ಬಜಾಜ್ ಸೂಪರ್ ಬೈಕುಗಳಿಗೆ ಸುಸ್ವಾಗತ
ದೇಶದ ರಸ್ತೆಗೆ ಇನ್ನಷ್ಟು ಕೆಟಿಎಂ ಸೂಪರ್ ಬೈಕುಗಳನ್ನು ಪರಿಚಯಿಸಲು ಬಜಾಜ್ ಯೋಜಿಸಿದೆ. ದೇಶದಲ್ಲಿ ಸೂಪರ್ ಬೈಕ್ ಸೆಗ್ಮೆಂಟಿನಲ್ಲಿ ತನ್ನ ಪಾರಮ್ಯವನ್ನು ಹೆಚ್ಚಿಸಲು ಕಂಪನಿ ನಿರ್ಧರಿಸಿದೆ. ಕಂಪನಿಯು ಇತ್ತೀಚೆಗೆ ಕೆಟಿಎಂ ಡ್ಯೂಕ್200 ಎಂಬ ಬೈಕ್ ಪರಿಚಯಿಸಿತ್ತು. ಈಗ ಪ್ರತಿತಿಂಗಳು ಸುಮಾರು 1 ಸಾವಿರದಷ್ಟು ಕೆಟಿಎಂ ಡ್ಯೂಕ್ 200 ಬೈಕ್ ಮಾರಾಟವಾಗುತ್ತಿದೆ.
ಬಜಾಜ್ ಆಟೋ ಕಂಪನಿಯು ಆಸ್ಟ್ರೇಲಿಯಾದ ಕೆಟಿಎಂ ಕಂಪನಿಯ ಶೇಕಡ 47ರಷ್ಟು ಪಾಲು ಸ್ವಾಧೀನಪಡಿಸಿಕೊಂಡಿದೆ. ಕಂಪನಿಯು 2007ರಲ್ಲಿ ಇಷ್ಟು ಪಾಲು ಸ್ವಾಧೀನಪಡಿಸಿಕೊಂಡಿದ್ದು, ಜಂಟಿ ಉದ್ಯಮದ ಮೂಲಕ ಹೊಸ ಹೊಸ ಬೈಕುಗಳನ್ನು ಪರಿಚಯಿಸುತ್ತಿವೆ. ಜಂಟಿ ಉದ್ಯಮದ ಫಲವಾಗಿ ಪ್ರಥಮ ಉತ್ಪನ್ನ ಕೆಟಿಎಂ ಡ್ಯೂಕ್ 125 ರಸ್ತೆಗಿಳಿದಿತ್ತು. ಇದನ್ನು ಬಜಾಜ್ ದೇಶದಲ್ಲಿ ಉತ್ಪಾದಿಸಿ ಯುರೋಪ್ ಮತ್ತು ಜಪಾನ್ ದೇಶಗಳಿಗೆ ರಫ್ತು ಮಾಡುತ್ತಿದೆ.
ಯುರೋಪ್ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಕೆಟಿಎಂ ಕಂಪನಿಯು ಬಿಎಂಡಬ್ಲ್ಯು ಮೋಟರ್ಡ್ ನಂತರದ ಅಗ್ರ ಕಂಪನಿಯಾಗಿದೆ. ಕಂಪನಿಯು ಸೂಪರ್ ಬೈಕುಗಳನ್ನು ಅಭಿವೃದ್ಧಿಪಡಿಸಲು ಅಡ್ವಾನ್ಸಡ್ ತಂತ್ರಜ್ಞಾನಕ್ಕಾಗಿ ಬಜಾಜ್ ಜೊತೆ ಮೈತ್ರಿ ಮಾಡಿಕೊಂಡಿತ್ತು.
ಬಜಾಜ್ ಮತ್ತು ಕೆಟಿಎಂ ಜಂಟಿ ಕಂಪನಿಗಳೆರಡು 125 ಸಿಸಿಯಿಂದ 375 ಸಿಸಿಯ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈಗಾಗಲೇ ಎರಡು ಬೈಕ್ ಆವೃತ್ತಿಗಳನ್ನು ದೇಶಕ್ಕೆ ಪರಿಚಯಿಸಿದೆ. ಇದೀಗ ಕಂಪನಿಯು ಹೆಚ್ಚು ಶಕ್ತಿಶಾಲಿ ಸೂಪರ್ ಬೈಕುಗಳನ್ನು ಪರಿಚಯಿಸಲು ಯೋಜಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕೆಟಿಎಂ ಕಂಪನಿಯು ಸಾವಿರ ಸಿಸಿಗಿಂತಲೂ ಅಧಿಕ ಶಕ್ತಿಶಾಲಿ ಸೂಪರ್ ಬೈಕುಗಳನ್ನು ಮಾರಾಟ ಮಾಡುತ್ತಿದೆ.


Click it and Unblock the Notifications









