ಹೀರೊ ಮೊಟೊಕಾರ್ಪ್ ಇಂಪಲ್ಸ್ ಬೈಕ್ ದೀಪಾವಳಿಗೆ ಬರುತ್ತಾ?

ಹೀರೋ ಇಂಪಲ್ಸ್ 150 ಸಿಸಿಯ ಆಕರ್ಷಕ ಬೈಕಾಗಿದೆ. ಇತ್ತೀಚೆಗೆ ಲಂಡನಿನಲ್ಲಿ ಕಂಪನಿಗೆ ನಾಮಕರಣವಾದ ಸಂದರ್ಭದಲ್ಲಿ ರಣಬೀರ್ ಕಪೂರ್ ಇದರ ಪಕ್ಕ ನಿಂತಿದ್ದು ನಿಮಗೆ ನೆನಪಿರಬಹುದು. ಅವರು ಈ ಬೈಕ್ ರಾಯಭಾರಿ. ವಾಹನ ವಿಶ್ಲೇಷಕರ ಪ್ರಕಾರ ಈ ಬೈಕ್ ಈ ದೀಪಾವಳಿ ಸಮಯದಲ್ಲಿ ರಸ್ತೆಗಿಳಿಯಬಹುದಂತೆ!
ಮುಂಜಾಲ್ ನೇತೃತ್ವದ ಹೀರೋ ಗ್ರೂಪ್ ಮತ್ತು ಜಪಾನಿನ ಹೀರೋ ಒಪ್ಪಂದದ ಪ್ರಕಾರ ಮುಂದಿನ ಮೂರು ವರ್ಷಗಳ ಕಾಲ ಜಪಾನ್ ಕಂಪನಿ ತಂತ್ರಜ್ಞಾನ ನೆರವು ನೀಡಲಿದೆ. ಹೀಗಾಗಿ ನೂತನ ಇಂಪಲ್ಸ್ ಬೈಕ್ ಸಂಪೂರ್ಣವಾಗಿ ಹೀರೋ ಮೊಟೊಕಾರ್ಪ್ ಉತ್ಪಾದನೆ ಅನ್ನಲು ಸಾಧ್ಯವಿಲ್ಲ. ಖಂಡಿತಾವಾಗಿಯೂ ಇದರಲ್ಲಿ ಜಪಾನ್ ಕಂಪನಿಯ ತಂತ್ರಜ್ಞಾನ ಇರಲಿದೆ.


Click it and Unblock the Notifications