ಬಜಾಜ್ ಹೊಸ ಪಲ್ಸರ್ ಆಗಮನಕ್ಕೆ ಮಹೂರ್ತ

ನೂತನ ಪಲ್ಸರ್ 200ಎನ್ಎಸ್ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲ್ಪಿಟ್ಟಿತ್ತು. ಇದರೊಂದಿಗೆ ಕಂಪನಿಯು ಸುಮಾರು 350-375 ಸಿಸಿಯ ಪಲ್ಸರ್ ಬೈಕನ್ನೂ ಪರಿಚಯಿಸುವ ಯೋಜನೆ ಹೊಂದಿದೆ. ಇದಕ್ಕೆ ಇನ್ನೂ ಮಹೂರ್ತ ನಿಗದಿಪಡಿಸಲಾಗಿಲ್ಲ.
ಸದ್ಯದ ಕಮ್ಯೂಟರ್ ಬೈಕ್ ಸೆಗ್ಮೆಂಟಿನಿಂದ ಹೆಚ್ಚು ಹಾರ್ಸ್ ಪವರ್ ಬೈಕುಗಳತ್ತ ಬಜಾಜ್ ಪ್ರಯಾಣ ಬೆಳೆಸುತ್ತಿದೆ. ಇದಕ್ಕೆ ಪೂರ್ವ ಭಾವಿಯಾಗಿ ನೂತನ ಪಲ್ಸರ್ 200ಎನ್ಎಸ್ ರಸ್ತೆಗಿಳಿಸಲು ಕಂಪನಿ ನಿರ್ಧರಿಸಿದೆ. ನೂತನ ಬೈಕ್ ದರ ಸುಮಾರು 1 ಲಕ್ಷ ರುಪಾಯಿಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಬಜಾಜ್ ಭವಿಷ್ಯದ ತಂತ್ರಜ್ಞಾನಗಳನ್ನು ನೂತನ ಬೈಕಿಗೆ ಅಳವಡಿಸಿರುವ ನಿರೀಕ್ಷೆಯಿದೆ.
ಹೊಸ ಪಲ್ಸರ್ ಅತ್ಯುತ್ತಮ ಕಾರ್ಯನಿರ್ವಹಣೆ, ಇಂಧನ ದಕ್ಷತೆ ಹೊಂದಿರಲಿದೆ. ಯಾಕೆಂದರೆ ಈ ಬೈಕ್ ಡಿಟಿಎಸ್-ಐ ಎಂಜಿನ್ ನೂತನ ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ ಹೊಂದಿರಲಿದೆ. ಇದರ 199.5 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಗರಿಷ್ಠ 23.17 ಅಶ್ವಶಕ್ತಿ ಮತ್ತು 18.3 ಎನ್ಎಂ ಟಾರ್ಕ್ ಪವರ್ ನೀಡಲಿದೆ.
ನೂತನ ಪಲ್ಸರ್ ಬೈಕಿನಲ್ಲಿ ಗಂಟೆಗೆ ಗರಿಷ್ಠ 136 ಕಿ.ಮೀ. ವೇಗದಲ್ಲಿ ಸಾಗಬಹುದೆಂದು ಮೂಲಗಳು ಹೇಳಿವೆ. ಇದರಲ್ಲಿ ಕೇವಲ 10 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಈ ಬೈಕಿನ ಬುಕ್ಕಿಂಗ್ ತಕ್ಷಣ ಆರಂಭವಾಗುವ ನಿರೀಕ್ಷೆಯಿದೆ. ಆದರೆ ಡೆಲಿವರಿಗೆ ತಿಂಗಳಾಂತ್ಯಕ್ಕೆ ಕಾಯಬೇಕಾದೀತು ಎಂದು ಮೂಲಗಳು ಮಾಹಿತಿ ನೀಡಿವೆ.


Click it and Unblock the Notifications








