ಹೋಂಡಾ ಸಿಬಿ ಶೈನ್: ಬೆಂಗಳೂರು ದರ ಮಾಹಿತಿ

ಇಂದು ಹೋಂಡಾ ಕಂಪನಿಯ ಬೈಕುಗಳ ದರ ಮತ್ತು ಇನ್ನಿತರ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಈ ಮಾಹಿತಿಯನ್ನು ಕನ್ನಡ ಡ್ರೈವ್ ಸ್ಪಾರ್ಕಿಗೆ ನೀಡಿದ್ದು ಷಪೈರ್ ಹೋಂಡಾ ಡೀಲರ್. ಈ ಮಾಹಿತಿ ಬೈಕ್ ಖರೀದಿಸುವರಿಗೆ, ಖರೀದಿಸಲು ಬಯಸುವರಿಗೆ ಅನುಕೂಲವಾದೀತು.
ಕಿಕ್ ಡ್ರಮ್ ಬ್ರೇಕ್, ಸೆಲ್ಪ್ ಡ್ರಮ್ ಬ್ರೇಕ್ ಮತ್ತು ಸೆಲ್ಪ್ ಡಿಸ್ಕ್ ಬ್ರೇಕ್ ಎಂಬ ಮೂರು ಆಯ್ಕೆಗಳಲ್ಲಿ ಸಿಬಿ ಶೈನ್ ದೊರಕುತ್ತವೆ. ಅದರಲ್ಲಿ ಕಿಕ್ ಡ್ರಮ್ ಬ್ರೇಕ್ ಬೈಕ್ ಸ್ಪೋಕ್ ವೀಲ್ಹ್ ಮತ್ತು ಉಳಿದೆರಡು ಆವೃತ್ತಿಗಳು ಅಲಾಯ್ ವೀಲ್ಹ್ ಹೊಂದಿವೆ.
| ಕಿಕ್ ಡ್ರಮ್ | ಸೆಲ್ಫ್ ಡ್ರಮ್ | ಸೆಲ್ಫ್ ಡಿಸ್ಕ್ | |
| ಎಕ್ಸ್ ಶೋರೂಂ ದರ | 47,907 ರು. | 52,037 ರು. | 55,135 ರು. |
| ರಸ್ತೆ ತೆರಿಗೆ | 5,318 ರು. | 6,931 | 7,344 |
| ವಿಮೆ | 934 | 979 | 1,012 |
| ಸ್ಮಾರ್ಟ್ ಕಾರ್ಡ್ | 230 | 230 | 230 |
| ರಿಜಿಸ್ಟ್ರೇಷನ್ ಶುಲ್ಕ | 120 ರು. | 120 | 120 |
| ಆನ್ ರೋಡ್ ದರ | 54,509 ರುಪಾಯಿ | 60,297 ರುಪಾಯಿ | 63,841 ರುಪಾಯಿ |
| ವಾರೆಂಟಿ ವಿಸ್ತರಣೆ | 625 | 625 | 625 |
| ಸ್ಪೋಕ್ ವೀಲ್ | ಅಲಾಯ್ ವೀಲ್ | ಅಲಾಯ್ ವೀಲ್ | |
| ಎಲ್ಲಾ ಸಂಖ್ಯೆ ರೂಪಾಯಿಗಳಲ್ಲಿ |
ಇಷ್ಟು ರುಪಾಯಿ ನೀಡಿ ನೀವು ಹೋಂಡಾ ಶೈನ್ ಮನೆಗೆ ಕೊಂಡೊಯ್ಯಬಹುದು. ಆದರೆ ಆ ಬೈಕಿಗೆ ಸ್ಟಾಂಡರ್ಡ್ ಆಕ್ಸೆಸರಿ ಬೇಡವೇ. ಅದಕ್ಕಾಗಿ ನೀವು ಸುಮಾರು 4 ಸಾವಿರ ರು ಖರ್ಚು ಮಾಡಲೇಬೇಕು. ಶೈನ್ ಬೈಕಿಗೆ ಸುಮಾರು 3,655 ರುಪಾಯಿ ಮೌಲ್ಯದ ಆಕ್ಸೆಸರಿ ಅಗತ್ವವಿದೆ. ಹೋಂಡಾ ಉಚಿತವಾಗಿ ಹೆಲ್ಮೆಟ್ ಕೊಟ್ಟರೆ ದರ ಸುಮಾರು 1 ಸಾವಿರ ಕಡಿಮೆಯಾದೀತು.
| ಬಝರ್ | 70 ರುಪಾಯಿ |
| ಕ್ರಾಷ್ ಗಾರ್ಡ್ | 530 ರು. |
| ಹೆಲ್ಮೆಟ್ | 1,000 ರು. |
| ಎಂಜಿನ್ ಗಾರ್ಡ್ | 195 ರು. |
| ಫೋರ್ಕ್ ಲಾಕ್ | 380 ರುಪಾಯಿ |
| ಗ್ರಿಪ್ ಕವರ್ | 80 ರುಪಾಯಿ |
| ಹೆಲ್ಮೆಟ್ ಲಾಕ್ | 210 ರು. |
| ಲೇಡಿಸ್ ಹ್ಯಾಂಡಲ್ | 120 ರು. |
| ನಂಬರ್ ಪ್ಲೇಟ್ | 200 ರುಪಾಯಿ |
| ಸೀಟ್ ಕವರ್ | 240 ರುಪಾಯಿ |
| ಟ್ಯಾಂಕ್ ಕವರ್ | 180 ರುಪಾಯಿ |
| ಟೆಫ್ಲೊನ್ ಕೋಟಿಂಗ್ | 450 ರು. |
| ಸಾರಿ ಗಾರ್ಡ್ | - |
| ಒಟ್ಟು | 3,655 ರುಪಾಯಿ |
..


Click it and Unblock the Notifications








