ಹ್ಯೊಸಂಗ್ ಜಿಟಿ 650ಎನ್: ಸೂಪರ್ ಬೈಕ್ ಇನ್ನಷ್ಟು ಅಗ್ಗ

ಹ್ಯೊಸಂಗ್ ಜಿಟಿ 650ಎನ್ ಕಳೆದ ತಿಂಗಳ ಆರಂಭದಲ್ಲಿ ದೇಶದ ರಸ್ತೆಗಿಳಿದಿತ್ತು. "ಈ ಆವೃತ್ತಿಯನ್ನು ದೇಶದಲ್ಲಿ ಇನ್ನಷ್ಟು ಜನಪ್ರಿಯಗೊಳಿಸಲು ನಿರ್ಧರಿಸಿದ್ದೇವೆ. ಈಗ ದರ ಕಡಿಮೆ ಮಾಡಿರುವುದು ಹೆಚ್ಚಿನ ಸೂಪರ್ ಬೈಕು ಪ್ರೇಮಿಗಳಿಗೆ ಇಷ್ಟವಾಗಲಿದೆ. ಈ ಆಫರ್ ಡಿಸೆಂಬರ್ 31ರವರೆಗೆ ಇರಲಿದೆ" ಎಂದು ಗಾರ್ ವೇರ್ ಕಂಪನಿ ಪ್ರಕಟಿಸಿದೆ.
"ದೇಶದ್ಯಾಂತವಿರುವ ಸೂಪರ್ ಬೈಕು ಪ್ರೇಮಿಗಳನ್ನು ಸೆಳೆಯುವುದು ನಮ್ಮ ಉದ್ದೇಶ. ಕ್ರಿಸ್ ಮಸ್ ಮತ್ತು ಹೊಸ ವರ್ಷದಲ್ಲಿ ಬೈಕ್ ಖರೀದಿಸಲು ಬಯಸುವರು ಇದನ್ನು ಹಬ್ಬದ ಆಫರ್ ಅಂದುಕೊಳ್ಳಬಹುದು" ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ಶಿವಪಾದ ರಾಯ್ ಹೇಳಿದ್ದಾರೆ.


Click it and Unblock the Notifications








