ಅಸ್ಥಿಪಂಜರದ ಭೂತ ಬೈಕಲ್ಲಿ "ಅಣ್ಣಾ" ಪುನೀತ್ ಫೈಟ್ ಮೋಡಿ

ಕನ್ನಡ ಚಿತ್ರರಂಗದಲ್ಲೂ ಇಂತಹ ವಿಶೇಷ ವಿಚಿತ್ರ ಬೈಕುಗಳನ್ನು ಬಳಸಿಕೊಳ್ಳುವ ಟ್ರೆಂಡ್ ಹೆಚ್ಚಾಗುತ್ತಿದೆ. ಇದಕ್ಕೆ ಲೇಟೆಸ್ಟ್ ನಿದರ್ಶನ "ಅಣ್ಣಾಬಾಂಡ್". ಪುನೀತ್ ರಾಜ್ ಕುಮಾರ್, ಪ್ರಿಯಾಮಣಿ, ನಿಧಿ ಸುಬ್ಬಯ್ಯ ತಾರಾಗಣದ ಈ ಚಿತ್ರದಲ್ಲಿ ಅಸ್ಥಿಪಂಜರ ಮುಖದ "ಘೋಸ್ಟ್" ಬೈಕನ್ನು ಬಳಸಿಕೊಳ್ಳಲಾಗಿದೆ.
ಈ ಘೋಸ್ಟ್ ಬೈಕ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೋಷ್ ನಿಂದ ರೈಡ್ ಮಾಡುವ, ಫೈಟ್ ಮಾಡುವ, ಪಿಸ್ತೂಲ್ ಹಿಡಿದು ನಿಂತಿರುವ ಚಿತ್ರಗಳು ಜನರಲ್ಲಿ ಸಾಕಷ್ಟು ಹೈಪ್ ಉಂಟುಮಾಡಿರುವುದು ನಿಜ. ಒಟ್ಟಾರೆ ಈ ಬೈಕ್ ಫೈಟಿಂಗ್ ಸೀನ್ ಗಳಲ್ಲಿ ಕಾಣಿಸಿಕೊಳ್ಳುವುದು ಖಾತ್ರಿಯಾಗಿದೆ. ಜಾಕಿ ಚಿತ್ರದಲ್ಲಿ ಪುಟ್ಟ ಬೈಕ್ ನಲ್ಲಿ ಪುನೀತ್ ರೈಡ್ ಮಾಡಿದ್ದರು.
ಅಣ್ಣಾಬಾಂಡ್ ಚಿತ್ರದಲ್ಲಿ ಬಳಸಿರುವ ಬೈಕ್ ಕುರಿತು ಇನ್ನೂ ಹೆಚ್ಚಿನ ಮಾಹಿತಿ ದೊರಕಿಲ್ಲ. ಆದರೆ ವಿನ್ಯಾಸ ನೋಡಿದರೆ ಇದು ರಾಯಲ್ ಎನ್ ಫೀಲ್ಡ್ ಅಥವಾ ಹರ್ಲಿ ಡೇವಿಡ್ ಸನ್ ಬೈಕ್ ಎಂದು ಊಹಿಸಬಹುದು. ಈ ಬೈಕ್ ವಿನ್ಯಾಸಕ್ಕೆ ತೆಗೆದುಕೊಂಡದ್ದು ಕೇವಲ 16 ದಿನವಂತೆ. ಈ ಬೈಕಿನ ಕುರಿತು ಫೇಸ್ ಬುಕ್ ಪುಟದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಹೆಸರೇ ಇಲ್ಲದ ಈ ವಿಚಿತ್ರ ಬೈಕಿಗೆ ಘೋಸ್ಟ್ ಬೈಕ್ ಎಂದು ಹೆಸರಿಟ್ಟರೆ ರೋಲ್ಸ್ ರಾಯ್ಸ್ ಘೋಸ್ಟ್ ಕೋಪಿಸಿಕೊಳ್ಳುವುದೋ ಗೊತ್ತಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








