ಬಜಾಜ್ ನಿಂದ ಪಲ್ಸರ್ 180 ಡಿಟಿಎಸ್ಐ ಉತ್ಪಾದನೆ ಸ್ಥಗಿತ!

ಬಜಾಜ್ ಆಟೋ ಕಂಪನಿಯ ಪಲ್ಸರ್ ಮತ್ತು ಡಿಸ್ಕವರ್ ಜನಪ್ರಿಯ ಬೈಕು ಬ್ರಾಂಡುಗಳು. ಇದರಲ್ಲಿ ಪಲ್ಸರ್ ಬೈಕ್ ಹಲವು ಆವೃತ್ತಿಗಳಲ್ಲಿ ದೊರಕುತ್ತಿದೆ. ಅಂದರೆ 135 ಸಿಸಿಯಿಂದ ಹಿಡಿದು, 150 ಸಿಸಿ, 180 ಸಿಸಿ ಮತ್ತು 220 ಸಿಸಿ ಆಯ್ಕೆಗಳಲ್ಲಿ ಪಲ್ಸರ್ ಬೈಕ್ ಖರೀದಿಸಬಹುದು. ಇದರೊಂದಿಗೆ ಶೀಘ್ರದಲ್ಲಿ ಪಲ್ಸರ್ 200ಎನ್ಎಸ್ ರಸ್ತೆಗಿಳಿಯಲು ಸಿದ್ಧವಾಗಿದೆ.

ಹೀಗೆ ಹತ್ತು ಹಲವು ಸಿಸಿ ಪಲ್ಸರ್ ಬೈಕುಗಳಿರುವುದರಿಂದ ಕಂಪನಿಗೆ ಏನೋ ತಳಮಳ ಶುರುವಾಗಿದೆ. ವರದಿಗಳ ಪ್ರಕಾರ ಬಜಾಜ್ ಆಟೋ ಕಂಪನಿಯು ಪಲ್ಸರ್ 180 ಡಿಟಿಎಸ್ಐ ಬೈಕ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಎಂದಿವೆ. ಈ ಕುರಿತು ಕಂಪನಿಯ ಕಡೆಯಿಂದ ಯಾವುದೇ ಖಚಿತ ಮಾಹಿತಿ ದೊರಕಿಲ್ಲ.

ಪಲ್ಸರ್ ಬ್ರಾಂಡುಗಳಲ್ಲಿ 150ಸಿಸಿ ಬೈಕಿಗೆ ಅತ್ಯಧಿಕ ಬೇಡಿಕೆಯಿದೆ. ಎರಡನೇ ಸ್ಥಾನದಲ್ಲಿ ಪಲ್ಸರ್ 135ಸಿಸಿ ಬೈಕಿದೆ. ಹೆಚ್ಚಿನ ಜನರು 180ಸಿಸಿ ಪಲ್ಸರಿಗಿಂತ 220 ಸಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದರೆ. ಇದರಿಂದಾಗಿ ಪಲ್ಸರ್ 180 ಡಿಟಿಎಸ್ಐ ಕೊಳ್ಳುವರು ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ಕಂಪನಿಯು ಈ ಬೈಕ್ ಉತ್ಪಾದನೆ ಸ್ಥಗಿತಗೊಳಿಸುವ ಯೋಚನೆಯಲ್ಲಿದೆ ಎನ್ನಲಾಗಿದೆ.

ಇನ್ನಷ್ಟು ಪವರ್ ಮತ್ತು ಸ್ಟೈಲ್ ಆಯ್ಕೆಯಲ್ಲಿ ಪಲ್ಸರ್ ಕುಟುಂಬವನ್ನು ದೊಡ್ಡದಾಗಿಸುವುದಾಗಿ ಬಜಾಜ್ ಆಟೋ ಇತ್ತೀಚೆಗೆ ಹೇಳಿತ್ತು. ಜೊತೆಗೆ ಪಲ್ಸರ್ 200ಎನ್ಎಸ್ ಹೊರತರುವ ಸೂಚನೆ ನೀಡಿತ್ತು. ಆದರೆ ಪಲ್ಸರ್ 180 ಮತ್ತು 220 ಸಿಸಿ ಬೈಕುಗಳಿಗಿಂತ ಪಲ್ಸರ್ 200ಎನ್ಎಸ್ ಭಿನ್ನ ಎನ್ನಲಾಗಿದೆ.

ಪಲ್ಸರ್ 220ಸಿಸಿ ಬೈಕ್ ಉತ್ಪಾದನೆ ಮುಂದುವರೆಸುವ ಕುರಿತೂ ಸಂದೇಹಗಳಿವೆ. ಯಾಕೆಂದರೆ ಕಂಪನಿಯು ಪಲ್ಸರ್ 200ಎನ್ಎಸ್ ಪರಿಚಯಿಸಿದರೆ ಆ ಬೈಕಿಗೆ 220 ಸಿಸಿಯೇ ಪ್ರಮುಖ ಎದುರಾಳಿಯಾಗುವ ನಿರೀಕ್ಷೆಯಿದೆ. ಪಲ್ಸರ್ ಕುಟುಂಬದಲ್ಲಿ 135ಎಲ್ಎಸ್, ಪಲ್ಸರ್ 150, ಪಲ್ಸರ್ 180 ಡಿಟಿಎಸ್ಐ ಮತ್ತು ಪಲ್ಸರ್ 220 ಡಿಟಿಎಸ್ಐ ಬೈಕುಗಳಿವೆ. ಹೊಸದಾಗಿ ಪಲ್ಸರ್ 200ಎನ್ ಎಸ್ ಬರಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Wednesday, March 14, 2012, 13:23 [IST]
English summary
There are speculations that the Pulsar 180 DTSi is on its last legs. The Pulsar 150 has been the best selling Pulsar followed by the Pulsar 135. Many people prefer to opt for the 220 rather than the 180. Reports say Bajaj might prefer to retain the 220 after the launch of the 200NS but not the 180 DTSi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+