್ ಲೈನ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿಯಾದ ಪವರ್ ಟ್ರೈನ್ ಆಗಿದೆ. ಹೊಸ ಬೈಕಿನಲ್ಲಿ ನೂತನ ಅಲಾಯ್ ವೀಲ್ ಗಳೇ ಪ್ರಮುಖ ಹೈಲೈಟ್.
ಮೆಟಾಲಿಕ್ ಕಪ್ಪು ಬಣ್ಣದಿಂದ ಈ ಚಕ್ರಗಳು ಮಿಂಚುತ್ತವೆ. ಹೊಸ ಲ್ಯಾಪ್ ಟೈಮರ್, ಗೇರ್ ಇಂಡಿಕೇಟರ್, ಟೆಕ್ನೊಮೀಟರ್ ಮತ್ತು ನಾಲ್ಕು ಡಿಸ್ ಪ್ಲೇ ಮೋಡ್ ಇಷ್ಟವಾಗುತ್ತವೆ. ಕಂಪನಿ ಈ ಬೈಕಿನ ದರವನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.


Click it and Unblock the Notifications








