ಸುಜುಕಿ ಹೊಸ ಸ್ಪೋರ್ಟ್ ಬೈಕ್: ಇನಾಝುಮಾ 250

ಸುಜುಕಿ ದೇಶದ ರಸ್ತೆಗೆ ಹಲವು ಕಮ್ಯೂಟರ್ ಅಥವಾ ಸೂಪರ್ ಬೈಕುಗಳನ್ನು ಪರಿಚಯಿಸಿದೆ. ಆದರೆ 250 ಸಿಸಿ ಸೆಗ್ಮೆಂಟಿಗೆ ಪ್ರವೇಶಿಸುತ್ತಿರುವುದು ಇದೇ ಮೊದಲು. ಇದಕ್ಕೂ ಮೊದಲು ದೇಶದ ರಸ್ತೆಗೆ ಜಿಡಬ್ಲ್ಯು 250 ಬೈಕನ್ನು ಪರಿಚಯಿಸಲು ಯೋಜಿಸಿತ್ತು. ಆದರೆ ಇದೀಗ ಹೊಸ ಇನಾಝುಮಾ ಹೆಸರಿನಲ್ಲಿ 250 ಸಿಸಿಗೆ ಪ್ರವೇಶಿಸಲು ಯೋಜಿಸಿದೆ.
ಸುಜುಕಿ ಇನಾಝುಮಾ ಬೈಕ್ ಜನವರಿಯಲ್ಲಿ ನಡೆಯಲಿರುವ 2012 ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ಈ ಸ್ಪೋರ್ಟ್ಸ್ ಬೈಕ್ 248 ಸಿಸಿಯ ಟ್ವಿನ್ ಎಂಜಿನ್ ಹೊಂದಿದ್ದು, 26 ಹಾರ್ಸ್ ಪವರ್ ಮತ್ತು 24 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ದೇಶದ 250 ಸಿಸಿ ಮೋಟರ್ ಸೈಕಲ್ ಸೆಗ್ಮೆಂಟ್ ಹೋಂಡಾ ಸಿಬಿಆರ್ 250 ಮತ್ತು ಕವಾಸಕಿ ನಿಂಜಾ 250 ಪಾರುಪತ್ಯದಲ್ಲಿದೆ. ಒಂದು ಮೂಲದ ಪ್ರಕಾರ ಪಲ್ಸರ್ ಕೂಡ 250 ಸಿಸಿಯಲ್ಲಿ ದೇಶದ ರಸ್ತೆಗಿಳಿಯಲಿದೆಯಂತೆ. 250 ಸಿಸಿಯ ಹ್ಯೊಸಂಗ್ ಬೈಕ್ ಕೂಡ ಅಭಿವೃದ್ಧಿಯ ಹಂತದಲ್ಲಿದೆಯಂತೆ. ಒಟ್ಟಾರೆ 250 ಸಿಸಿ ಬೈಕ್ ಪ್ರಿಯರಿಗೆ ಆಯ್ಕೆಗೆ ಹಲವು ಬೈಕುಗಳು ಲಭ್ಯವಾಗಲಿದೆ.


Click it and Unblock the Notifications








