ಕ್ರಿಸ್ಮಸ್, ಹೊಸ ವರ್ಷ ಸ್ಪೆಷಲ್; ಕವಾಸಕಿಯಿಂದ ಡಮಲ್ ಧಮಾಕಾ

Written By:

ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಸಿದ್ಧತೆ ನಡೆಸುತ್ತಿರುವ ದೇಶದ ಬೈಕ್ ಪ್ರಿಯರಿಗೆ ಜಗತ್ತಿನ ಮುಂಚೂಣಿ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಕವಾಸಕಿ ಡಮಲ್ ಧಮಾಕಾದ ಸಂಭ್ರಮ ನೀಡಿದೆ.

ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್‌ಗೆ 'ವರ್ಷದ ಬೈಕ್ ಪ್ರಶಸ್ತಿ' ಗೌರವ

ಹೌದು, ನಿಮ್ಮ ಊಹೆ ಸರಿಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಅತಿ ಹೆಚ್ಚು ಪ್ರಾಧಾನ್ಯತೆ ಗಿಟ್ಟಿಸಿಕೊಂಡಿದ್ದ ಝಡ್1000 ನೆಕ್ಡ್ ಸ್ಪೋರ್ಟ್ಸ್ ಹಾಗೂ ನಿಂಜಾ 1000 ಫೇರ್ಡ್ ಬೈಕ್‌ಗಳನ್ನು ಕವಾಸಕಿ ಲಾಂಚ್ ಮಾಡಿದೆ. ಪ್ರಸಕ್ತ ಸಾಲಿನಲ್ಲೇ ಮಿಲಾನ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿದ್ದ ಜಗತ್ತಿನ ಅತ್ಯುತ್ತಮ ಬೈಕ್‌ಗಳಲ್ಲಿ ಒಂದಾಗಿರುವ 2014 ಕವಾಸಕಿ ಝಡ್1000 ಪರಿಷ್ಕೃತ ಹೆಡ್‌ಲ್ಯಾಂಪ್, ಹೊಸ ವಿನ್ಯಾಸ ಹಾಗೂ ಎಲ್‌ಇಡಿ ಲ್ಯಾಂಪ್‌ಗಳನ್ನು ಹೊಂದಿದೆ.

ದರ ಮಾಹಿತಿ:

  • ಕವಾಸಕಿ ಝಡ್1000 12.5 ಲಕ್ಷ ರು.
  • ಕವಾಸಕಿ ನಿಂಜಾ 1000 12.5 ಲಕ್ಷ ರು.

ಅದೇ ಹೊತ್ತಿಗೆ ಝಡ್1000ನಲ್ಲಿರುವ 1043ಸಿಸಿ ಲಿಕ್ವಿಡ್ ಕೂಲ್ಡ್‌ಗೆ ಸಮಾನವಾದ ಎಂಜಿನನ್ನು ನಿಂಜಾ 1000 ಆವೃತ್ತಿಯಲ್ಲೂ ಬಳಕೆ ಮಾಡಲಾಗಿದೆ. ಇದು 142 ಪಿಎಸ್ ಪವರ್ (111 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಕ್ರಿಸ್ಮಸ್, ಹೊಸ ವರ್ಷ ಸ್ಪೆಷಲ್; ಕವಾಸಕಿಯಿಂದ ಡಮಲ್ ಧಮಾಕಾ

ಕಂಪ್ಲೀಟ್ ಬಿಲ್ಡ್ ಯುನಿಟ್ ಮುಖಾಂತರ ಕವಾಸಕಿ ಝಡ್1000 ಬೈಕ್ ಭಾರತದಲ್ಲಿ ಮಾರಾಟವಾಗಲಿದೆ. ಪ್ರಸ್ತುತ ಪುಣೆ ಹಾಗೂ ದೆಹಲಿಯ (ಇನ್ನಷ್ಟೇ ತೆರೆಯಬೇಕಾಗಿದೆ) ಎಕ್ಸ್‌ಕ್ಲೂಸಿವ್ ಶೋ ರೂಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ಕ್ರಿಸ್ಮಸ್, ಹೊಸ ವರ್ಷ ಸ್ಪೆಷಲ್; ಕವಾಸಕಿಯಿಂದ ಡಮಲ್ ಧಮಾಕಾ

ಸದ್ಯಕ್ಕೆ ಏಕಮಾತ್ರ ಕಲರ್ ವೆರಿಯಂಟ್‌ನಲ್ಲಿ ಕವಾಸಕಿ ಝಡ್1000 ಲಭ್ಯವಿರುತ್ತದೆ. ನೀವು ಚಿತ್ರದಲ್ಲಿ ನೋಡುತ್ತಿರುವಂತೆಯೇ ಬೂದು, ಹಸಿರುವ ಬಣ್ಣ ಸಂಯೋಜನೆಯನ್ನು ಹೊಂದಿದೆ.

ಕ್ರಿಸ್ಮಸ್, ಹೊಸ ವರ್ಷ ಸ್ಪೆಷಲ್; ಕವಾಸಕಿಯಿಂದ ಡಮಲ್ ಧಮಾಕಾ

ಝಡ್1000 ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದ್ದು ವಿತರಣೆ ಕಾರ್ಯ ಹೊಸ ವರ್ಷದಿಂದ ಆರಂಭವಾಗಲಿದೆ.

ಕ್ರಿಸ್ಮಸ್, ಹೊಸ ವರ್ಷ ಸ್ಪೆಷಲ್; ಕವಾಸಕಿಯಿಂದ ಡಮಲ್ ಧಮಾಕಾ

ಸದ್ಯ ಬಂದಿರುವ ಮಾಹಿತಿಗಳ ಪೈಕಿ ಕವಾಸಕಿಯ ಎರಡು ಕ್ರೀಡಾ ಬೈಕ್‌ಗಳ ಸಾಲಿಗೆ ಇನ್ನೊಂದು ಝಡ್800 ಸ್ಪೋರ್ಟ್ಸ್ ಬೈಕ್ ಸದ್ಯದಲ್ಲೇ ಶಾಮೀಲಾಗಲಿದೆ.

ಕ್ರಿಸ್ಮಸ್, ಹೊಸ ವರ್ಷ ಸ್ಪೆಷಲ್; ಕವಾಸಕಿಯಿಂದ ಡಮಲ್ ಧಮಾಕಾ

ಇನ್ನೊಂದೆಡೆ ನಿಂಜಾ 300, ನಿಂಜಾ 650, ಝಡ್‌ಎಕ್ಸ್10ಆರ್, ಝಡ್‌ಎಕ್ಸ್14ಆರ್ ಮತ್ತು ಝಡ್1000 ಸಾಲಿಗೆ ಇನ್ನೊಂದು ಬೈಕ್ ಸೇರ್ಪಡೆಗೊಳಿಸಿರುವ ಕವಾಸಕಿ ನಿಂಜಾ 1000 ಮೂಲಕ ಹೊಸ ಅಲೆಯನ್ನಿಬ್ಬಿಸುವ ನಿರೀಕ್ಷೆಯಲ್ಲಿದೆ.

ಕ್ರಿಸ್ಮಸ್, ಹೊಸ ವರ್ಷ ಸ್ಪೆಷಲ್; ಕವಾಸಕಿಯಿಂದ ಡಮಲ್ ಧಮಾಕಾ

ತನ್ನ ಟ್ರೇಡ್ ಮಾರ್ಕ್ ಕಲರ್ ಲೈಮ್ ಗ್ರೀನ್ ಬಣ್ಣದಲ್ಲಿ ಆಗಮನಾಗಿರುವ ಕವಾಸಕಿ ನಿಂಜಾ 1000 ಮತ್ತು ಝಡ್1000 ನಡುವಣ ಪ್ರಮುಖ ವ್ಯತ್ಯಾವವೆಂದರೆ ಮೊದಲನೆಯದ್ದು ಫೇರ್ಡ್ ಹಾಗೂ ಎರಡನೇಯದ್ದು ನೇಕ್ಡ್ ವಿನ್ಯಾಸವನ್ನು ಪಡೆದುಕೊಂಡಿದೆ.

English summary
Kawasaki has at last taken the covers off of its Z1000 naked street sports bike & Ninja 1000 Launched in India.
Story first published: Tuesday, December 24, 2013, 9:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark