ಪಲ್ಸರ್ ಸಿರೀಸ್‌ಗೆ ಮತ್ತೊಂದು ಸೇರ್ಪಡೆ; 2013ರಲ್ಲಿ ಲಾಂಚ್
ದೇಶದ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ, ಮುಂದಿನ ವರ್ಷದಲ್ಲಿ ನೂತನ ಪಲ್ಸರ್ ಬೈಕ್ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ. ಪಲ್ಸರ್ ಸಿರೀಸ್‌ನಲ್ಲಿ ಇನ್ನೊಂದು ಅವತವರಣಿಕೆಯಾಗಲಿರುವ ನೂತನ ಬೈಕ್ 375 ಸಿಸಿ ಎಂಜಿನ್ ಹೊಂದಿರುವ ಸಾಧ್ಯತೆಗಳಿವೆ.
ಬಜಾಜ್ ಆಟೋದಿಂದ ಇಂತಹದೊಂದು ಸುದ್ದಿ ಬಂದಿರುವಂತೆಯೇ ಎಲ್ಲ ಪಲ್ಸರ್ ಪ್ರಿಯರು ನೂತನ ಬೈಕ್‌ಗಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ 2013ನೇ ಸಾಲಿನ ಮಧ್ಯಂತರ ಅವಧಿಯಲ್ಲಿ ಬೈಕ್ ರಸ್ತೆಗಿಳಿಯುವ ನಿರೀಕ್ಷೆಯಿದೆ.
ಕೆಟಿಎಂ ಡ್ಯೂಕ್ 390 ರಿಲೀಸ್ ಆದ ಬಳಿಕ ಬಜಾಜ್ ತನ್ನ ನೂತನ ಆವೃತ್ತಿಯ ಪಲ್ಸರ್ ಬಿಡುಗಡೆಗೊಳಿಸಲಿದೆ. ಹೆಚ್ಚಿನ ಇಂಧನ ದಕ್ಷತೆ, ಆಕರ್ಷಕ ಲುಕ್ ಸಹಿತಿ ಅತ್ಯಾಧುನಿಕ ಫೀಚರ್‌ಗಳೊಂದಿಗೆ ಗ್ರಾಹಕರನ್ನು ತಲುಪಲಿದೆ. ಪಲ್ಸರ್ ಸಿರೀಸ್‌ನ ನೂತನ ಬೈಕ್ ಸಹ ಪ್ರಮುಖವಾಗಿ ಯುವ ಜನಾಂಗವನ್ನೇ ಗುರಿಯಾಗಿರಿಸಿಕೊಳ್ಳಲಿದೆ.
ಕೆಟಿಎಂ ಡ್ಯೂಕ್ ದರ ಹೋಲಿಸಿದರೆ ಪಲ್ಸರ್ ಶೇಕಡಾ 25ರಷ್ಟು ಅಗ್ಗವಾಗಿರಲಿದ್ದು, ಅಂದರೆ 1.5 ಲಕ್ಷಕ್ಕೆ ಗ್ರಾಹಕರ ಕೈಸೇರುವ ಸಾಧ್ಯತೆಯಗಳಿವೆ. ಪಲ್ಸರ್ ಸಿರೀಸ್‌ನಲ್ಲಿ ಈ ವರೆಗೆ ತಯಾರು ಮಾಡಲಾದ ಬೈಕ್‌ಗಳ ಪೈಕಿ ನೂತನ ಪಲ್ಸರ್ ಅತ್ಯಂತ ಶಕ್ತಿಶಾಲಿಯಾಗಿರಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.


Click it and Unblock the Notifications









