ಬಜಾಜ್ ಸಣ್ಣ ಬಂಡಿ "ಆರ್‌ಇ60" ಯಾವಾಗ ಬರುತ್ತೆ?

ಬಜಾಜ್ ನೂತನ ಕಾರು ಆಟೋ ರಿಕ್ಷಾಗಳಿಗೆ ಬದಲಿಯಾಗಿ ಬಂದಂತೆ ಕಾಣುತ್ತದೆ. ಇದನ್ನೇ ಮುಂದಿನ ದಿನಗಳಲ್ಲಿ ರಿಕ್ಷಾದಂತೆ ಸಾರ್ವಜನಿಕ ಸಾರಿಗೆಗೂ ಬಳಸಬಹುದು. ನೂತನ ಕಾರಿನ ಕುರಿತು ಬಜಾಜ್ ಬಾಸ್ ರಾಜೀವ್ ಬಜಾಜ್ ಕೂಡ "ಇದು ಕಾರಲ್ಲ, ತ್ರಿಚಕ್ರ ವಾಹನ ಸಾಮರ್ಥ್ಯದ ನಾಲ್ಕು ಚಕ್ರದ ಬಂಡಿ" ಎಂದು ಖಚಿತಪಡಿಸಿದ್ದಾರೆ.
ನೂತನ RE60 ನಾಲ್ಕು ಸಿಟ್ ಹೊಂದಿದ್ದು, ಆಟೋ ರಿಕ್ಷಾಗಳಿಗಿಂತ ಹೆಚ್ಚು ಆರಾಮದಾಯಕತೆ ನೀಡುತ್ತದೆ. ಈ ಪುಟ್ಟ ಕಾರು 200 ಸಿಸಿಯ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 20 ಹಾರ್ಸ್ ಪವರ್ ನೀಡುತ್ತದೆ.
ಈ ಕಾರು ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 35ರಿಂದ 40 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಬಜಾಜ್ ಹೇಳಿದೆ. ಇದರ ದರ ಸುಮಾರು 1 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ. ಇದರ ನಿರ್ವಹಣಾ ವೆಚ್ಚ ಕೂಡ ಕಡಿಮೆಯಂತೆ. ಇದೇ ಆವೃತ್ತಿಯ ಗೂಡ್ಸ್ ಕ್ಯಾರಿಯರ್ ಆವೃತ್ತಿಯನ್ನೂ ಪರಿಚಯಿಸುವ ಯೋಜನೆಯೂ ಕಂಪನಿಗಿದೆಯಂತೆ!


Click it and Unblock the Notifications








