ಆಗಸ್ಟ್ 9ರಂದು ಕವಾಸಕಿ ನಿಂಜಾ 650ಆರ್ ಆಗಮನ

ನೂತನ ಹೈಎಂಡ್ ಸ್ಪೋರ್ಟ್ಸ್ ಬೈಕ್ 2012 Ninja 650R ಆಗಸ್ಟ್ 9ರಂದು ಅಂದರೆ, ಇನ್ನೊಂದೆರಡುಮೂರು ದಿನಗಳಲ್ಲಿ ರಸ್ತೆಗಿಳಿಯಲಿದೆ. ಇದರ ಎಕ್ಸ್ ಶೋರೂಂ ದರ 5 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.
ನೂತನ 650 ಆರ್ ಬೈಕಿನಲ್ಲಿ ಹೆಚ್ಚುವರಿಯಾಗಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್(ಎಬಿಎಸ್) ಇರಲಿದೆ. ಎಬಿಎಸ್ ಇಲ್ಲದ ಆವೃತ್ತಿಯೂ ಲಭ್ಯವಿರುವ ನಿರೀಕ್ಷೆಯಿದೆ. ಎಬಿಎಸ್ ಅಳವಡಿಸಿರುವುದರಿಂದ ಬೈಕ್ ದರ ಸುಮಾರು 30 ಸಾವಿರ ರು. ದುಬಾರಿಯಾಗಬಹುದು.
ನೂತನ ಬೈಕ್ 650 ಸಿಸಿಯ ಪಾರಾಲಾಲ್ ಟ್ವಿನ್, ಫೋರ್ ಸ್ಟ್ರೋಕ್ ಎಂಜಿನ್ ಹೊಂದಿರಲಿದೆ. ಇದು 72 ಅಶ್ವಶಕ್ತಿ ಮತ್ತು 66ಎನ್ಎಂ ಟಾರ್ಕ್ ಪವರ್ ನೀಡಲಿದೆ. ಹೊಸ ನಿಂಜಾ 650ಆರ್ ಬೈಕ್ ಹ್ಯೊಸಂಗ್ ಜಿಟಿ650ಆರ್, ಜಿಟಿ650ಎನ್ ಮತ್ತು ಡುಕಾಟಿ ಮೊನೊಸ್ಟಾರ್ 796 ಬೈಕ್ ಜೊತೆ ಪೈಪೋಟಿ ನಡೆಸಲಿದೆ.
ಕವಾಸಕಿ ಮೋಟರ್ ಕಂಪನಿಯ ಚಕನ್ ಘಟಕದಲ್ಲಿ 2012ರ ನಿಂಜಾ 650ಆರ್ ಬೈಕನ್ನು ಕಂಪನಿಯು ಅಸೆಂಬಲ್ ಮಾಡಲಿದೆ. ಕಂಪನಿಯು ಈ ಬೈಕನ್ನು ಥೈಲಾಂಡ್ ಸಿಕೆಡಿ ಹಾದಿ ಮೂಲಕ ಆಮದು ಮಾಡಿಕೊಳ್ಳಲಿದೆ.


Click it and Unblock the Notifications








