ಕವಾಸಕಿ ನಿಂಜಾ ಎಚ್2 ಬುಕ್ಕಿಂಗ್ ಆರಂಭ

Written By:

ಜಾಗತಿಕ ಆಗು ಹೋಗುಗಳನ್ನು ಸೂಕ್ಷ್ಮವಾಗಿ ನಿರೀಕ್ಷಿಸುತ್ತಿರುವ ಬೈಕ್ ಪ್ರಿಯರಿಗಂತೂ ಕವಾಸಕಿ ನಿಂಜಾ ಎಚ್2 ಬಗ್ಗೆ ಸ್ಪಷ್ಟವಾಗಿ ಗೊತ್ತಿರಬಹುದು. ಈ ಸೂಪರ್ ಬೈಕ್ ಮುಂದಿನ ವರ್ಷ ಭಾರತ ಮಾರುಕಟ್ಟೆ ಪ್ರವೇಶಿಸುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದೆ.

ಈಗ ಬಂದಿರುವ ಮಾಹಿತಿಗಳ ಪ್ರಕಾರ ಕವಾಸಕಿ ನಿಂಜಾ ಎಚ್2 ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭವಾಗಿದೆ. ಆದರೆ ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಪ್ರವೇಶಿಸುವ ಸಾಧ್ಯತೆಯಿದೆ.

kawasaki ninja h2

ಇದು ಬೆಲೆಯಲ್ಲೂ ದುಬಾರಿಯಾಗಲು ಕಾರಣವಾಗಿದೆ. ಕವಾಸಕಿ ನಿಂಜಾ ಎಚ್2 ಮುಂಬೈ ಆನ್ ರೋಡ್ ಬೆಲೆ 32 ಲಕ್ಷ ರು.ಗಳಷ್ಟು ಅಂದಾಜಿಸಲಾಗಿದೆ. ಇದರಂತೆ 10 ಲಕ್ಷ ರು.ಗಳಲ್ಲಿ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ.

ಸೂಪರ್ ಬೈಕ್ ಭಾರತದಲ್ಲಿ ನಿಧಾನವಾಗಿ ಗತಿ ಪಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಾರಾಟ ಸಂಖ್ಯೆಯಲ್ಲಿ ಹೆಚ್ಚಾಗುತ್ತಲೇ ಇದೆ. ಈ ಎಲ್ಲದರ ಹಿನ್ನಲೆಯಲ್ಲಿ ಜಪಾನ್ ಮೂಲದ ಕವಾಸಕಿ ಸಂಸ್ಥೆ ಕೂಡಾ ದೇಶದತ್ತ ಹೆಚ್ಚಿನ ಚಿತ್ತ ಹಾಯಿಸಿದೆ.

ಎಚ್‌2ಆರ್ ಹೈಪರ್ ಬೈಕ್‌ನ ಸ್ಟ್ರೀಟ್ ವರ್ಷನ್ ಆಗಿರುವ ಎಚ್2 ಮಾದರಿ ಹೆಚ್ಚು ಗಮನ ಸೆಳೆಯುವಲ್ಲಿ ನಿರೀಕ್ಷೆಯಿದೆ. ಮುಂದಿನ ಪೀಳಿಗೆಯ ಮಾದರಿಗಳನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ಹೈ ಎಂಡ್ ಬೈಕ್‌ಗಳಲ್ಲಿ ಯಮಹಾ ಹಾಗೂ ಹೋಂಡಾ ಹಿಮ್ಮೆಟ್ಟಿಸುವುದು ಕವಾಸಕಿ ಗುರಿಯಾಗಿರಲಿದೆ.

English summary
Kawasaki dealers are accepting bookings for new Ninja H2 hyperbike in India. 
Story first published: Friday, December 26, 2014, 12:06 [IST]
Please Wait while comments are loading...

Latest Photos