ಶೀಘ್ರದಲ್ಲಿ ಪಿಯಾಜಿಯೊ ಗೇರ್ ಲೆಸ್ ಸ್ಕೂಟರ್

"ವೆಸ್ಪಾ ಬ್ರಾಂಡ್ ಇಮೇಜ್ ಮೂಲಕ ಕಂಪನಿಯು ದೇಶದ ರಸ್ತೆಯಲ್ಲಿ ಹಲವು ಕಾರ್ಯತಂತ್ರಗಳನ್ನು ಹೊಂದಿದೆ" ಎಂದು ಪಿಯಾಜಿಯೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರವಿ ಛೋಪ್ರ ಹೇಳಿದ್ದಾರೆ. ಕಂಪನಿಯು ಮಹರಾಷ್ಟ್ರದಲ್ಲಿ ಈಗಾಗಲೇ ಘಟಕ ಹೊಂದಿದ್ದು, ಇಲ್ಲೇ ವೆಸ್ಪಾ ಸ್ಕೂಟರುಗಳನ್ನು ನಿರ್ಮಿಸಲಿದೆ ಎಂದರು.
ಕಂಪನಿಯು ದೇಶದ 35 ಅಗ್ರ ನಗರಗಳಲ್ಲಿ ವೆಸ್ಪಾ ಸ್ಕೂಟರ್ ಮಾರಾಟ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ಡೀಲರ್ ಜಾಲವನ್ನು ರೂಪಿಸಲಿದೆ. ಕಂಪನಿಯು ಏಪ್ರಿಲ್ ನಲ್ಲಿ ಹೊರತರಲಿರುವ ಗೇರ್ ಲೆಸ್ ಸ್ಕೂಟರ್ ಆಕ್ಟಿವಾ ಸ್ಕೂಟರಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.


Click it and Unblock the Notifications








